ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ವೇ ಟೋಲ್ ಶುಲ್ಕ ಹೆಚ್ಚಳ ನಿರ್ಧಾರ ಕೈಬಿಟ್ಟ ಹೆದ್ದಾರಿ ಪ್ರಾಧಿಕಾರ

Team Newsnap
1 Min Read

ಮೈಸೂರು-ಬೆಂಗಳೂರು ದಶಪಥ ಹೆದ್ದಾರಿಯ ಟೋಲ್ ದರ ಹೆಚ್ಚಳಕ್ಕೆ ತೀವ್ರ ವಿರೋಧ ಎದುರಾದ ಬಳಿಕ ಹೆದ್ದಾರಿ ಪ್ರಾಧಿಕಾರ ತನ್ನ ಆದೇಶವನ್ನು ವಾಪಸ್ ಪಡೆದಿದೆ. ಟೋಲ್ ಪ್ರಾರಂಭವಾದ 17 ದಿನಗಳಲ್ಲಿ ದರ ಹೆಚ್ಚಳಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗದ ಹಿನ್ನೆಲೆಯಲ್ಲಿ ದರ ಏರಿಕೆಯನ್ನು ಅಧಿಕಾರಿಗಳು ಮುಂದೂಡಿ ಮರು ಆದೇಶ ಹೊರಡಿಸಿದ್ದಾರೆ.

ದಶಪಥ ಹೆದ್ದಾರಿಯ ಟೋಲ್ ಸಂಗ್ರಹ ಆರಂಭವಾಗಿ ಕೇವಲ 17ದಿನಗಳು ಕಳೆದಿವೆ. ಈ ನಡುವೆಯೇ ರಾಷ್ಟ್ರೀಯ ಹೆದ್ದಾರಿ ಶುಲ್ಕ ನಿಯಮ 2008ರ ಅನ್ವಯ ಎಕ್ಸ್‌ಪ್ರೆಸ್‌ವೇ ಟೋಲ್ ದರವನ್ನೂ ಹೆದ್ದಾರಿ ಪ್ರಾಧಿಕಾರ ಹೆಚ್ಚಳಕ್ಕೆ ಆದೇಶ ಹೊರಡಿಸಿತ್ತು.

ಶನಿವಾರ ಮುಂಜಾನೆಯಿಂದ ಹೆಚ್ಚುವರಿ ಶುಲ್ಕ ವಸೂಲಿ ಆರಂಭಿಸಿದ್ದ ಟೋಲ್ ಸಿಬ್ಬಂದಿ ವಿರುದ್ಧ ಸಾರ್ವಜನಿಕರು ಆಕ್ರೋಶ ಸಹ ಹೊರ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಹಿಂದಿನ ದರ ಮುಂದುವರೆಸುವಂತೆ ಮರು ಆದೇಶ ಹೊರಡಿಸಲಾಗಿದೆ.

ನಿರ್ಧಾರ ಕೈಬಿಟ್ಟ ಮೇಲೂ ಆದೇಶ ತಲುಪಿಲ್ಲ ಎಂದು ಕೆಲಕಾಲ ಶೇಷಗಿರಿಹಳ್ಳಿ ಟೋಲ್ ಹಾಗೂ ಕಣಮಿಣಕಿ ಟೋಲ್ ಸಿಬ್ಬಂದಿ ಹೆಚ್ಚುವರಿ ಶುಲ್ಕ ವಸೂಲಿ ಮಾಡಿದ್ದಾರೆ.

ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾದ ಮೇಲೆ ಹಳೇ ದರ ವಸೂಲಿ ಮಾಡಲು ಸಿಬ್ಬಂದಿ ಮುಂದಾದರು. ಈ ವೇಳೆ ಕೆಲ ವಾಹನ ಸವಾರರು ಟೋಲ್ ಸಿಬ್ಬಂದಿ ಜೊತೆ ವಾಗ್ವಾದ ನಡೆಸಿದ್ದಾರೆ.ಇದನ್ನು ಓದಿ –ಧರ್ಮಸ್ಥಳದ ದೇವಸ್ಥಾನದ ಹುಂಡಿಗೆ ಹಾಕುವ ಹಣವನ್ನೂ ಸೀಜ್ ಮಾಡಿದ ಚುನಾವಣಾಧಿಕಾರಿಗಳು

Share This Article
Leave a comment