ಶ್ರೀರಂಗಪಟ್ಟಣದ ಮಸೀದಿ ದ್ವಂಸ ಮಾಡಿ ಅಯೋಧ್ಯೆ ರಾಮ ಮಂದಿರ ಮಾದರಿ ಹನುಮ ಮಂದಿರ ನಿರ್ಮಾಣ ಮಾಡುವುದಾಗಿ ವಿವಾದಾತ್ಮಕ ಹೇಳಿಕೆ ನೀಡಿದ ಕಾಳಿ ಸ್ವಾಮಿ ಬಂಧನ ಮಾಡಿರುವ ಶ್ರೀರಂಗಪಟ್ಟಣ ಪೋಲಿಸರು ಕಾಳಿ ಮಠದ ಋಷಿಕುಮಾರ ಸ್ವಾಮೀಜಿ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ.ಜಾಮಿಯಾ ಮಸೀದಿ ಬಗ್ಗೆ ವಿವಾದಾತ್ಮಕ ಹೇಳಿಕೆ ಹಿನ್ನೆಲೆ ಶ್ರೀರಂಗಪಟ್ಟಣದ ಟೌನ್ ನಲ್ಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
.
ಬಾಬರಿ ಮಸೀದಿ ರೀತಿಯಲ್ಲಿ ಶ್ರೀರಂಗಪಟ್ಟಣದ ಮಸೀದಿ ಒಡೆದು ಹಾಕಬೇಕು ಎಂದುಮಸೀದಿ ಮುಂದೆ ನಿಂತು ಕಾಳೀ ಸ್ವಾಮಿ ಮಾತನಾಡಿದ್ದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಮೇಲೆ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ.
ಕೆಲ ದಿನಗಳ ಹಿಂದೆ ಹಿಂದೂಗಳು ಮಸೀದಿ ಒಡೆಯುತ್ತಾರೆ ಎಂದು ಮುಸ್ಲಿಂ ಮುಖಂಡರು ಆರೋಪ ಮಾಡಿದ್ದರು. ಇದರ ಬೆನ್ನಲ್ಲೆ ಇದೀಗಾ ಉರಿಯುವ ಬೆಂಕಿಗೆ ತುಪ್ಪ ಸುರಿದ ಸ್ವಾಮೀಜಿ.ಈ ಮಸೀದಿಯಲ್ಲಿ ಅದ್ಬುತವಾದ ಶಿಲೆಗಳಿವೆ, ಅದು ದೇವಸ್ಥಾನದ ಕಟ್ಟಡವಾಗಿದೆ.
ಶ್ರೀರಂಗಪಟ್ಟಣದ ದೇವಾಸ್ಥಾನವನ್ನು ಮಸೀದಿ ಮಾಡಿಕೊಂಡಿದ್ದಾರೆ.ಹಿಂದೂಗಳು ಜಾಗರೂಕರಾಗಿ ಅತಿಬೇಗ ಒಡೆಯಬೇಕಾದ ಮಸೀದಿ ಇದು ಎಂದು ಸ್ವಾಮೀಜಿ ಉಗ್ರವಾಗಿ ಕರೆ ನೀಡಿದ ವಿಡಿಯೋ ವೈರಲ್ ಆಗಿದೆ
ವಿವಾದಾತ್ಮಕ ಹೇಳಿಕೆ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿರುವ ಶ್ರೀರಂಗಪಟ್ಟಣ ಟೌನ್ ಪೊಲೀಸರು ,ಋಷಿಕುಮಾರ್ ಸ್ವಾಮೀಜಿಯನ್ನು ಬಂಧಿಸಿ ಠಾಣೆಗೆ ಕರೆತಂದರು.ಪೊಲೀಸ್ ಠಾಣೆಗೆ ಕರೆತರುವ ಮುನ್ನ ಶ್ರೀರಂಗಪಟ್ಟಣ ಸರ್ಕಾರಿ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ಮಾಡಿಸಿದರು.
ಸದ್ಯ ತಪಾಸಣೆ ನಂತರ ಮಾಧ್ಯಮಗಳ ಜೊತೆ ಮಾತನಾಡಿ ನನ್ನ ಹೇಳಿಕೆ ಈಗಲೂ ಬದ್ದನಿದ್ದೇನೆ ಎಂದು ರಿಷಿಕುಮಾರ್ ಸ್ವಾಮೀಜಿ. ಅಯೋದ್ಯೆಯಲ್ಲಿ ರಾಮ ಮಂದಿರ. ಅದೇ ರೀತಿ ಶ್ರೀರಂಗಪಟ್ಟಣದಲ್ಲಿ ಹನುಮ ಮಂದಿರ ಕಟ್ಟುತ್ತೇವೆ.
ಮಸೀದಿ ನನಗೆ ದೇವಾಲಯದ ರೀತಿ ಕಾಣಿಸಿದೆ. ಅದನ್ನೇ ಹೇಳಿದ್ದೇನೆ.ಶ್ರೀರಂಗಪಟ್ಟಣದಲ್ಲಿ ಮತ್ತೊಮ್ಮೆ ಹನುಮ ಮಂದಿರ ಕಟ್ಟೇ ಕಟ್ಪುತ್ತೀವೆ ಎಂದರು.
- ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ವಿಧಿವಶ
- ಹಾಲಿನ ದರ ಏರಿಕೆ? ಶೀಘ್ರದಲ್ಲೇ ಕೆಎಂಎಫ್ ನಿರ್ಣಯ
- ಮೈಸೂರಿನ ಪ್ರಿನ್ಸೆಸ್ ರಸ್ತೆಗೆ ಸಿದ್ದರಾಮಯ್ಯ ಹೆಸರು: ಪ್ರತಾಪ್ ಸಿಂಹ-ಯದುವೀರ್ ನಡುವೆ ವಾಕ್ಸಮರ
- ವಾರಕ್ಕೆ 70 ಗಂಟೆ ಕೆಲಸದ ಮೇಲೆ ಉದ್ಯಮಿ ನಮಿತಾ ಥಾಪರ್ ಪ್ರತಿಕ್ರಿಯೆ
- ಸಿಲಿಂಡರ್ ಸ್ಫೋಟ ಪ್ರಕರಣ: ಇಬ್ಬರು ಅಯ್ಯಪ್ಪ ಮಾಲಾಧಾರಿಗಳ ದುರ್ಮರಣ
- ಸಂಸತ್ ಭವನದ ಬಳಿಯ ದಾರುಣ ಘಟನೆ: ವ್ಯಕ್ತಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನ
More Stories
ಮಂಡ್ಯದಲ್ಲಿ ಭೀಕರ ಅಪಘಾತ: ಕಾರು-ಲಾರಿ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿ ಸಾವು
ಮಂಡ್ಯ: 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿ ಚಾಲನೆ
ಮಂಡ್ಯ ದೀಪಾಲಂಕಾರಕ್ಕೆ ಸಚಿವ ಚಲುವರಾಯಸ್ವಾಮಿ ಚಾಲನೆ