March 29, 2023

Newsnap Kannada

The World at your finger tips!

WhatsApp Image 2023 02 09 at 9.16.08 PM

ಮಳವಳ್ಳಿಯಲ್ಲಿ ಕಾಂಗ್ರೆಸ್ ಗೆಲುವು ಶತಸಿದ್ದ: ಪಿ ಎಂ ನರೇಂದ್ರಸ್ವಾಮಿ

Spread the love

ಹಲಗೂರು:

ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬಹುಮತ ಪಡೆದು ಅಧಿಕಾರ ಹಿಡಿಯುವುದರಲ್ಲಿ ಯಾವುದೇ ಸಂಶಯ ಇರುವುದಿಲ್ಲ ಹಾಗೂ ಮಳವಳ್ಳಿಯಲ್ಲಿ ನಮ್ಮ ಪಕ್ಷದ ವಿಜಯಪತಾಕೆಯನ್ನು ಹಾರಿಸುವುದು ಶತ ಸಿದ್ದವಾಗಿದೆ ಎಂದು ಮಾಜಿ ಸಚಿವ ಪಿ ಎಂ ನರೇಂದ್ರಸ್ವಾಮಿ ತಿಳಿಸಿದರು.

ಗುರುವಾರ ಹಲಗೂರಿಗೆ ಆಗಮಿಸಿದ್ದ ಪಿಎಂ ನರೇಂದ್ರಸ್ವಾಮಿ ಕಾರ್ಯಕರ್ತರ ಜೊತೆ ಮಾತನಾಡಿ ನಂತರ ‘ನ್ಯೂಸ್ ಸ್ನ್ಯಾಪ್ ‘ ಪ್ರತಿನಿಧಿಯ ಜೊತೆ ಮಾತನಾಡುತ್ತಾ ಹಲಗೂರಿನಿಂದ ಪ್ರಾರಂಭವಾಗುವ ಪ್ರಜಾದ್ವನಿ ಕಾರ್ಯಕ್ರಮ (ಫೆ 11)ಶನಿವಾರ ಮಧ್ಯಾಹ್ನ 2 ಗಂಟೆಗೆ, ನಮ್ಮ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ಮೊದಲು ಹಲಗೂರು , ನಂತರ ಹಾಡ್ಲಿ ಸರ್ಕಲ್,ಸಭೆ ನಡೆಸಿ ಪ್ರಜಾದ್ವನಿ ಕಾರ್ಯಕ್ರಮದ ಪ್ರಚಾರ ಮಾಡುತ್ತಾರೆ ಎಂದರು.

ಈ ಬಾರಿ ಶತಾಯಗತಾಯ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಆಡಳಿತ ತರಬೇಕೆಂದು ಹೋರಾಟದ ಮುಂಚೂಣಿ ವಹಿಸಿರುವ ,ನಮ್ಮ ಅಧ್ಯಕ್ಷರು ಹಲವಾರು ಮುಖಂಡರುಗಳ ಜೊತೆಗೂಡಿ ಪ್ರಾರಂಭಿಸುತ್ತಿರುವ ಈ ಕಾರ್ಯಕ್ರಮದಲ್ಲಿ ಅವರಿಗೆ ಅದ್ದೂರಿ ಸ್ವಾಗತ ಕೋರಿ ,ಮಳವಳ್ಳಿಯಲ್ಲಿ ನಮ್ಮ ಪಕ್ಷದ ವಿಜಯಪತಾಕೆ ಹಾರಿಸುವ ಕಾರ್ಯಕ್ರಮ ಇದಾಗಿದೆ ,ಎಲ್ಲಾ ಮತದಾರ ,ಬಂಧುಗಳು ನಮ್ಮ ಕಾರ್ಯಕರ್ತರು ಭಾಗವಹಿಸಿ ನಮ್ಮ ಸರ್ಕಾರ ಅಧಿಕಾರಕ್ಕೆ ಬರಲು ಎಲ್ಲರೂ ಶ್ರಮಿಸಬೇಕು ಅದಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ಸಿಗೊಳಿಸಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಸಂದರ್ಭದಲ್ಲಿ ಧುಂತೂರು ವಿಶ್ವನಾಥ್. ಸುಂದರ್ ರಾಜ್. ಕೃಷ್ಣಮೂರ್ತಿ. ಹೆಚ್‌ ವಿ ರಾಜು. ಬೇಕ್ರಿ ಜಗ. ರವೀಶ. ಸೇರಿದಂತೆ ಇನ್ನೂ ಹೆಚ್ಚಿನ ಕಾರ್ಯಕರ್ತರು ಪಾಲ್ಗೊಂಡಿದ್ದರು.

error: Content is protected !!