16ನೇ ವಯಸ್ಸಿನ ಭಾರತೀಯ ಬಾಲಕಿ ಮೌಂಟ್‌ ಎವರೆಸ್ಟ್‌ ಶಿಖರ ಏರಿ ಸಾಧನೆ

Team Newsnap
1 Min Read

ನವದೆಹಲಿ : 12ನೇ ತರಗತಿ ವಿದ್ಯಾರ್ಥಿನಿ ಕಾಮ್ಯ ಕಾರ್ತಿಕೇಯನ್‌ ವಿಶ್ವದ ಅತಿ ಎತ್ತರದ ಮೌಂಟ್‌ ಎವರೆಸ್ಟ್‌ ಶಿಖರವನ್ನು ನೇಪಾಳ ಕಡೆಯಿಂದ ಏರುವ ಮೂಲಕ ಸಾಧನೆ ಮಾಡಿ ಅತ್ಯಂತ ಕಿರಿಯ ಭಾರತೀಯ ವರ್ವತಾರೋಹಿ ಎನಿಸಿಕೊಂಡಿದ್ದಾರೆ.

ಕಾಮ್ಯ ಕಾರ್ತಿಕೇಯನ್‌ ( 16 ) ಭಾರತೀಯ ನೌಕಾಪಡೆಯ ಅಧಿಕಾರಿ ಮಗಳು ,ತನ್ನ ತಂದೆ ಜೊತೆ ಏ.3 ರಂದು ಮೌಂಟ್‌ ಎವರೆಸ್ಟ್‌ ಏರುವ ಕಾರ್ಯ ಶುರುಮಾಡಿ , ಮೇ 20 ರಂದು 8,849 ಮೀಟರ್‌ ಎವರೆಸ್ಟ್‌ ಯಶಸ್ವಿಯಾಗಿ ಏರಿದ್ದಾರೆ.

ಮೌಂಟ್‌ ಎವರೆಸ್ಟ್‌ ಏರಿದ ವಿಶ್ವದ ಎರಡನೇ ಕಿರಿಯ ಹುಡುಗಿ ಮತ್ತು ನೇಪಾಳದ ಕಡೆಯಿಂದ ವಿಶ್ವದ ಅತಿ ಎತ್ತರದ ಶಿಖರವನ್ನು ಏರಿದ ಕಿರಿಯ ಭಾರತೀಯ ಪರ್ವತಾರೋಹಿಯಾಗಿದ್ದಾರೆ .ಅರಮನೆ ಮಂಡಳಿ ಕಚೇರಿ ಮೇಲೆ ‘ಲೋಕಾ’ದಾಳಿ : ಲೆಕ್ಕವೇ ಇಲ್ಲದ 4 ಲಕ್ಷ ವಶ

2020 ರಲ್ಲಿ ದಕ್ಷಿಣ ಅಮೇರಿಕಾ ಮತ್ತು ಏಷ್ಯಾದ ಹೊರಗಿನ ಅತಿ ಎತ್ತರದ ಶಿಖರವಾದ ಮೌಂಟ್ ಅಕೊನ್‌ಕಾಗುವಾವನ್ನು ಏರಿದ ವಿಶ್ವದ ಅತ್ಯಂತ ಕಿರಿಯ ಹುಡುಗಿಯಾಗಿದ್ದಾರೆ ಮತ್ತು 7 ಖಂಡಗಳ 6 ಎತ್ತರದ ಶಿಖರಗಳನ್ನು ಏರಲು ಅಪಾರ ಧೈರ್ಯವನ್ನು ತೋರಿಸಿದ್ದಕ್ಕಾಗಿ ಭಾರತೀಯ ನೌಕಾಪಡೆಯು ಕಾಮ್ಯಳನ್ನು ಶ್ಲಾಘಿಸಿದೆ .

Share This Article
Leave a comment