March 31, 2023

Newsnap Kannada

The World at your finger tips!

MLA , harassment , News

Moodgere MLA Kumaraswamy was attacked by a group who tore his clothes ಮೂಡಗೆರೆ ಶಾಸಕ ಕುಮಾರಸ್ವಾಮಿಯವರ ಬಟ್ಟೆ ಹರಿದು ಹಲ್ಲೆ ಮಾಡಿದ ಗುಂಪು

ಮೂಡಗೆರೆ ಶಾಸಕ ಕುಮಾರಸ್ವಾಮಿಯವರ ಬಟ್ಟೆ ಹರಿದು ಹಲ್ಲೆ ಮಾಡಿದ ಗುಂಪು

Spread the love

ಮೂಡಿಗೆರೆ ಕ್ಷೇತ್ರದ ಶಾಸಕ ಎಂ.ಪಿ. ಕುಮಾರಸ್ವಾಮಿಯವರ ಮೇಲೆ ಕೆಲವರು ಹಲ್ಲೆ ನಡೆಸಿ ಬಟ್ಟೆ ಹರಿದಿರುವ ಘಟನೆ ಭಾನುವಾರ ಜರುಗಿದೆ.

ಉದ್ದೇಶಪೂರ್ವಕವಾಗಿ ನನ್ನ ಮೇಲೆ ಈ ಹಲ್ಲೆ ನಡೆಸಲಾಗಿದೆ ಎಂದು ಶಾಸಕರು ಆರೋಪಿಸಿದ್ದಾರೆ.ಹೃದಯ ರಕ್ತನಾಳದ ಸ್ಟಂಟ್ ದರ ಇಳಿಕೆ ಮಾಡಿದ ಕೇಂದ್ರ

ಮೂಡಿಗೆರೆ ತಾಲೂಕಿನ ಎಸ್ಟೇಟ್ ಕುಂದೂರಿನ ತೋಟದಲ್ಲಿ ಕಾಡಾನೆ ದಾಳಿಯಿಂದ ಶೋಭಾ ಎಂಬವರು ಮೃತಪಟ್ಟಿದ್ದರು. ಈ ವಿಷಯ ತಿಳಿದು ಶಾಸಕ ಕುಮಾರಸ್ವಾಮಿಯವರು ಸ್ಥಳಕ್ಕೆ ತೆರಳಿದ ವೇಳೆ ಸಾರ್ವಜನಿಕರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಶೋಭಾ ಸಾವಿನಿಂದ ಆಕ್ರೋಶಗೊಂಡಿದ್ದ ಸ್ಥಳೀಯರು ಶಾಸಕರು ಬಂದಾಗ ಅವರಿಗೆ ಘೇರಾವ್ ಹಾಕಿದ್ದಾರೆ, ಈ ವೇಳೆ ಪೊಲೀಸರು ಅಲ್ಲಿಂದ ಕರೆದುಕೊಂಡು ಹೋಗಲು ಮುಂದಾಗಿದ್ದಾರೆ. ಆಗ ಉದ್ರಿಕ್ತ ಗುಂಪು ಜೀಪಿನ ಮೇಲೆ ಕಲ್ಲು ತೂರಾಟ ನಡೆಸಿ ಶಾಸಕರಿಗೆ ಹಲ್ಲೆ ನಡೆಸಿದ್ದಾರೆ.

error: Content is protected !!