ಆರೋಗ್ಯ ಕ್ಷೇತ್ರದ ಸುಧಾರಣೆಗೆ ಕೇಂದ್ರದ ಉತ್ತೇಜನ : ಪ್ರಧಾನಿ ಮೋದಿ

Team Newsnap
1 Min Read
Modi to Hubballi on January 12: Preparations for the rush ಜನವರಿ 12ರಂದು ಹುಬ್ಬಳ್ಳಿಗೆಮೋದಿ: ಭರದ ಸಿದ್ಧತೆ

ಕೇಂದ್ರ ಸರ್ಕಾರವು ಆರೋಗ್ಯ ಕ್ಷೇತ್ರದ ಸುಧಾರಣೆಗೆ ಆದ್ಯತೆ ನೀಡುತ್ತಿದೆ. ಹಾಗೆಯೇ ಆಯುರ್ವೇದ ಮತ್ತು ಯೋಗಕ್ಕೂ ಉತ್ತೇಜನ ಕೊಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.


ರಾಜಾಸ್ತಾನ ಪೆಟ್ರೋಕೆಮಿಕಲ್ಸ್ ತಾಂತ್ರಿಕ ಸಂಸ್ಥೆಯ ಉದ್ಘಾಟನೆ ಮತ್ತು ನಾಲ್ಕು ವೈದ್ಯಕೀಯ ಕಾಲೇಜುಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಗುರುವಾರ ವರ್ಚುಯಲ್ ವೇದಿಕೆಯಲ್ಲಿ ಪ್ರಧಾನಿ ಮಾತನಾಡಿದರು.

ಆರು ವರ್ಷದಲ್ಲಿ170 ಕ್ಕೂ ಹೆಚ್ಚು ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲಾಗಿದೆ. 100 ಕ್ಕೂ ಹೆಚ್ಚು ವೈದ್ಯಕೀಯ ಕಾಲೇಜುಗಳನ್ನು ಆರಂಭಿಸುವ ಕೆಲಸವು ತೀವ್ರ ರೀತಿಯಲ್ಲಿ ಸಾಗಿದೆ.


ಪ್ರತಿ ಜಿಲ್ಲೆಯಲ್ಲಿ ಒಂದು ವೈದ್ಯಕೀಯ ಕಾಲೇಜು ಅಥವಾ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಸಂಸ್ಥೆ ಇರಬೇಕೆಂಬುದು ಆಶಯ. ಈ ಬಗ್ಗೆ ಸರ್ಕಾರ ಯತ್ನಿಸುತ್ತಿದೆ.
ಈಗ ರಾಷ್ಟ್ರದಲ್ಲಿ ವೈದ್ಯಕೀಯ ಶಿಕ್ಷಣ ಹಾಗೂ ಆರೋಗ್ಯ ಸೇವೆಯ ನಡುವೆ ಅಂತರ ಇಳಿಕೆಯಾಗಿದೆ ಎಂದರು.


ದೇಶದಲ್ಲಿ ಈ ಹಿಂದೆ ಆರು ಏಮ್ಸ್ ಗಳಿದ್ದವು. ಈ ಅದರ ಸಂಖ್ಯೆ 22 ಕ್ಕೂ ಹೆಚ್ಚು ಇವೆ. ಏಮ್ಸ್ ಆಗಲಿ, ವೈದ್ಯಕೀಯ ಕಾಲೇಜಾಗಲಿ ಅದರ ಸಂಪರ್ಕ ಜಾಲ ದೇಶದ ಮೂಲೆ ಮೂಲೆಗೆ ವಿಸ್ತರಣೆಯಾಗುತ್ತಿದೆ ಎಂದು ಪ್ರಧಾನಿಗಳು ಹೆಮ್ಮೆಯಿಂದ ನುಡಿದರು.


ಸಾಕಷ್ಟು ಯತ್ನ ಮತ್ತು ಸವಾಲುಗಳ ನಂತರ ಅಂತಿಮವಾಗಿ ಸರ್ಕಾರ ರಾಷ್ಟ್ರೀಯ ವೈದ್ಯಕೀಯ ಆಯೋಗವನ್ನು ಸ್ಥಾಪಿಸಿದೆ. ಈ ಮೂಲಕ ಸುಧಾರಣೆಗೆ ಕ್ರಮಕೈಗೊಳ್ಳಲಾಗಿದೆ. ಆಯೋಗದ ಶ್ರಮ ಈಗ ಕಾಣಿಸಲು ಶುರುವಾಗಿದೆ ಎಂದು ಮೋದಿ ತಿಳಿಸಿದರು.

Share This Article
Leave a comment