ಹೃದಯ ರಕ್ತನಾಳದ ಸ್ಟಂಟ್ ದರ ಇಳಿಕೆ ಮಾಡಿದ ಕೇಂದ್ರ

Team Newsnap
1 Min Read

ಅಗತ್ಯ ಔಷಧಗಳ ಪಟ್ಟಿಗೆ ಹೃದಯದ ರಕ್ತನಾಳಕ್ಕೆ ಅಳವಡಿಕೆ ಮಾಡುವ ಕೊರೊನರಿ ಸ್ಟೆಂಟ್ ಗಳನ್ನು ಕೇಂದ್ರ ಸರ್ಕಾರ ಸೇರ್ಪಡೆ ಮಾಡಿದೆ ಇದರಿಂದಾಗಿ ಈ ಸ್ಟೆಂಟ್ ಗಳ ಬೆಲೆ ಇಳಿಕೆಯಾಗಲಿದೆ.

ಕೇಂದ್ರ ಆರೋಗ್ಯ ಸಚಿವಾಲಯ ಅಗತ್ಯ ಔಷಧಪಟ್ಟಿಗೆ ಕೊರೊನರಿ ಸ್ಟೆಂಟ್ ಗಳನ್ನು ಸೇರ್ಪಡೆ ಮಾಡಿದೆ ಹೀಗಾಗಿ ಇನ್ನು ಮುಂದೆ ಜನರಿಗೆ ಕಡಿಮೆ ದರದಲ್ಲಿ ಸ್ಟೆಂಟ್ ಲಭ್ಯವಾಗಲಿದೆ.

ಸೆಪ್ಟಂಬರ್ 13ರಂದು ಅಗತ್ಯ ಔಷಧಗಳ ಪಟ್ಟಿಯಲ್ಲಿ ಕ್ಯಾನ್ಸರ್ ಔಷಧಿ, ಆಂಟಿ ಬಯಾಟಿಕ್ ಮತ್ತು ಕೆಲವು ಲಸಿಕೆಗಳನ್ನು ಸೇರಿ 34 ಔಷಧಗಳನ್ನು ಸೇರ್ಪಡೆ ಮಾಡಲಾಗಿತ್ತು.

ಈಗ ಕೊರೋನರಿ ಸ್ಟೆಂಟ್ ಸೇರ್ಪಡೆಗೆ ನಿರ್ಧಾರ ಕೈಗೊಳ್ಳಲಾಗಿದೆ. ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗಿ ಅಧಿಕ ಸಂಖ್ಯೆಯಲ್ಲಿ ಸಾವಿಗೆ ಕಾರಣವಾಗುತ್ತಿರುವ ಹಿನ್ನೆಲೆಯಲ್ಲಿ ಕೊರೊನರಿ ಸ್ಟೆಂಟ್ ಅಳವಡಿಕೆ ಜೀವ ಉಳಿಸಲು ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳ ಪಟ್ಟಿಯಲ್ಲಿ ಕೊರೊನರಿ ಸ್ಟೆಂಟ್ ಸೇರ್ಪಡೆ ಮಾಡಲು ನಿರ್ಧರಿಸಲಾಗಿದೆ.

Share This Article
Leave a comment