ಮಂಡ್ಯದ ಚೀಣ್ಯ: ಕಾಂಗ್ರೆಸ್‌ ಫ್ಲೆಕ್ಸ್‌ನಲ್ಲಿ ಸಾವರ್ಕರ್‌ ಚಿತ್ರ

Team Newsnap
1 Min Read
Mandya: Savarkar picture in Congress flex ಮಂಡ್ಯದ ಚೀಣ್ಯ: ಕಾಂಗ್ರೆಸ್‌ ಫ್ಲೆಕ್ಸ್‌ನಲ್ಲಿ ಸಾವರ್ಕರ್‌ ಚಿತ್ರ

ಭಾರತ್‌ ಜೋಡೊ ( Bharat Jodo ) ಪಾದಯಾತ್ರೆ ವೇಳೆ ರಸ್ತೆ ಬದಿಯಲ್ಲಿ ಹಾಕಲಾಗಿದ್ದ ಫ್ಲೆಕ್ಸ್‌ನಲ್ಲಿ ಕಾಂಗ್ರೆಸ್‌ ( congress )ಮುಖಂಡರ ಜೊತೆ ವೀರ ಸಾವರ್ಕರ್‌ ( Veer Savarkar )ಭಾವಚಿತ್ರದ ಫ್ಲೆಕ್ಸ್ ಹಾಕಲಾಗಿತ್ತು. ತಪ್ಪಿನ ಅರಿವಾದ ನಂತರ ಕಾಂಗ್ರೆಸ್‌ ಕಾರ್ಯಕರ್ತರು ಅದನ್ನು ತೆರವುಗೊಳಿಸಿದರು.

ನಾಗಮಂಗಲ ( Nagmangala ) ತಾಲ್ಲೂಕು ಚೀಣ್ಯ ಗ್ರಾಮದ ಬಳಿ ಹಾಕಲಾಗಿದ್ದ ಫ್ಲೆಕ್ಸ್‌ನಲ್ಲಿ ಬೆಂಗಳೂರು ಶಾಂತಿನಗರ ಶಾಸಕ ಹ್ಯಾರಿಸ್‌ ಕಡೆಯವರು ಹಾಕಿಸಿದ್ದ ಫ್ಲೆಕ್ಸ್‌ನಲ್ಲಿ ಸಾವರ್ಕರ್‌ ಭಾವಚಿತ್ರ ಇತ್ತು. ಒಂದು ಕಡೆ ಸಿದ್ದರಾಮಯ್ಯ, ಇನ್ನೊಂದು ಕಡೆ ಡಿ.ಕೆ.ಶಿವಕುಮಾರ್‌ ಸಣ್ಣ ಭಾವಚಿತ್ರಗಳಿದ್ದವು.ಇದನ್ನು ಓದಿ –ಚಂದ್ರಶೇಖರ್ ಗುರೂಜಿ ಹತ್ಯೆ ಪ್ರಕರಣ : 800 ಪುಟಗಳ ದೋಷಾರೋಪಣೆ ಸಲ್ಲಿಕೆ

ಈ ನಡುವೆ ದೊಡ್ಡದಾಗಿ ವಿ.ಡಿ.ಸಾರ್ವರ್ಕರ್‌ ( V D Savarkar ) ಭಾವಚಿತ್ರ ಇತ್ತು. ಜೊತೆಗೆ ರಾಹುಲ್‌ ಗಾಂಧಿ ( Rahul Gandhi ) ನಿಂತಿರುವ ಚಿತ್ರವಿತ್ತು. ಕಾಂಗ್ರೆಸ್‌ ( Congress ) ಕಾರ್ಯಕರ್ತರಿಗೆ ತಪ್ಪಿನ ಅರಿವಾಗಿ ಫ್ಲೆಕ್ಸ್‌ ತೆರವುಗೊಳಿಸುವ ವೇಳೆಗಾಗಲೇ ಆ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.

‘ಕೆಲ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳ ಫ್ಲೆಕ್ಸ್ ( Flex ) ಮಾಡಿಸಲಾಗಿದೆ. ಗೂಗಲ್‌ ಹುಡುಕಾಟದಲ್ಲಿ ಸಿಕ್ಕವರ ಚಿತ್ರಗಳನ್ನು ಬಳಸಲಾಗಿದೆ. ಫ್ಲೆಕ್ಸ್‌ ಮಾಡಿಸಿದವರಿಗೆ ತಿಳಿಯದೇ ಸಾವರ್ಕರ್‌ ಚಿತ್ರವನ್ನೂ ಫ್ಲೆಕ್ಸ್‌ ಮಾಡಿಸಿದ್ದಾರೆ. ಈಗ ಅದನ್ನು ತೆಗೆಯಲಾಗಿದೆ’ ಎಂದು ಕಾಂಗ್ರೆಸ್‌ ನಾಯಕರೊಬ್ಬರು ತಿಳಿಸಿದರು.

Share This Article
Leave a comment