ತಾಪಂ, ಜಿಪಂ ಚುನಾವಣೆಗೆ ವಿಳಂಬ – ಸರ್ಕಾರಕ್ಕೆ 5 ಲಕ್ಷ ರು ದಂಡ ವಿಧಿಸಿದ ಹೈಕೋರ್ಟ್

Team Newsnap
1 Min Read

ಸಕಾಲದಲ್ಲಿ ತಾಪಂ, ಜಿಪಂ ಚುನಾವಣೆ ನಡೆಸಲು ಸರ್ಕಾರ ಕೋರ್ಟ್​ ಆದೇಶವನ್ನು ಪಾಲಿಸಲು ವಿಫಲವಾಗಿರುವ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್​ 5 ಲಕ್ಷ ರೂಪಾಯಿ ದಂಡ ವಿಧಿಸಿದೆ.

ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಪಿ.ಬಿ ವರಾಳೆ ನೇತೃತ್ವದ ವಿಭಾಗೀಯ ಪೀಠ ರಾಜ್ಯ ಸರ್ಕಾರಕ್ಕೆ ದಂಡ ವಿಧಿಸಿ ಆದೇಶ ನೀಡಿದೆ.ನಂಬಿದವರಿಗೆ ನೆಲೆ ಕಲ್ಪಿಸಲು ಕಾಂಗ್ರೆಸ್‌ಗೆ ಸೇರ್ಪಡೆ : ವೈಎಸ್‌ವಿ ದತ್ತ

ಪ್ರತಿ ವಿಚಾರಣೆಯಲ್ಲೂ ಈ ಬಗ್ಗೆ ಪ್ರಶ್ನೆ ಬಂದಾಗ ಪದೇ ಪದೇ ರಾಜ್ಯ ಸರ್ಕಾರ ಹೊಸ ದಿನಾಂಕ ಕೇಳುತ್ತಿತ್ತು. ಪದೇ ಪದೆ ‌ಕಾಲಾವಕಾಶ ಕೇಳ್ತಿರೋದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಕೋರ್ಟ್, ಸರ್ಕಾರ ಹಾಗೂ ಸೀಮಾ ನಿರ್ಣಯ ಆಯೋಗದ ನಡೆಗೆ ಬೇಸರ ವ್ಯಕ್ತಪಡಿಸಿತು.

ಜಿಲ್ಲಾ ಮತ್ತು ತಾಲೂಕು ಪಂಚಾಯತಿಗಳಿಗೆ ಚುನಾವಣೆ ನಡೆಸಲು ಒಬಿಸಿ ಸಮುದಾಯಗಳಿಗೆ ಮೀಸಲಾತಿ ನಿಗದಿ ಹಾಗೂ ಕ್ಷೇತ್ರ ವಿಂಗಡಣೆ ಪೂರ್ಣಗೊಳಿಸುವುದಕ್ಕೆ ಸಂಬಂಧಿಸಿದಂತೆ ಕೋರ್ಟ್​ ಆದೇಶಗಳನ್ನು ಸರ್ಕಾರ ಪಾಲಿಸಲು ವಿಫಲವಾಗಿದೆ.

Share This Article
Leave a comment