ಕೆಎಫ್ಐಎಲ್ ಆಫೀಸರ್ ಲೇಡೀಸ್ ಕ್ಲಬ್ ಮತ್ತು ರೋಟರಿ ಕ್ಲಬ್ ಆಪ್ ಹಂಪೆ ಪರ್ಲ್ಸ್ ವತಿಯಿಂದ ಮಕ್ಕಳ ದಿನಾಚರಣೆ

Team Newsnap
2 Min Read

ಬಡ, ಕೈಲಾಗದ ಆಶ್ರಯವಿಲ್ಲದ ಮಕ್ಕಳಿಗೆ ಆಶ್ರಯ ನೀಡಿ ನಮ್ಮ ಹಿಂದೂ ಸಂಸ್ಕೃತಿ, ಸಂಸ್ಕಾರ ಪದ್ಧತಿ ಯ ಜೊತೆ ವ್ಯವಸ್ಥಿತ ಶಿಕ್ಷಣವನ್ನು ನೀಡಿ ಸಮಾಜದಲ್ಲಿ ಜೀವನವನ್ನು ನಡೆಸುವ ದಾರಿ ಕಲ್ಪಿಸಲು ಸ್ಥಾಪಿತವಾಗಿರುವ ನೆಲೆ ವಿಜಯನಗರ ಸಂಸ್ಥೆ ಹೊಸಪೇಟೆಯ ಗೀತಾಶ್ರಮ ಆವರಣದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳ ನಡುವೆ ಇಂದು ಸಾಯಂಕಾಲ ಅಂದರೆ ದಿನಾಂಕ 15-11-2022 ರಂದು ಕಿರ್ಲೋಸ್ಕರ್ ಆಫೀಸರ್ ಲೇಡೀಸ್ ಕ್ಲಬ್ ಮತ್ತು ರೋಟರಿ ಕ್ಲಬ್ ಆಪ್ ಹಂಪೆ ಪರ್ಲ್ಸ್ (Rotary Club of Hampi Pearls) ಸಮಿತಿಯ ಮುಖ್ಯಸ್ಥರಾದ ಶ್ರೀಮತಿ ಕಮಲಾ ಗುಮಾಸ್ತೆಯವರು ದೀಪವನ್ನು ಬೆಳಗಿ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂಧರ್ಭದಲ್ಲಿ ಸಂಸ್ಥೆಯ ಮಕ್ಕಳಿಗೆ ಅನುಕೂಲ ಕಲ್ಪಿಸುವುದಕ್ಕಾಗಿ ಕೆಎಫ್ಐಎಲ್ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಹಕಾರದೊಂದಿಗೆ ಸಂಸ್ಥೆಯ ಮಕ್ಕಳು ತಮ್ಮ ದಿನಂಪ್ರತಿ ಬಳಸುವ ಬಟ್ಟೆ ಮತ್ತು ಸಾಮಾಗ್ರಿಗಳನ್ನು ಇಟ್ಟುಕೊಳ್ಳಲು ಲಾಕರ್ ಳನ್ನು ಸಹಾಯ ರೂಪದಲ್ಲಿ ಕೊಡುಗೆ ನೀಡಲಾಯಿತು.

ವಿಜಯನಗರ ನೂತನ ಜಿಲ್ಲೆಯ ಹೊಸಪೇಟೆ ನಗರದಲ್ಲಿ ಕಳೆದ ಎಂಟು ತಿಂಗಳ ಹಿಂದೆ ಪ್ರಾರಂಭವಾದ ರೋಟರಿ ಕ್ಲಬ್ ಆಪ್ ಹಂಪೆ ಪರ್ಲ್ಸ್ ಕ್ಲಬ್ ಉದ್ಘಾಟನೆಯಾಗಿ ಸಮಾಜದ ಸಾಮಾಜಿಕ, ಆರೋಗ್ಯ,ಪರಿಸರಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಕೈಜೋಡಿಸಿ ಸಮಾಜದ ಸಮುದಾಯದ, ಶಾಲಾ ಕಾಲೇಜುಗಳ ಸಾಮಾಜಿಕ ಉನ್ನತಿಯನ್ನು ಮುಖ್ಯ ಉದ್ದೇಶವನ್ನಿಟ್ಟುಕೂಂಡು ಶ್ರೀಮತಿ ಕಮಲಾ ಗುಮಾಸ್ತೆ ಮತ್ತು ಕ್ಲಬ್ ಸದಸ್ಯರು ಅನೇಕ ಸಾದನೀಯ ಕಾರ್ಯಗಳನ್ನು ಮಾಡುತ್ತಿರುತ್ತಾರೆ ಎಂದು ಸ್ವಾಗತಿಸಿ ನಾಡಿಗೇರ್ ಎಲ್ಲರಿಗೂ ತಿಳಿಸಿದರು ನಂತರ ನೆಲೆ ಸಂಸ್ಥೆಯ ಕಾರ್ಯದರ್ಶಿ ಶ್ರೀ ವಿ.ಬಿ.ಶ್ರೀನಿವಾಸ್ ಸಂಸ್ಥೆಯ ಪರಿಚಯ, ಉದ್ದೇಶ ಮತ್ತು ಮುಂದಿನ ಕಾರ್ಯಗಳ ಬಗ್ಗೆ ತಿಳಿಸಿದರು.

WhatsApp Image 2022 11 15 at 9.32.48 PM

ವೈಯಕ್ತಿಕವಾಗಿ , ಸಾಮಾಜಿಕವಾಗಿ ಮತ್ತು ಸಮೂಹದಲ್ಲಿ ಯಾವುದೇ ಆತಂಕವನ್ನು ಪಡದೆ ಗುರಿಯನ್ನು ಸಾಧಿಸಲು ಮಾಡುವ ಉಪಯುಕ್ತವಾದ ಮತ್ತು ಕೈಯಲ್ಲಿ ಆಗುವ ಕೆಲಸಗಳನ್ನು ಮಾಡಿ ಸಂತೋಷದ ಕಡೆ ಜೀವನವನ್ನು ಸಾಗಿಸುವ ಮಾರ್ಗದಲ್ಲಿ ಸೀಗುವ ಸವಲತ್ತುಗಳನ್ನು ಮಾಡಿದಾಗ ಅತಿಯಾದ ಆನಂದವಾಗುತ್ತದೆ, ನಮ್ಮ ಕೊಡುಗೆ ಉಪಯುಕ್ತವಾದರೆ ಮಕ್ಕಳಿಗೆ ಆಗುವ ಆನಂದ ನಮಗೆ ಆಗುತ್ತದೆ ಎಂದು ಶ್ರೀಮತಿ ಕಮಲಾ ಗುಮಾಸ್ತೆಯವರು ಕಾರ್ಯಕ್ರಮದಲ್ಲಿ ಭಾಷಣ ಮಾಡುತ್ತ ಸಂತೋಷ ವ್ಯಕ್ತಪಡಿಸಿ ಶುಭಾಶಯ ತಿಳಿಸಿದರು.
ಕಾರ್ಯಕ್ರಮ ದಲ್ಲಿ ಲೇಡೀಸ್ ಕ್ಲಬ್ ಮುಖ್ಯಸ್ಥರು ಮತ್ತು ರೋಟರಿ ಹಂಪಿ ಪರ್ಲ್ಸ್ ಸದಸ್ಯರಾದ ಶ್ರೀಮತಿ ಲಕ್ಷಿ ನಾರಾಯಣ ಮತ್ತು ಶ್ರೀಮತಿ ಸುಮಾನಾಗರಾಜ್ ಹಾಗೂ ಹಂಪಿ ಪರ್ಲ್ಸ್ ಕಾರ್ಯಕಾರಿ ಸದಸ್ಯರಾದ ಶ್ರೀಮತಿ ಪ್ರಿಯಾ ಪತ್ತಿಕೊಂಡ ಮತ್ತು ಶ್ರೀಮತಿ ಆರತಿ ರಾಜಾ ಪುರ್ ನೆಲೆ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಕಟ್ಟಿಗೆ ರಾಮಕೃಷ್ಣ ಅವರು ವೇದಿಕೆ ಮೇಲೆ ಇದ್ದು ಶುಭಾಶಯಗಳು ತಿಳಿಸಿದರು.

ಕಾರ್ಯಕ್ರಮದಲ್ಲಿ ಶ್ರೀ ಅನಿಲ್ ಜೋಶಿಯವರು ಅನುಭವವನ್ನು ಹಂಚಿಕೊಂಡು. ಸಂಸ್ಥೆಯ ಅಧ್ಯಕ್ಷರು ಶ್ರೀ ಕಟ್ಟಿಗೆ ರಾಮಕೃಷ್ಣ ಇವರು ಸಮಿತಿಯ ಸದಸ್ಯರು ದಾನಿಗಳು ಪರಿಚಯ ಮಾಡಿಕೊಟ್ಟರು ಮತ್ತು ಅಭಿವೃದ್ಧಿ ಕಾರ್ಯಗಳ ಬಗ್ಗೆ ತಮ್ಮ ಭಾಷಣದಲ್ಲಿ ತಿಳಿಸಿದರು. ಕೆ ಎಮ್ ಎಫ್ ಹಾಲು ಮೊಸರಿನ ದರ ಏರಿಕೆಯ ನಿರ್ಧಾರಕ್ಕೆ ಸಿ ಎಂ ಬೊಮ್ಮಯಿ ಬ್ರೇಕ್

ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ಸಂಸ್ಥೆಯ ಅಧಿಕಾರಿಗಳಾದ ಶ್ರೀ ಉದವ್ ಕುಲ್ಕಕರ್ಣಿ ಮತ್ತು ಮುರಳೀಧರ್ ನಾಡಿಗೇರ್ ಇದ್ದರು. ವಿಜಯನಗರ ಹೊಸಪೇಟೆಯ ದಾನಿಗಳು, ನೆಲೆ ಸದಸ್ಯರು ಮತ್ತು ನೆಲೆ ಸಂಸ್ಥೆಯ ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮಕ್ಕೆ ಶೋಭೆತಂದರು.ಕಾರ್ಯಕ್ರಮದಲ್ಲಿ ಮಕ್ಕಳು ದೇಶಭಕ್ತಿ ಗೀತೆಯನ್ನು ಹಾಡಿದರು. ವಂದನಾರ್ಪನೆ ಮೂಲಕ ಕಾರ್ಯಕ್ರಮ ಮುಕ್ತಾಯವಾಯಿತು.

ವರದಿ : ಮುರುಳೀಧರ್ ನಾಡಿಗೇರ್

Share This Article
Leave a comment