ಬೆಂಗಳೂರಿನಲ್ಲಿ ನ.1ರಂದು ಎಲೆಕ್ಟ್ರಿಕ್ ಬಸ್ ಸಾರ್ವಜನಿಕ ಸೇವೆಗೆ ಅರ್ಪಣೆ

Team Newsnap
1 Min Read

ಬೆಂಗಳೂರಿನ ಕೆಂಗೇರಿ ಘಟಕದೊಳಗೆ ರಾಜ್ಯದ ಪ್ರಪ್ರಥಮ ಎಲೆಕ್ಟ್ರಿಕ್ ಬಸ್ ಪರೀಕ್ಷಾರ್ಥ ಸಂಚಾರವನ್ನು ಇಂದು ನಡೆಸಲಾಯಿತು.


ಈ ವೇಳೆ ಸಾರಿಗೆ ಸಚಿವ ಬಿ.ಶ್ರೀರಾಮುಲು, ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ, ಉಪಾಧ್ಯಕ್ಷ ಎಂ.ಆರ್. ವೆಂಕಟೇಶ್, ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕಟಾರಿಯಾ, ಬಿಎಂಟಿಸಿ ಎಂಡಿ ವಿ. ಅನ್ಬುಕುಮಾರ್ ಈ ಮಿನಿ ಬಸ್‌ನಲ್ಲಿ ಕುಳಿತು ಒಂದು ಸುತ್ತು ಹಾಕಿ ಹೊಸ ಬಸ್ಸಿನ ಅನುಭವ ಪಡೆದರು.


ಕನ್ನಡ ರಾಜ್ಯೋತ್ಸವ ದಿನವಾದ ನ.1 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 10 ಬಸ್‌ಗಳನ್ನು ಸಾರ್ವಜನಿಕ ಸೇವೆಗೆ ಸಮರ್ಪಿಸುವರು. ಬರುವ ಡಿಸೆಂಬರ್ ಹೊತ್ತಿಗೆ ಒಟ್ಟು 90 ಬಸ್‌ಗಳು ಜನರ ಸೇವೆಗೆ ಲಭ್ಯವಾಗಲಿವೆ. ಆರು ತಿಂಗಳಲ್ಲಿ 300 ಬಸ್‌ಗಳು ಸೇರ್ಪಡೆಯಾಗಲಿವೆ ಎಂದು ಸಚಿವರು ಹೇಳಿದರು.


ಜೆಬಿಎಂ ಕಂಪನಿಯಿಂದ ಗುತ್ತಿಗೆ ಆಧಾರದಲ್ಲಿ ಬಸ್ ಪಡೆದುಕೊಳ್ಳಲಾಗುತ್ತಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಈ ಬಸ್‌ಗಳನ್ನು ಪರಿಚಯಿಸಲಾಗುತ್ತಿದೆ. 34 ಆಸನಗಳ ಈ ಬಸ್ ಆರು ಬ್ಯಾಟರಿಗಳ ಸಹಾಯದಲ್ಲಿ ಸಂಚರಿಸಲಿದೆ. ಒಮ್ಮೆ ಚಾರ್ಜ್ ಮಾಡಿದರೆ 120 ಕಿ.ಮೀ. ಸಂಚರಿಸಲಿದೆ ಎಂದು ಎಂದು ಮೂಲಗಳು ಹೇಳಿವೆ.

Share This Article
Leave a comment