ಕೇಂದ್ರದ ಮಾಜಿ ಸಚಿವ ದಿವಂಗತ ಅನಂತ್ಕುಮಾರ್ ಪುತ್ರಿ ವಿಜೇತಾ ಅನಂತ್ಕುಮಾರ್ ಜೆಡಿಎಸ್ ಹೊಗಳಿ ಟ್ವೀಟ್ ಮಾಡಿದ್ದಾರೆ.
ಈ ಟ್ವೀಟ್ ರಾಜಕೀಯ ವಲಯದಲ್ಲಿ ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ. ಕರ್ನಾಟಕ ರಾಜಕಾರಣ ಯಾಕೆ ಇಷ್ಟೊಂದು ಆಸಕ್ತಿದಾಯಕವಾಗಿದೆ ಎಂದು ಪ್ರಶ್ನೆ ಮಾಡಿದ್ದಾರೆ.
ಜೆಡಿಎಸ್ ಇಂದಿಗೂ ತುಂಬಾನೇ ಸ್ಟ್ರಾಂಗ್ ಆಗಿರುವ ರಾಜಕೀಯ ಪಕ್ಷವಾಗಿದೆ ಎಂದು ಬಣ್ಣಿಸಿದ್ದಾರೆ.
ವಿಜೇತಾ ಟ್ವೀಟ್ಗೆ ಅಮನ್ ಎನ್ನುವ ಮತ್ತೊಬ್ಬ ಟ್ವಿಟರ್ ಯೂಸರ್ ಹೌದು, ಹೌದು 1 ಅಥವಾ 2 ಲೋಕಸಭೆ ಕ್ಷೇತ್ರದಲ್ಲಿ ಮಾತ್ರ ಎಂದು ರಿಪ್ಲೈ ಮಾಡಿದರು.
ಈ ಟ್ವಿಟ್ ಗೆ ಪ್ರತಿಕ್ರಿಯೆ ನೀಡಿರುವ ವಿಜೇತಾ, ಎಲ್ಲವನ್ನೂ ಚುನಾವಣೆಯ ಗೆಲುವಿನ ಮೂಲಕ ಅಳೆಯಲು ಸಾಧ್ಯವಿಲ್ಲ ಎಂದಿದ್ದಾರೆ.
ವಿಜೇತ ಅವರ ಈ ಟ್ವೀಟ್ ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ. ಬಹುಶಃ ನಿನ್ನೆಯಷ್ಟೇ ಬಸವರಾಜ್ ಬೊಮ್ಮಾಯಿ ಮೂಲತಃ ಜನತಾ ಪರಿವಾರದಿಂದ ಬಂದವರು. ಹೀಗಾಗಿ ಅವರು ಈ ರೀತಿಯ ಟ್ವೀಟ್ ಮಾಡಿದ್ದಾರೆಯೇ ಅನ್ನೋ ಕುತೂಹಲ ಮೂಡಿಸಿದೆ.
ರಾಜ್ಯ ಕಂಡ ಅನೇಕ ಮುಖ್ಯಮಂತ್ರಿಗಳ ಹಿನ್ನೆಲೆ ಜನತಾ ಪರಿವಾರವಾಗಿದೆ. ರಾಮಕೃಷ್ಣ ಹೆಗಡೆ, ಎಸ್ಆರ್ ಬೊಮ್ಮಾಯಿ, ಮ ದೇವೇಗೌಡ, ಜೆಹೆಚ್ ಪಾಟೀಲ್, ಸಿದ್ದರಾಮಯ್ಯ, ಬಸವರಾಜ್ ಬೊಮ್ಮಾಯಿ ಅವರ ಮೂಲ ರಾಜಕಾರಣ ಜನತಾ ಪರಿವಾರವಾಗಿದೆ.
ವಿಜೇತ ಅವರು ಬಿಜೆಪಿ ಹಿನ್ನೆಲೆಯುಳ್ಳವರು. ಅವರ ತಂದೆ ಅನಂತ್ಕುಮಾರ್ ಬಿಜೆಪಿ ಪ್ರಮುಖ ನಾಯಕರಲ್ಲಿ ಒಬ್ಬರಾಗಿದ್ದವರು. ಅವರ ತಾಯಿ ತೇಜಸ್ವಿನಿ ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿದ್ದಾರೆ
- ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
- IDBI ಬ್ಯಾಂಕಿನಲ್ಲಿ 600 ಹುದ್ದೆಗಳ ನೇಮಕಾತಿ – 2024
- ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ
- ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ: 25 ಕಡೆಗಳಲ್ಲಿ ಪರಿಶೀಲನೆ
- ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಗೊ.ರು.ಚ ಆಯ್ಕೆ
More Stories
ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
IDBI ಬ್ಯಾಂಕಿನಲ್ಲಿ 600 ಹುದ್ದೆಗಳ ನೇಮಕಾತಿ – 2024
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ