crime

ಹೈಕೋರ್ಟ್ ವಕೀಲೆ ಚೈತ್ರಾ ಗೌಡ ಅನುಮಾನಾಸ್ಪದ ಸಾವು : ಸಂಪೂರ್ಣ ವಿವರ

ಬೆಂಗಳೂರು : ಹೈಕೋರ್ಟ್ ವಕೀಲರಾದ ಚೈತ್ರಾ ಗೌಡ ಅವರದ್ದು ಕೊಲೆಯಲ್ಲ, ಆತ್ಮಹತ್ಯೆ ಎಂದು ಪೊಲೀಸ್ ಅಧಿಕಾರಿಗಳ ಮೂಲಗಳು ತಿಳಿಸಿವೆ.

ಚೈತ್ರಾ ಗೌಡ ಮೇ 11ರಂದು ಸಂಜಯನಗರದ ಅಣ್ಣಯ್ಯಪ್ಪ ಲೇಔಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು.

ಆದರೆ ಚೈತ್ರಾ ಕುಟುಂಬಸ್ಥರು ಕೊಲೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದು ,ದೂರಿನ ಅನ್ವಯ ಕೆಎಎಸ್ ಅಧಿಕಾರಿ ಶಿವಕುಮಾರ್‌ನನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಪತಿ ಶಿವಕುಮಾರ್ ವಿಚಾರಣೆ ವೇಳೆ , ಪತ್ನಿಯೊಂದಿಗೆ ಯಾವುದೇ ವೈಷಮ್ಯ ಇರಲಿಲ್ಲ. ಹಣಕಾಸಿನ ತೊಂದರೆಯೂ ಇರಲಿಲ್ಲ .ಆದರೆ ಚೈತ್ರಾ ಇತ್ತೀಚೆಗೆ ಖಿನ್ನತೆಗೆ ಒಳಗಾಗಿದ್ದರು ಎಂದು ಹೇಳಿದ್ದಾರೆ.

ಚೈತ್ರಾ , ಕುಟುಂಬಸ್ಥರೊಂದಿಗೆ ಮಾತನಾಡುವಾಗ ಮೂರು ತಿಂಗಳ ಹಿಂದೆಯೇ ಸಾಯೋ ಮಾತುಗಳನ್ನಾಡಿದ್ದರು, ಆಗ ಕುಟುಂಬಸ್ಥರೇ ಧೈರ್ಯತುಂಬಿದ್ದಾರೆ.

ಸಂಜಯ್ ನಗರದ ಪೊಲೀಸರಿಗೆ, ಮನೆಯಲ್ಲಿ ಸಿಕ್ಕ ಡೆತ್ ನೋಟ್‌ ಚೈತ್ರಾ ಅವರೇ ಬರೆದಿದ್ದಾರೆ ಎಂದು ದೃಡವಾಗಿದೆ.16ನೇ ವಯಸ್ಸಿನ ಭಾರತೀಯ ಬಾಲಕಿ ಮೌಂಟ್‌ ಎವರೆಸ್ಟ್‌ ಶಿಖರ ಏರಿ ಸಾಧನೆ

ಮರಣೋತ್ತರ ಪರೀಕ್ಷೆಯಲ್ಲೂ ಆಕೆ ಆತ್ಮಹತ್ಯೆ ಮಾಡಿಕೊಂಡಿರುವುದು ದೃಢಪಟ್ಟಿದ್ದು , ಸಂಜಯ್‌ನಗರ ಪೊಲೀಸರು ತನಿಖೆ ನಡೆಸಿ ಹಿರಿಯ ಅಧಿಕಾರಿಗಳಿಗೆ ವರದಿ ನೀಡಿದ್ದಾರೆ.

Team Newsnap
Leave a Comment

Recent Posts

ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India

ನವದೆಹಲಿ ,ಜೂನ್ 16 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 65,900 ರೂಪಾಯಿ ದಾಖಲಾಗಿದೆ. 24… Read More

June 16, 2024

ಸೋಲಿಗೆ ಹತಾಶಯ ಬೇಡ,ದೃಢ ಸಂಕಲ್ಪದಿಂದ ಮುನ್ನುಗ್ಗಿ – ಎಂ.ಕೆ. ಸವಿತ

ಮೈಸೂರು : ಸೋಲಿಗೆ ಹತಾಶರಾಗಬೇಡಿ. ದೃಢ ಸಂಕಲ್ಪ ಮಾಡಿ ಮುನ್ನುಗಿದರೆ ಗೆಲುವು ಸುಲಭ ಎಂದು ಮೈಸೂರು ವಿಭಾಗದ ಪ್ರವಾಸೋಧ್ಯಮ ಇಲಾಖೆಯ… Read More

June 15, 2024

ಪೆಟ್ರೋಲ್ ಡಿಸೇಲ್ ಮೇಲಿನ ಸೆಸ್ ದರ ಹೆಚ್ಚಿಸಿದ ರಾಜ್ಯ ಸರ್ಕಾರ

ಬೆಂಗಳೂರು : ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡ ಬಳಿಕ ರಾಜ್ಯ ಸರ್ಕಾರ ಜನತೆಗೆ ಬಹು ದೊಡ್ಡ ಶಾಕ್ ನೀಡಿದೆ. ಪೆಟ್ರೋಲ್,… Read More

June 15, 2024

ಶೀಘ್ರದಲ್ಲೇ ಜಿಪಂ, ತಾ ಪಂ ಚುನಾವಣೆ: ಸಿಎಂ ಸಿದ್ದರಾಮಯ್ಯ

ಮೈಸೂರು: ರಾಜ್ಯದಲ್ಲಿ ಶೀಘ್ರದಲ್ಲೇ ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿ ಚುನಾವಣೆ ನಡೆಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಮೈಸೂರಿನಲ್ಲಿ ಸುದ್ದಿಗಾರರ… Read More

June 15, 2024

ಚನ್ನಪಟ್ಟಣ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಕೇಂದ್ರ ಸಚಿವ ಎಚ್ ಡಿ ಕೆ

ಬೆಂಗಳೂರು : ಕೇಂದ್ರದ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ… Read More

June 15, 2024

ರೇಣುಕಾಸ್ವಾಮಿ ಹತ್ಯೆ ಪ್ರಕರಣ : ದರ್ಶನ್‌ ರವರಿಂದ ಸ್ಪೋಟಕ ಮಾಹಿತಿ

ಬೆಂಗಳೂರು : ಶೆಡ್‌ನಿಂದ ನಾನು ಬಂದ ಮೇಲೆ ಇವರೆಲ್ಲರು ಸೇರಿ ಹೀಗೆ ಮಾಡಿ ನನ್ನ ತಲೆಗೆ ತಂದಿದ್ದಾರೆ ಎಂದು ದರ್ಶನ್‌… Read More

June 15, 2024