ವರದಕ್ಷಿಣೆ ಕೇಸ್ – ನಟಿ ಅಭಿನಯ ಪೊಲೀಸರಿಗೆ ಸಿಗದೇ ಎಸ್ಕೇಪ್ : ಲುಕ್‌ ಔಟ್ ನೋಟಿಸ್ ಜಾರಿ

Team Newsnap
1 Min Read

ಜೈಲು ಶಿಕ್ಷೆಗೆ ಗುರಿಯಾಗಿರುವ ಅನುಭವ ಸಿನಿಮಾ ಖ್ಯಾತಿ ಕನ್ನಡ ಚಿತ್ರರಂಗದ ನಟಿ ಅಭಿನಯ ಹಾಗೂ ಅವರ ಕುಟುಂಬ ಪತ್ತೆಗೆ ಪೊಲೀಸರು ಲುಕ್​​ಔಟ್​ ನೋಟಿಸ್ ಜಾರಿ ಮಾಡಿದ್ದಾರೆ. ನಟಿ ಅಭಿನಯ, ತಾಯಿ ಜಯಮ್ಮ ಹಾಗೂ ಸಹೋದರ ಚೆಲುವರಾಜು ಪೊಲೀಸರಿಗೆ ಸಿಗದೆ ತಲೆಮರೆಸಿಕೊಂಡಿದ್ದಾರೆ.

ಅವರ ಪತ್ತೆಗೆ ಬೆಂಗಳೂರು ನಗರ ಚಂದ್ರ ಲೇಔಟ್​ ಪೊಲೀಸರು ಲುಕ್​​​ಔಟ್​ ನೋಟಿಸ್ ಜಾರಿ ಮಾಡಿದ್ದಾರೆ.ಅಭಿನಯ ಅವರ ಅತ್ತಿಗೆ ಲಕ್ಷ್ಮೀದೇವಿ ಅವರು ದಾಖಲು ಮಾಡಿದ್ದ ವರದಕ್ಷಿಣೆ ಕಿರುಕುಳ ಪ್ರಕರಣದಲ್ಲಿ ಅಪರಾಧಿಗಳಿಗೆ ಸೆಕ್ಷನ್ಸ್ ನ್ಯಾಯಾಲಯ ಶಿಕ್ಷೆ ವಿಧಿಸಿತ್ತು. ಇದರ ವಿರುದ್ಧ ಅಭಿನಯ ಅವರು ಹೈಕೋರ್ಟ್​ಗೆ ಅರ್ಜಿ ಮೇಲ್​ ಮನವಿ ಸಲ್ಲಿಕೆ ಮಾಡಿದ್ದರು.

ಅರ್ಜಿ ವಿಚಾರಣೆ ನಡೆದು ಉಚ್ಚ ನ್ಯಾಯಾಲಯ ಸೆಷನ್ಸ್ ನ್ಯಾಯಾಲಯದ ತೀರ್ಪನ್ನು ಎತ್ತ ಹಿಡಿದಿತ್ತು.ಕೋರ್ಟ್​ ಆದೇಶದ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಿ ಕೋರ್ಟಿಗೆ ಹಾಜರು ಪಡಿಸಬೇಕಿತ್ತು. ಆದರೆ ಸದ್ಯ ನಟಿ ಅಭಿನಯ, ತಾಯಿ ಜಯಮ್ಮ ಹಾಗೂ ಸೋದರ ಚೆಲುವರಾಜು ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದಾರೆ.

ಪರಿಣಾಮ ಪೊಲೀಸರು ಲುಕ್​ಔಟ್ ನೋಟಿಸ್​ ಜಾರಿ ಮಾಡಿ, ಆರೋಪಿಗಳ ಬಗ್ಗೆ ಮಾಹಿತಿ ಸಿಕ್ಕಿದರೆ ಪೊಲೀಸರಿಗೆ ತಿಳಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.ನಟಿ ಅಭಿನಯ ತಮ್ಮ ಪೋಷಕರೊಂದಿಗೆ ಸೇರಿಕೊಂಡು ಅಣ್ಣನ ಹೆಂಡತಿ (ಅತ್ತಿಗೆ)ಗೆ ಕಿರುಕುಳ ಕೊಡುತ್ತಿದ್ದರು ಎಂಬ ಆರೋಪ ಅವರ ಮೇಲಿತ್ತು.

Share This Article
Leave a comment