ಧರ್ಮಸ್ಥಳದ ದೇವಸ್ಥಾನದ ಹುಂಡಿಗೆ ಹಾಕುವ ಹಣವನ್ನೂ ಸೀಜ್ ಮಾಡಿದ ಚುನಾವಣಾಧಿಕಾರಿಗಳು

Team Newsnap
1 Min Read
The Election Officers have also seized the money to be put in the temple fund of Dharamsthala ಧರ್ಮಸ್ಥಳದ ದೇವಸ್ಥಾನದ ಹುಂಡಿಗೆ ಹಾಕುವ ಹಣವನ್ನೂ ಸೀಜ್ ಮಾಡಿದ ಚುನಾವಣಾಧಿಕಾರಿಗಳು

ಧರ್ಮಸ್ಥಳ ಮಂಜುನಾಥ ಸ್ವಾಮಿ ಹಾಗೂ ಕಟೀಲು ದುರ್ಗಾ ಪರಮೇಶ್ವರಿ ದೇವಸ್ಥಾನದ ಹುಂಡಿಗೆ ಹಾಕಲು ತೆಗೆದುಕೊಂಡು ಹೋಗುತ್ತಿದ್ದ ಸುಮಾರು 2 ಲಕ್ಷದ 50 ಸಾವಿರ ಹಣವನ್ನು ಚುನಾವಣಾ ಅಧಿಕಾರಿಗಳು ಸೀಜ್ ಮಾಡಿದ್ದಾರೆ

ಚಿಕ್ಕಮಂಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಚೆಕ್‍ಪೋಸ್ಟ್ ನಲ್ಲಿ ಹಣ ಸೀಜ್ ಮಾಡಲಾಗಿದೆ.

ಚುನಾವಣಾ ನೀತಿ ಸಂಹಿತೆ ಹಿನ್ನೆಲೆ ಜಿಲ್ಲೆಯಲ್ಲಿ ಅಕ್ಕಪಕ್ಕದ ಜಿಲ್ಲೆಯ ಗಡಿ ಹಂಚಿಕೊಂಡಿರುವ ವಿವಿಧ ಮಾರ್ಗದಲ್ಲಿ ಒಟ್ಟು 18 ಚೆಕ್‍ಪೋಸ್ಟ್‍ಗಳನ್ನು ನಿರ್ಮಿಸಲಾಗಿದೆ.

ಮೂಡಿಗೆರೆಯಿಂದ ದಕ್ಷಿಣಕನ್ನಡ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟ್ ಸಮೀಪದ ಕೊಟ್ಟಿಗೆಹಾರದ ಬಳಿಯೂ ಚೆಕ್‍ಪೊಸ್ಟ್ ನಿರ್ಮಿಸಲಾಗಿದೆ.

ಉಡುಪಿ-ಮಂಗಳೂರು ಹೋಗುವವರು ಹೆಚ್ಚಾಗಿ ಈ ಮಾರ್ಗವನ್ನು ಬಳಸುತ್ತಾರೆ. ಆದರೆ ಇದೇ ಮಾರ್ಗದಲ್ಲಿ ತುಮಕೂರು ಜಿಲ್ಲೆ ಪಾವಗಡ ಮೂಲದ ವೈದ್ಯ ಧರ್ಮಸ್ಥಳ ಮಂಜುನಾಥ ಸ್ವಾಮಿ ಹಾಗೂ ಕಟೀಲು ದುರ್ಗಾಪರಮೇಶ್ವರಿ ದೇಗುಲದ ಹುಂಡಿಗೆಂದು ತೆಗೆದುಕೊಂಡು ಹೋಗುತ್ತಿದ್ದ ಹಣವನ್ನು ವಾಹನವನ್ನು ತಪಾಸಣೆ ವೇಳೆ ಸಿಕ್ಕಿದ ಎರಡೂವರೆ ಲಕ್ಷ ಹಣವನ್ನು ಸೀಜ್ ಮಾಡಿದ್ದಾರೆ.

ಚುನಾವಣೆ ನೀತಿ ಸಂಹಿತಿ ಜಾರಿಯಲ್ಲಿರುವ ಕಾರಣ ಓರ್ವ ವ್ಯಕ್ತಿ ಏಕಕಾಲಕ್ಕೆ 50 ಸಾವಿರ ಹಣವನ್ನು ಮಾತ್ರ ತೆಗೆದುಕೊಂಡು ಹೋಗಬಹುದು. ವಾಹನ ಅಂತ ಬಂದಾಗಲೂ ಒಂದು ವಾಹನಕ್ಕೆ 50 ಸಾವಿರ ಅಷ್ಟೆ ಅವಕಾಶವಿರೋದು. ಕಾರಿನಲ್ಲಿ ಐದು ಜನ ಇದ್ದೇವೆಂದು ಎಲ್ಲರೂ 50 ಸಾವಿರ ಇಡುವಂತಿಲ್ಲ.

ಹಾಗಾಗಿ ಕಾರಿನಲ್ಲಿ ಎರಡೂವರೆ ಲಕ್ಷ ಹಣ ಸಿಕ್ಕಿದ ಹಿನ್ನೆಲೆ ಸೂಕ್ತ ದಾಖಲೆ ಇಲ್ಲದ ಕಾರಣ ಹಣವನ್ನು ಪೊಲೀಸರು ಸೀಜ್ ಮಾಡಿದ್ದಾರೆ.ಇದನ್ನು ಓದಿ –ಕೌಟುಂಬಿಕ ಕಲಹ : ಪತ್ನಿ ನೇಣುಬಿಗಿದುಕೊಂಡ ಬೆನ್ನಲ್ಲೇ ಪತಿಯೂ ಆತ್ಮಹತ್ಯೆ

Share This Article
Leave a comment