5 ಲಕ್ಷ ರು ಲಂಚ ಪಡೆಯುವಾಗ ಮಹಿಳಾ ಕೆಎಎಸ್ ಅಧಿಕಾರಿ ವರ್ಷಾ ಲೋಕಾಯುಕ್ತ ಬಲೆಗೆ

Team Newsnap
1 Min Read
Woman KAS officer Varsha Lokayukta trap before accepting 5 lakhs bribe 5 ಲಕ್ಷ ರು ಲಂಚ ಪಡೆಯುವ ಮುನ್ನ ಮಹಿಳಾ ಕೆಎಎಸ್ ಅಧಿಕಾರಿ ವರ್ಷಾ ಲೋಕಾಯುಕ್ತ ಬಲೆಗೆ

5 ಲಕ್ಷ ರು ಲಂಚ ಪಡೆಯುವ ಮುನ್ನ ಮಹಿಳಾ ಕೆಎಎಸ್ ಅಧಿಕಾರಿ ವರ್ಷಾ ಬೆಂಗಳೂರಿನ ಕಂದಾಯ ಭವನದಲ್ಲಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಮಂಗಳವಾರ ಬೆಂಗಳೂರಿನ ಕಂದಾಯ ಭವನದ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ. ವಿಶೇಷ ತಹಶೀಲ್ದಾರ್ ವರ್ಷಾ ಒಡೆಯರ್ ‌ 5 ಲಕ್ಷ ರು ಲಂಚ ಸ್ವೀಕಾರ ಮಾಡುವಾಗ ಈ ದಾಳಿ ನಡೆದಿದೆ.ತೆಲುಗು ನಟ ಮಹೇಶ್​ ಬಾಬು ತಂದೆ ಸೂಪರ್​​ ಸ್ಟಾರ್​ ಕೃಷ್ಣ ನಿಧನ : ತಾಯಿ, ಅಣ್ಣ ಕಳೆದುಕೊಂಡಿದ್ದ ನಟನಿಗೆ ಆಘಾತ.

ಖಾತೆ ಮಾಡಿ ಕೊಡಲು ವರ್ಷಾ ವಡೆಯರ್ ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದರು. ಮಂಗಳವಾರ ಲಂಚ ಸ್ವೀಕಾರ ಮಾಡುವಾಗ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದಾರೆ, ಅಧಿಕಾರಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ವರ್ಗಾವಣೆ ವಿವಾದ ವರ್ಷಾ ಒಡೆಯರ್ ಈ ಮೊದಲು ರಾಮನಗರ ಜಿಲ್ಲೆಯ ಕನಕಪುರ ತಹಶೀಲ್ದಾರ್ ಆಗಿದ್ದರು. ಆಗ ಅವರನ್ನು ವರ್ಗಾವಣೆ ಮಾಡಿದ್ದು, ಭಾರೀ ವಿವಾದಕ್ಕೆ ಕಾರಣವಾಗಿತ್ತು. ಹಲವಾರು ಸಂಘಟನೆಗಳು ಅವರ ಪರವಾಗಿ ನಿಂತು ಬೆಂಬಲ ನೀಡಿದ್ದವು, ಸಾಮಾಜಿಕ ಜಾಲತಾಣದಲ್ಲಿಯೂ ಅವರನ್ನು ಬೆಂಬಲಿಸಿ ಅಭಿಯಾನ ನಡೆದಿತ್ತು.

Share This Article
Leave a comment