ಚಂದ್ರಶೇಖರ್ ಗುರೂಜಿ ಹತ್ಯೆ ಪ್ರಕರಣ : 800 ಪುಟಗಳ ದೋಷಾರೋಪಣೆ ಸಲ್ಲಿಕೆ

Team Newsnap
1 Min Read
Chandrasekhar Guruji murder case: 800-page charge sheet ಚಂದ್ರಶೇಖರ್ ಗುರೂಜಿ ಹತ್ಯೆ ಪ್ರಕರಣ : 800 ಪುಟಗಳ ದೋಷಾರೋಪಣೆ ಸಲ್ಲಿಕೆ

ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿ ಹತ್ಯತೆ ಸಂಬಂಧಿಸಿದಂತೆ 800 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. ಮುಖ್ಯ ತನಿಖಾಧಿಕಾರಿ ಎಸಿಪಿ ವಿನೋದ ಮುಕ್ತೇದಾರ ನೇತೃತ್ವದಲ್ಲಿ ಐದು ತನಿಖಾ ತಂಡ ರಚಿಸಲಾಗಿತ್ತು.

ಈಗ ನ್ಯಾಯಾಲಯಕ್ಕೆ 800ಕ್ಕೂ ಅಧಿಕ ದೋಷಾರೋಪಣೆ ಪುಟಗಳನ್ನು ಅಧಿಕಾರಿಗಳು ಸಲ್ಲಿಸಿದ್ದಾರೆ. ಹಣ, ಬೇನಾಮಿ ಆಸ್ತಿ, ಮತ್ತು ಹಂತಕರಿಗೆ ಗುರೂಜಿಯಿಂದ ಹಂತಕರಿಗೆ ಮಾನಸಿಕ ಕಿರಿಕಿರಿ ಕೊಲೆಗೆ ಮುಖ್ಯ ಕಾರಣ ಎಂಬ ಪ್ರಮುಖ ಅಂಶಗಳು ಜಾರ್ಜ್ ಶೀಟ್‍ ನಲ್ಲಿ ಉಲ್ಲೇಖಿಸಲಾಗಿದೆ.ಇದನ್ನು ಓದಿ –ಬದುಕಿಗೊಂದು ದೀವಿಗೆ…. ಭಗವದ್ಗೀತೆ

ಹತ್ಯೆಗೆ ಕಾರಣಗಳೇನು?

ಹಂತಕನ ಹೆಸರಿನಲ್ಲಿದ್ದ 10 ಕೋಟಿ ರು ಬೇನಾಮಿ ಜಮೀನಿನ ಜಗಳವೇ ಹತ್ಯೆಗೆ ಕಾರಣ ಎಂಬುದಾಗಿ ಹೇಳಲಾಗಿದೆ.

ವಿಚಾರಣೆ ವೇಳೆ ಬೇನಾಮಿ ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆ ಪತ್ತೆಯಾಗಿದೆ. ಹುಬ್ಬಳ್ಳಿಯ ತಾರಿಹಾಳ ಕೈಗಾರಿಕಾ ಪ್ರದೇಶದಲ್ಲಿರುವ 10 ಕೋಟಿ ರೂಪಾಯಿ ಮೌಲ್ಯದ 4.5 ಎಕರೆ ಜಮೀನು ಇದೆ. ಇದನ್ನು ಬೇನಾಮಿಯಾಗಿ ಗುರೂಜಿ ಹಂತಕ ಮಹಾಂತೇಶ ಹೆಸರಿಗೆ ಮಾಡಿದ್ದರು. ಈ ಜಮೀನನ್ನು ಮಹಾಂತೇಶ ಗುರೂಜಿಗೆ ತಿಳಿಯದಂತೆ ಮಾರಿದ್ದ. ಈ ವಿಚಾರವಾಗಿ ಗುರೂಜಿ, ಮಹಾಂತೇಶ ಕೋರ್ಟ್ ಮೆಟ್ಟಿಲೇರಿದ್ದರು.

ರೆವಿನ್ಯೂ ಕೋರ್ಟ್ ನಲ್ಲಿ ಕೇಸ್ ಮಹಾಂತೇಶ್ ಪರವಾಗಿತ್ತು. ಈ ತೀರ್ಪು ಪ್ರಶ್ನಿಸಿ ಗುರೂಜಿ ಸಿವಿಲ್ ಕೋರ್ಟ್ ಗೆ ಹೋಗಿದ್ದರು. ಈ ವಿಚಾರ ಮಹಾಂತೇಶ್ ಮತ್ತು ಗುರೂಜಿ ನಡುವೆ ಕಲಹಕ್ಕೆ ಕಾರಣವಾಗಿತ್ತು. ಅಲ್ಲದೆ ಹಂತಕರು ಸರಳವಾಸ್ತು ಸಂಸ್ಥೆಗೆ ವಿರುದ್ಧವಾಗಿ ಮತ್ತೊಂದು ಸಂಸ್ಥೆ ಕಟ್ಟಿದ್ದರು. ತನ್ನ ಪ್ರಾಪರ್ಟಿಯನ್ನು ಮಹಾಂತೇಶ ಕಬಳಿಸಿದ್ದಕ್ಕೆ ಗುರೂಜಿ ಸಿಟ್ಟಾಗಿದ್ದರು. ಕೋಪಗೊಂಡಿದ್ದ ಗುರೂಜಿ ಇವರಿಗೆ ಹಿನ್ನಡೆ ಆಗುವಂತೆ ಮಾಡಿದ್ದರು.

ತಮಗೆ ಮಾನಸಿಕ ಕಿರುಕುಳ ನೀಡುತ್ತಿದ್ದ ಗುರೂಜಿಯನ್ನು ಮುಗಿಸಲು ಮೂರು ತಿಂಗಳಿನಿಂದ ಪ್ಲಾನ್ ಮಾಡಿ ಕೊನೆಗೆ ಚಾಕು ಹಾಕಿ ಹತ್ಯೆ ಮಾಡಿದರು ಎಂದು ದೋಷಾರೋಪ ಪಟ್ಟಿಯಲ್ಲಿ ಹೇಳಲಾಗಿದೆ.

Share This Article
Leave a comment