7​ ಸಿಕ್ಸರ್​​​ – 11 ಫೋರ್​​ ನಿಂದ ನೆರವಿನಿಂದ 111 ರನ್​​ ಗಳಿಸಿದ ಸೂರ್ಯ ಕುಮಾರ್ ಯಾದವ್ ದಾಖಲೆ

Team Newsnap
1 Min Read
Surya Kumar Yadav scored 111 runs with 7 sixes and 11 fours. 7​ ಸಿಕ್ಸರ್​​​ - 11 ಫೋರ್​​ ನಿಂದ ನೆರವಿನಿಂದ 111 ರನ್​​ ಗಳಿಸಿದ ಸೂರ್ಯ ಕುಮಾರ್ ಯಾದವ್ ದಾಖಲೆ

ಟೀಂ ಇಂಡಿಯಾದಲ್ಲಿ ಸೂರ್ಯಕುಮಾರ್ ಯಾದವ್ ತಮಗೆ ಸಿಕ್ಕ ಅವಕಾಶಗಳಲ್ಲಿ ತಮ್ಮ ಅಸಾಧಾರಣ ಪ್ರದರ್ಶನ ತೋರಿಸುತ್ತಾರೆ. ಸೂರ್ಯಕುಮಾರ್ ಯಾದವ್, ಏಷ್ಯಾಕಪ್, ವಿಶ್ವಕಪ್​​ನಲ್ಲಿ ಅಬ್ಬರಿಸಿದ ಆರ್ಭಟವು, ನ್ಯೂಜಿಲೆಂಡ್​ ವಿರುದ್ಧದ ಪ್ರವಾಸದಲ್ಲಿಯೂ ಮುಂದುವರೆಸಿದ್ದಾರೆ.

ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ, ಉತ್ತಮ ಪ್ರದರ್ಶನ ನೀಡುವಲ್ಲಿ ಎಡವಿತು.ಮಂಡ್ಯದಿಂದ -ಶ್ರೀರಂಗಪಟ್ಟಣದವರೆಗೆ ಭಜರಂಗ ಸೇನೆಯ ಬೈಕ್ ರ್ಯಾಲಿ

ಪಂತ್ ವಿಕೆಟ್ ಬೇಗ ವಿಕೆಟ್ ಒಪ್ಪಿಸಿ ಕ್ರೀಸ್​ನಿಂದ ಹೊರನಡೆದರು. ಆದರೆ ಮತ್ತೊಬ್ಬ ಆರಂಭಿಕ ಆಟಗಾರ ಇಶಾನ್ ಕಿಶನ್, ಉತ್ತಮ ಆರಂಭವನ್ನ ತಂದುಕೊಟ್ಟರೂ, 36 ರನ್​ಗಳಿಗೆ ಕ್ರೀಸ್​ನಿಂದ ನಿರ್ಗಮಿಸಬೇಕಾಯಿತು.

ಬಳಿಕ ಸೂರ್ಯಕುಮಾರ್ ಯಾದವ್ ಮಾತ್ರ ಎಂದಿನಂತೆಯೇ ತಮ್ಮ ಆಟವನ್ನ ಪ್ರದರ್ಶಿಸಿದರು. ಸ್ಫೋಟಕ ಬ್ಯಾಟಿಂಗ್ ನಡೆಸಿದರು

ಸೂರ್ಯಕುಮಾರ್, ಭರ್ಜರಿ ಶತಕ ಸಿಡಿಸಿ ಟಿ-20ಯಲ್ಲಿ ಐತಿಹಾಸಿಕ ದಾಖಲೆ ಬರೆದರು. 51 ಎಸೆತಗಳನ್ನು ಎದುರಿಸಿದ ಸೂರ್ಯ 7 ಸಿಕ್ಸರ್, 11 ಬೌಂಡರಿಗಳನ್ನ ಬಾರಿಸಿ ಮಿಂಚಿದರು. ಕೊನೆಯವರೆಗೂ ಅಜೆಯರಾಗಿಯೇ ಉಳಿದ ಸೂರ್ಯ 111 ರನ್​ಗಳಿಸಿದರು.

Share This Article
Leave a comment