May 22, 2022

Newsnap Kannada

The World at your finger tips!

manuswamy

ಮುನುಸ್ವಾಮಿ ಬಲಿ ಪಡೆದ ಕಾಲಿವುಡ್ ನಟ ಸಿಂಬು ಕಾರು

Spread the love

ಕಾಲಿವುಡ್ ಖ್ಯಾತ ನಟ ಸಿಂಬು ಒಡೆತನದ ಐಶಾರಾಮಿ ಕಾರು ಮಾ.18 ರಂದು ವ್ಯಕ್ತಿಯೋರ್ವನನ್ನು ಬಲಿ ಪಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಅಪಘಾತಕ್ಕೀಡಾದ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದೆ, ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿ ಮುನುಸ್ವಾಮಿ ಎಂದು ಗುರುತಿಸಲಾಗಿದೆ 70ರ ವಯಸ್ಸಿನ ಇವರು ತೇನಂಪೇಟೆ ಪ್ರದೇಶದಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದರು. ಕೆಲವೇ ದಿನಗಳ ಹಿಂದೆ ಅವರಿಗೆ ಕಾಲಿಗೆ ಪೆಟ್ಟಾಗಿದ್ದರಿಂದ, ತೆವಳುತ್ತಾ ರಸ್ತೆ ದಾಟುತ್ತಿದ್ದರು ಎನ್ನಲಾಗುತ್ತಿದೆ. ಈ ಸಂದರ್ಭದಲ್ಲಿ ಸಿಂಬು ಹೆಸರಿನಲ್ಲಿರುವ ಕಾರು ಮುನುಸ್ವಾಮಿ ಮೇಲೆ ಹರಿದಿದೆ.

ಪರಿಣಾಮ ತೀವ್ರ ರಕ್ತಸ್ರಾವವಾಗಿದೆ. ಕೂಡಲೇ ಸ್ಥಳಿಯರು ಅವರನ್ನು ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ಕೊಡಿಸಲು ಮುಂದಾಗಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಅಪಘಾತಕ್ಕೀಡಾದ ತಕ್ಷಣವೇ ಕಾರಿನಲ್ಲಿದ್ದವರು ಪರಾರಿ ಆಗಿದ್ದಾರೆ. ಹಾಗಾಗಿ ಯಾರೆಲ್ಲ ಕಾರಿನಲ್ಲಿ ಇದ್ದರು ಎಂದು ಇನ್ನೂ ಪತ್ತೆ ಆಗಿಲ್ಲ. ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಚಾಲಕ ಸೆಲ್ವಂ ಎಂಬುವವರನ್ನು ಪೊಲೀಸ್ ಅಧಿಕಾರಿಗಳು ಬಂಧಿಸಿದ್ದು, ಹಚ್ಚಿನ ವಿಚಾರಣೆ ನಡೆಸಿದ್ದಾರೆ.

error: Content is protected !!