ಶ್ರೀರಂಗಪಟ್ಟಣದ ಮಸೀದಿ ದ್ವಂಸ ಹನುಮ ಮಂದಿರ ನಿರ್ಮಾಣ : ವಿವಾದಾತ್ಮಕ ಹೇಳಿಕೆ: ಕಾಳಿ ಸ್ವಾಮಿ ಬಂಧನ

Team Newsnap
1 Min Read

ಶ್ರೀರಂಗಪಟ್ಟಣದ ಮಸೀದಿ ದ್ವಂಸ ಮಾಡಿ ಅಯೋಧ್ಯೆ ರಾಮ ಮಂದಿರ ಮಾದರಿ ಹನುಮ ಮಂದಿರ ನಿರ್ಮಾಣ ಮಾಡುವುದಾಗಿ ವಿವಾದಾತ್ಮಕ ಹೇಳಿಕೆ ನೀಡಿದ ಕಾಳಿ ಸ್ವಾಮಿ ಬಂಧನ ಮಾಡಿರುವ ಶ್ರೀರಂಗಪಟ್ಟಣ ಪೋಲಿಸರು ಕಾಳಿ ಮಠದ ಋಷಿಕುಮಾರ ಸ್ವಾಮೀಜಿ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ.ಜಾಮಿಯಾ ಮಸೀದಿ ಬಗ್ಗೆ ವಿವಾದಾತ್ಮಕ ಹೇಳಿಕೆ ಹಿನ್ನೆಲೆ ಶ್ರೀರಂಗಪಟ್ಟಣದ ಟೌನ್ ನಲ್ಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

.
ಬಾಬರಿ‌ ಮಸೀದಿ ರೀತಿಯಲ್ಲಿ ಶ್ರೀರಂಗಪಟ್ಟಣದ ಮಸೀದಿ ಒಡೆದು ಹಾಕಬೇಕು ಎಂದುಮಸೀದಿ ಮುಂದೆ ನಿಂತು ಕಾಳೀ ಸ್ವಾಮಿ ಮಾತನಾಡಿದ್ದ ವೀಡಿಯೋ ಸಾಮಾಜಿ‌ಕ ಜಾಲತಾಣದಲ್ಲಿ ವೈರಲ್ ಆದ ಮೇಲೆ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ.

ಕೆಲ ದಿನಗಳ ಹಿಂದೆ‌ ಹಿಂದೂಗಳು ಮಸೀದಿ ಒಡೆಯುತ್ತಾರೆ ಎಂದು ಮುಸ್ಲಿಂ ಮುಖಂಡರು ಆರೋಪ ಮಾಡಿದ್ದರು. ಇದರ ಬೆನ್ನಲ್ಲೆ ಇದೀಗಾ ಉರಿಯುವ ಬೆಂಕಿಗೆ ತುಪ್ಪ ಸುರಿದ ಸ್ವಾಮೀಜಿ.ಈ‌ ಮಸೀದಿಯಲ್ಲಿ ಅದ್ಬುತವಾದ ಶಿಲೆಗಳಿವೆ, ಅದು ದೇವಸ್ಥಾನದ ಕಟ್ಟಡವಾಗಿದೆ.


ಶ್ರೀರಂಗಪಟ್ಟಣದ ದೇವಾಸ್ಥಾನವನ್ನು ಮಸೀದಿ‌ ಮಾಡಿಕೊಂಡಿದ್ದಾರೆ.ಹಿಂದೂಗಳು ಜಾಗರೂಕರಾಗಿ ಅತಿಬೇಗ ಒಡೆಯಬೇಕಾದ ಮಸೀದಿ ಇದು ಎಂದು ಸ್ವಾಮೀಜಿ ಉಗ್ರವಾಗಿ ಕರೆ ನೀಡಿದ ವಿಡಿಯೋ ವೈರಲ್ ಆಗಿದೆ

ವಿವಾದಾತ್ಮಕ ಹೇಳಿಕೆ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿರುವ ಶ್ರೀರಂಗಪಟ್ಟಣ ಟೌನ್ ಪೊಲೀಸರು ,ಋಷಿಕುಮಾರ್ ಸ್ವಾಮೀಜಿಯನ್ನು ಬಂಧಿಸಿ ಠಾಣೆಗೆ ಕರೆತಂದರು.ಪೊಲೀಸ್ ಠಾಣೆಗೆ ಕರೆತರುವ ಮುನ್ನ ಶ್ರೀರಂಗಪಟ್ಟಣ ಸರ್ಕಾರಿ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ಮಾಡಿಸಿದರು.

ಸದ್ಯ ತಪಾಸಣೆ ನಂತರ ಮಾಧ್ಯಮಗಳ ಜೊತೆ ಮಾತನಾಡಿ ‌ ನನ್ನ ಹೇಳಿಕೆ ಈಗಲೂ ಬದ್ದನಿದ್ದೇನೆ ಎಂದು ರಿಷಿಕುಮಾರ್ ಸ್ವಾಮೀಜಿ. ಅಯೋದ್ಯೆಯಲ್ಲಿ ರಾಮ ಮಂದಿರ. ಅದೇ ರೀತಿ ಶ್ರೀರಂಗಪಟ್ಟಣದಲ್ಲಿ ಹನುಮ ಮಂದಿರ‌ ಕಟ್ಟುತ್ತೇವೆ.
ಮಸೀದಿ‌ ನನಗೆ ದೇವಾಲಯದ ರೀತಿ‌ ಕಾಣಿಸಿದೆ. ಅದನ್ನೇ ಹೇಳಿದ್ದೇನೆ.ಶ್ರೀರಂಗಪಟ್ಟಣದಲ್ಲಿ ಮತ್ತೊಮ್ಮೆ ಹನುಮ ಮಂದಿರ ಕಟ್ಟೇ ಕಟ್ಪುತ್ತೀವೆ ಎಂದರು.

Share This Article
Leave a comment