February 8, 2023

Newsnap Kannada

The World at your finger tips!

WhatsApp Image 2022 11 15 at 7.49.03 AM

ತೆಲುಗು ನಟ ಮಹೇಶ್​ ಬಾಬು ತಂದೆ ಸೂಪರ್​​ ಸ್ಟಾರ್​ ಕೃಷ್ಣ ನಿಧನ : ತಾಯಿ, ಅಣ್ಣ ಕಳೆದುಕೊಂಡಿದ್ದ ನಟನಿಗೆ ಆಘಾತ

Spread the love

ಟಾಲಿವುಡ್​ ​, ನಟ ಮಹೇಶ್ ಬಾಬು ತಂದೆ ಹಿರಿಯ ನಟ ಕೃಷ್ಣ ಅನಾರೋಗ್ಯದಿಂದ ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನರಾದರು, ನಟ, ನಿರ್ಮಾಪಕ, ನಿರ್ದೇಶಕರಾಗಿದ್ದ ಸೂಪರ್ ಸ್ಟಾರ್ ಕೃಷ್ಣ ಹೈದರಾಬಾದ್​ನ ಕಾಂಟಿನೆಂಟಲ್​​​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಬೆಳಿಗ್ಗೆ 4 ರ ವೇಳೆಗೆ ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ಸ್ಪಪಡಿಸಿದ್ದಾರೆ.

ಟಾಲಿವುಡ್ ನಟ ಮಹೇಶ್​ ಬಾಬು ಅವರ ತಾಯಿ, ಕೃಷ್ಣ ಅವರ ಮೊದಲ ಪತ್ನಿ, ಶ್ರೀಮತಿ ಇಂದಿರಾ ದೇವಿ ಅವರು ಸೆಪ್ಟೆಂಬರ್​​ನಲ್ಲಿ ನಿಧನರಾಗಿದ್ದರು. ಇದಕ್ಕೂ ಮುನ್ನ ಕೃಷ್ಣ ಅವರ ಎರಡನೇ ಪತ್ನಿ ವಿಜಯ ನಿರ್ಮಲಾ ಹಾಗೂ ಮಹೇಶ್​ ಬಾಬು ಸಹೋದರ ರಮೇಶ್​ ಬಾಬು ಅವರು ಕೂಡ ಕೆಲ ತಿಂಗಳ ಹಿಂದೆಯಷ್ಟೇ ನಿಧನರಾಗಿದ್ದರು.

ಕೃಷ್ಣ ಅವರ ಪೂರ್ಣ ಹೆಸರು ಘಟ್ಟಮನೇನಿ ಶಿವರಾಮಕೃಷ್ಣಮೂರ್ತಿ.. 1942 ಮೇ 31 ರಂದು ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ತೆನಾಲಿಯ ಬುರ್ರಿಪಾಲೆಂ ಎಂಬ ಗ್ರಾಮದಲ್ಲಿ ಜನಿಸಿದ್ದರು. 1970-80ರ ದೇಶದಲ್ಲಿ ತೆಲುಗು ಸಿನಿಮಾ ರಂಗದಲ್ಲಿ ನಾಯಕ ನಟರಾಗಿ ಖ್ಯಾತಿ ಪಡೆದಿದ್ದ ಕೃಷ್ಣ, ನಿರ್ದೇಶಕ, ನಿರ್ಮಾಪಕರಾಗಿಯು ಯಶಸ್ವಿಯಾಗಿದ್ದರು.

error: Content is protected !!