ಕಬ್ಬು ತೂಕದಲ್ಲಿ ಮೋಸ : ರಾಜ್ಯದ 21 ಸಕ್ಕರೆ ಕಾರ್ಖಾನೆಗಳ ಮೇಲೆ ದಾಳಿ

Team Newsnap
1 Min Read
Cheating in sugarcane weighing: Attack on 21 sugar mills in the state ಕಬ್ಬು ತೂಕದಲ್ಲಿ ಮೋಸ : ರಾಜ್ಯದ 21 ಸಕ್ಕರೆ ಕಾರ್ಖಾನೆಗಳ ಮೇಲೆ ದಾಳಿ

ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬು ತೂಕದಲ್ಲಿ ಮೋಸ ಮಾಡಲಾಗುತ್ತಿದೆ ಎಂಬ ರೈತರ ದೂರು ಆಧರಿಸಿ ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶನಾಲಯದ ಆಯುಕ್ತರು ಬುಧವಾರ ಬೆಳಗ್ಗೆ ದಾಳಿ ಮಾಡಿದರು.

ಉತ್ತರ ಕರ್ನಾಟಕದ 21 ಸಕ್ಕರೆ ಕಾರ್ಖಾನೆಗಳ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿದರು.ತಾಪಂ, ಜಿಪಂ ಚುನಾವಣೆಗೆ ವಿಳಂಬ – ಸರ್ಕಾರಕ್ಕೆ 5 ಲಕ್ಷ ರು ದಂಡ ವಿಧಿಸಿದ ಹೈಕೋರ್ಟ್

ಬೆಳಗಾವಿ ಜಿಲ್ಲೆಯ 8 ಕಾರ್ಖಾನೆಗಳು, ಬಾಗಲಕೋಟೆ ಜಿಲ್ಲೆಯ 4 ಕಾರ್ಖಾನೆಗಳು, ವಿಜಾಪುರ ಜಿಲ್ಲೆಯ 4 ಕಾರ್ಖಾನೆಗಳು, ಬೀದರ್ ಮತ್ತು ಕಲಬುರ್ಗಿಯ 2 ಕಾರ್ಖಾನೆಗಳು ಮತ್ತು ಕಾರವಾರ ಜಿಲ್ಲೆಯ 1 ಕಾರ್ಖಾನೆ ಮೇಲೆ ಮೊಟ್ಟಮೊದಲ ಬಾರಿಗೆ ಸಕ್ಕರೆ ಆಯುಕ್ತರ ನೇತೃತ್ವದಲ್ಲಿಏಕಕಾಲಕ್ಕೆ ಬೃಹತ್‌ ಪರಿಶೀಲನೆ ಕೈಗೊಳ್ಳಲಾಯಿತು.

ಸಕ್ಕರೆ ಇಲಾಖೆ ಸಿಬ್ಬಂದಿ, ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ, ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ, ಜಿಲ್ಲಾಡಳಿತ ಮತ್ತು ಪೊಲೀಸ್ ಸಿಬ್ಬಂದಿ ಸಹಾಯದಿಂದ ಕಾರ್ಯಾಚರಣೆ ನಡೆಸಲಾಯಿತು.

ಬೆಳಗ್ಗೆ 7 ಗಂಟೆಗೆ ಏಕಕಾಲಕ್ಕೆ ಎಲ್ಲಾಕಾರ್ಖಾನೆಗಳ ಮೇಲೆ ದಾಳಿ ಮಾಡಲಾಯಿತು. ತನಿಖೆ ಪ್ರಗತಿಯಲ್ಲಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

ರೈತರ ದೂರುಗಳನ್ನು ಆಧರಿಸಿ, ಜವಳಿ ಮತ್ತು ಸಕ್ಕರೆ ಸಚಿವರ ನಿರ್ದೇಶನದ ಮೇರೆಗೆ ಈ ದಾಳಿ ಸಂಘಟಿಸಲಾಗಿದೆ.

Share This Article
Leave a comment