ಬೆಂಗಾಲಿ ಕಿರುತೆರೆ ನಟಿ ಐಂದ್ರಿಲಾ ಶರ್ಮಾ ಹೃದಯಾಘಾತದಿಂದ ಸಾವು

Team Newsnap
1 Min Read

ಬೆಂಗಾಲಿಯ ಧಾರವಾಹಿಗಳಲ್ಲಿ ಮೋಡಿ ಮಾಡಿದ್ದ ಐಂದ್ರಿಲಾ ಶರ್ಮಾ (24) ಅವರು ಭಾನುವಾರ ಕೊನೆಯುಸಿರೆಳೆದಿದ್ದಾರೆ.

ನಟಿಗೆ ಹೃದಯಾಘಾತವಾದ ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದರು ಕೂಡ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದರು.7​ ಸಿಕ್ಸರ್​​​ – 11 ಫೋರ್​​ ನಿಂದ ನೆರವಿನಿಂದ 111 ರನ್​​ ಗಳಿಸಿದ ಸೂರ್ಯ ಕುಮಾರ್ ಯಾದವ್ ದಾಖಲೆ

ಐಂದ್ರಿಲಾ ಶರ್ಮಾ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ಸಿಪಿಆರ್ ಮಾಡಲಾಯಿತು. ಆದರೆ ಐಂದ್ರಿಲಾ ದೇಹ ಸ್ಪಂದಿಸಲಿಲ್ಲ. ಹಾಗಾಗಿ ಅವರನ್ನು ವೆಂಟಿಲೇಟರ್ ಬೆಂಬಲಕ್ಕೆ ಇರಿಸಲಾಯಿತು. ಐಂದ್ರಿಲಾ ಸ್ಥಿತಿ ಕ್ಷಣ ಕ್ಷಣಕ್ಕೂ ಗಂಭೀರವಾಗುತ್ತಿತ್ತು. ಸಾವು ಬದುಕಿನ ನಡುವೆ ಹೋರಾಟದಲ್ಲಿ ವಿಫಲರಾದರು

ನಟಿ ಐಂದ್ರಿಲಾ ಕ್ಯಾನ್ಸರ್ ರೋಗಕ್ಕೆ ಒಳಗಾಗಿದ್ದರು. ಇತ್ತೀಚಿಗಷ್ಟೆ ಕ್ಯಾನ್ಸರ್‌ನಿಂದ ಗುಣಮುಖರಾಗಿದ್ದರು. ಕ್ಯಾನ್ಸರ್ ಗೆದ್ದ ನಟಿ ಮತ್ತೆ ಬಣ್ಣ ಹಚ್ಚಲು ರೆಡಿಯಾಗಿದ್ದರು. ಆದರೆ ವಿಧಿ ಆಟವೇ ಬೇರೆಯಾಗಿತ್ತು ಕ್ಯಾನ್ಸರ್‌ನಿಂದ ಗುಣಮುಖರಾಗುತ್ತಿದ್ದಂತೆ ಐಂದ್ರಿಲಾ ಬ್ರೈನ್ ಸ್ಟ್ರೋಕ್‌ಗೆ ಒಳಗಾದರು. ಮತ್ತೆ ಐಂದ್ರಿಲಾ ಆಸ್ಪತ್ರೆಗೆ ದಾಖಲಾದರು. ಎರಡೂ ಕಾಯಿಲೆಯಿಂದ ಸುಧಾರಿಸಿಕೊಂಡಿದ್ದ ಐಂದ್ರಿಲಾ ಇದೀಗ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.

Share This Article
Leave a comment