ನಕಲಿ ಅಂಕಪಟ್ಟಿ ನೀಡಿ ಪ್ರಾಚಾರ್ಯ ಹುದ್ದೆಗಿಟ್ಟಿಸಿದ್ದ ಪ್ರಾಂಶುಪಾಲ-ದೂರು ದಾಖಲು

Team Newsnap
1 Min Read
Complaint against the principal who was got the post of principal by giving a fake mark sheet ನಕಲಿ ಅಂಕಪಟ್ಟಿ ನೀಡಿ ಪ್ರಾಚಾರ್ಯ ಹುದ್ದೆಗಿಟ್ಟಿಸಿದ್ದ ಪ್ರಾಂಶುಪಾಲ-ದೂರು ದಾಖಲು

ನಕಲಿ ಅಂಕಪಟ್ಟಿ ನೀಡಿ ಪ್ರಾಚಾರ್ಯ ಹುದ್ದೆಗೇರಿದ್ದ ಪ್ರಾಂಶುಪಾಲನ ಮೇಲೆ ದೂರು ದಾಖಲಿಸಿದ ಘಟನೆ ಧಾರವಾಡದಲ್ಲಿ ಜರುಗಿದೆ.

ಧಾರವಾಡದ ಮುತ್ತಣ್ಣ ಸ್ಮಾರಕ ಪೊಲೀಸ್ ವಸತಿ ಶಾಲೆಯ ಡಾ.ಯಲ್ಲಪ್ಪಗೌಡ ಪಿ.ಕಲ್ಲನಗೌಡರ ಎಂಬವರು ನಕಲಿ ಬಿ.ಎಡ್ ಅಂಕಪಟ್ಟಿ ನೀಡಿ ಪ್ರಾಂಶುಪಾಲ ಹುದ್ದೆ ಗಿಟ್ಟಿಸಿಕೊಂಡಿದ್ದಾರೆ.

ವಾರ್ಡನ್ ಹುದ್ದೆಯಲ್ಲಿದ್ದ ಡಾ.ಯಲ್ಲಪ್ಪಗೌಡ ಕಲ್ಲನಗೌಡರ ಉತ್ತರ ಪ್ರದೇಶದಲ್ಲಿ ನಕಲಿ ಬಿ.ಎಡ್ ಅಂಕಪಟ್ಟಿಯನ್ನು ಮಾಡಿಸಿದ್ದರು.

2001ರಲ್ಲೇ ಉತ್ತರ ಪ್ರದೇಶದ ಡಿಪಾರ್ಟ್ಮೆಂಟ್ ಆಫ್ ಓಪನ್ ಡಿಸ್ಟನ್ಸ್ ಎಜ್ಯುಕೇಶನ್ ಕೇಂದ್ರದ ಅಂಕಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದರು.

2006ರ ವರೆಗೂ ವಾರ್ಡನ್ ಆಗಿದ್ದ ಕಲ್ಲನಗೌಡರ ನಕಲಿ ಅಂಕಪಟ್ಟಿಯನ್ನು ಧಾರವಾಡ ಜಿಲ್ಲಾ ಪೊಲೀಸ್ ಕಚೇರಿಗೆ ಸಲ್ಲಿಸಿ, ಅಲ್ಲಿಂದ ಪ್ರಾಂಶುಪಾಲ ಹುದ್ದೆಗೇರಿದ್ದಾರೆ.

ಉತ್ತರ ಪ್ರದೇಶ ರಾಜ್ಯದ ಅಂಕಪಟ್ಟಿಗೆ ಮಾನ್ಯತೆ ಇಲ್ಲದಿದ್ದರೂ ಅದನ್ನು ಕೊಟ್ಟು ಇಲಾಖೆಗೆ ಹಾಗೂ ಸರ್ಕಾರಕ್ಕೆ ಮೋಸ ಮಾಡಿದ್ದಾರೆ. 2007-08ರ ಸಾಲಿನಲ್ಲಿ ಕರ್ತವ್ಯದಲ್ಲಿದ್ದರೂ ಮತ್ತೊಮ್ಮೆ ರೆಗ್ಯುಲರ್ ಬಿ.ಎಡ್ ಪದವಿ ಪಡೆದ ಕಲ್ಲನಗೌಡರ, ಇದನ್ನೂ ಸಹ ಕಾನೂನು ಬಾಹಿರವಾಗಿಯೇ ಪಡೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

ಹುಬ್ಬಳ್ಳಿಯ ಆಲ್ ಮಿಜಾನ್ ಎಜ್ಯುಕೇಶನ್ ಅಸೋಸಿಯೇಶನ್ ಕಾಲೇಜಿನಲ್ಲಿ ಕಲ್ಲನಗೌಡರ ಕಾನೂನು ಬಾಹಿರವಾಗಿ ಬಿ.ಎಡ್ ಪದವಿ ಪಡೆದಿದ್ದಾರೆ. ಕರ್ತವ್ಯದಲ್ಲಿದ್ದುಕೊಂಡೇ ಸರ್ಕಾರಕ್ಕೆ ನಂಬಿಕೆ ದ್ರೋಹ ಮಾಡಿದ ಆರೋಪದಡಿ ಇದೀಗ ಕಲ್ಲನಗೌಡರ ಮೇಲೆ ಸಿದ್ದಪ್ಪ ಅಕ್ಕಿ ಎನ್ನುವವರು ದೂರು ದಾಖಲಿಸಿದ್ದಾರೆ.
ಧಾರವಾಡ ಉಪನಗರ ಪೊಲೀಸರು ತನಿಖೆ ನಡೆಸಿದ್ದಾರೆ.

ಇದನ್ನು ಓದಿ -ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ವೇ ಟೋಲ್ ಶುಲ್ಕ ಹೆಚ್ಚಳ ನಿರ್ಧಾರ ಕೈಬಿಟ್ಟ ಹೆದ್ದಾರಿ ಪ್ರಾಧಿಕಾರ

Share This Article
Leave a comment