Karnataka

ಮನೆಗೊಬ್ಬ ಕುರುಬಣ್ಣ ಸಮಾವೇಶಕ್ಕೆ ಬಾರಣ್ಣ – ಕಾಗಿನೆಲೆ ಶ್ರೀ ಗಳ ಕರೆ:ಬೆಂಗಳೂರಿನಲ್ಲಿಂದು ಕುರುಬರ ಸಮಾವೇಶ

ಬೆಂಗಳೂರಿನಲ್ಲಿ ಭಾನುವಾರ ‘ಎಸ್‌ಟಿ ನಮ್ಮ ಹಕ್ಕು’ ಕುರುಬರ ಬೃಹತ್ ಸಮಾವೇಶ ನಡೆಯಲಿದೆ.

ಮಾದಾವರದ ಬಿಐಇಸಿ ಆವರಣದಲ್ಲಿ ಈ ಬೃಹತ್ ಕಾರ್ಯಕ್ರಮ ಆಯೋಜನೆಗೊಂಡಿದೆ. ಈ ಸಮಾವೇಶಕ್ಕಾಗಿ 15 ಲಕ್ಷ ರೊಟ್ಟಿ ಸೇರಿದಂತೆ ವಿವಿಧ ಖಾದ್ಯ ಗಳನ್ನು ತಯಾರಿಸಲಾಗಿದೆ.

ಮನೆಗೊಬ್ಬ ಕುರುಬಣ್ಣ ಸಮಾವೇಶಕ್ಕೆ ಬಾರಣ್ಣ ಎಂದು ಕಾಗಿನೆಲೆ ಪೀಠದ ನಿರಂಜನಾನಂದಪುರಿ ಶ್ರೀಗಳು ಸಮಾವೇಶಕ್ಕೆ ಬರುವಂತೆ ಕುರುಬರಿಗೆ ಕರೆ ನೀಡಿದ್ದಾರೆ. ಇಂದಿನ ಸಮಾವೇಶದಲ್ಲಿ 10 ಲಕ್ಷ ಕುರುಬ ಸಮುದಾಯದವರು ಭಾಗಿಯಾಗುವ ಸಾಧ್ಯತೆಯಿದೆ. ನಿರಂಜನಾನಂದಪುರಿ ಸ್ವಾಮೀಜಿ, ಈಶ್ವರಾನಂದ ಶ್ರೀಗಳು, ಕುರುಬ ಸಮುದಾಯದ ಸಚಿವರು, ಶಾಸಕರು, ರಾಜಕೀಯ ನಾಯಕರು ಭಾಗಿಯಾಗಲಿದ್ದಾರೆ. ಇಂದು ಬೆಳಗ್ಗೆ 11ಕ್ಕೆ ವೇದಿಕೆ ಕಾರ್ಯಕ್ರಮ ಶುರುವಾಗಲಿದೆ.

ಕುರುಬ ಸಮುದಾಯವನ್ನ ಪರಿಶಿಷ್ಟ ಪಂಗಡಕ್ಕೆ ಒಳಪಡಿಸುವಂತೆ ಕುರುಬರು ಶಕ್ತಿ ಪ್ರದರ್ಶನ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಭಾನುವಾರ ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ತಲೆದೋರಲಿದೆ.ಈ ಸಮಾವೇಶ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು 2000 ಪೋಲಿಸರನ್ನು ನಿಯೋಜಿಸಲಾಗಿದೆ.

Team Newsnap
Leave a Comment
Share
Published by
Team Newsnap

Recent Posts

ರಾಣೇಬೆನ್ನೂರು ಸಮೀಪ ಕಾರು ಪಲ್ಟಿಯಾಗಿ ನಾಲ್ವರು ಸಾವು : 6 ಮಂದಿಗೆ ಗಾಯ

ರಾಣೇಬೆನ್ನೂರು : ವೇಗವಾಗಿ ಚಲಿಸುತ್ತಿದ್ದ ಕಾರೊಂದು ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಪರಿಣಾಮ ನಾಲ್ವರು ಸಾವನ್ನಪ್ಪಿ 6 ಮಂದಿ ಗಾಯಗೊಂಡ… Read More

May 24, 2024

ಹೈಕೋರ್ಟ್ ವಕೀಲೆ ಚೈತ್ರಾ ಗೌಡ ಅನುಮಾನಾಸ್ಪದ ಸಾವು : ಸಂಪೂರ್ಣ ವಿವರ

ಬೆಂಗಳೂರು : ಹೈಕೋರ್ಟ್ ವಕೀಲರಾದ ಚೈತ್ರಾ ಗೌಡ ಅವರದ್ದು ಕೊಲೆಯಲ್ಲ, ಆತ್ಮಹತ್ಯೆ ಎಂದು ಪೊಲೀಸ್ ಅಧಿಕಾರಿಗಳ ಮೂಲಗಳು ತಿಳಿಸಿವೆ. ಚೈತ್ರಾ… Read More

May 24, 2024

16ನೇ ವಯಸ್ಸಿನ ಭಾರತೀಯ ಬಾಲಕಿ ಮೌಂಟ್‌ ಎವರೆಸ್ಟ್‌ ಶಿಖರ ಏರಿ ಸಾಧನೆ

ನವದೆಹಲಿ : 12ನೇ ತರಗತಿ ವಿದ್ಯಾರ್ಥಿನಿ ಕಾಮ್ಯ ಕಾರ್ತಿಕೇಯನ್‌ ವಿಶ್ವದ ಅತಿ ಎತ್ತರದ ಮೌಂಟ್‌ ಎವರೆಸ್ಟ್‌ ಶಿಖರವನ್ನು ನೇಪಾಳ ಕಡೆಯಿಂದ… Read More

May 24, 2024

ಅರಮನೆ ಮಂಡಳಿ ಕಚೇರಿ ಮೇಲೆ ‘ಲೋಕಾ’ದಾಳಿ : ಲೆಕ್ಕವೇ ಇಲ್ಲದ 4 ಲಕ್ಷ ವಶ

ಮೈಸೂರು: ಅರಮನೆ ಮಂಡಳಿ ಕಚೇರಿ ಮೇಲೆ ಗುರುವಾರ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ದಾಳಿಯ ವೇಳೆ ಪ್ರವೇಶ ದ್ವಾರ… Read More

May 23, 2024

‘ COMEDK ಪರೀಕ್ಷೆ’ ಫಲಿತಾಂಶ ನಾಳೆ ಮಧ್ಯಾಹ್ನ 2 ಗಂಟೆಗೆ ಬಿಡುಗಡೆ

ಬೆಂಗಳೂರು : ನಾಳೆ ಮಧ್ಯಾಹ್ನ 2 ಗಂಟೆಗೆ : ಕರ್ನಾಟಕದ ವೈದ್ಯಕೀಯ, ಇಂಜಿನಿಯರಿಂಗ್ ಮತ್ತು ದಂತ ವೈದ್ಯಕೀಯ ಕಾಲೇಜುಗಳ ಒಕ್ಕೂಟ… Read More

May 23, 2024

ಲೋಕ ಚುನಾವಣೆ: ಮತ ಎಣಿಕೆ ಕಾರ್ಯದಲ್ಲಿ ಯಾವುದೇ ಲೋಪ ಬೇಡ: ಡಾ. ಕುಮಾರ

ಮಂಡ್ಯ : ಲೋಕಸಭಾ ಸಾರ್ವತ್ರಿಕ ಚುನಾವಣೆ 2024 ರ ಮತ ಎಣಿಕೆ ಕಾರ್ಯ ಜೂನ್ 4 ರಂದು ನಡೆಯಲಿದೆ, ಉತ್ತಮ… Read More

May 23, 2024