Main News

16ನೇ ವಯಸ್ಸಿನ ಭಾರತೀಯ ಬಾಲಕಿ ಮೌಂಟ್‌ ಎವರೆಸ್ಟ್‌ ಶಿಖರ ಏರಿ ಸಾಧನೆ

ನವದೆಹಲಿ : 12ನೇ ತರಗತಿ ವಿದ್ಯಾರ್ಥಿನಿ ಕಾಮ್ಯ ಕಾರ್ತಿಕೇಯನ್‌ ವಿಶ್ವದ ಅತಿ ಎತ್ತರದ ಮೌಂಟ್‌ ಎವರೆಸ್ಟ್‌ ಶಿಖರವನ್ನು ನೇಪಾಳ ಕಡೆಯಿಂದ ಏರುವ ಮೂಲಕ ಸಾಧನೆ ಮಾಡಿ ಅತ್ಯಂತ ಕಿರಿಯ ಭಾರತೀಯ ವರ್ವತಾರೋಹಿ ಎನಿಸಿಕೊಂಡಿದ್ದಾರೆ.

ಕಾಮ್ಯ ಕಾರ್ತಿಕೇಯನ್‌ ( 16 ) ಭಾರತೀಯ ನೌಕಾಪಡೆಯ ಅಧಿಕಾರಿ ಮಗಳು ,ತನ್ನ ತಂದೆ ಜೊತೆ ಏ.3 ರಂದು ಮೌಂಟ್‌ ಎವರೆಸ್ಟ್‌ ಏರುವ ಕಾರ್ಯ ಶುರುಮಾಡಿ , ಮೇ 20 ರಂದು 8,849 ಮೀಟರ್‌ ಎವರೆಸ್ಟ್‌ ಯಶಸ್ವಿಯಾಗಿ ಏರಿದ್ದಾರೆ.

ಮೌಂಟ್‌ ಎವರೆಸ್ಟ್‌ ಏರಿದ ವಿಶ್ವದ ಎರಡನೇ ಕಿರಿಯ ಹುಡುಗಿ ಮತ್ತು ನೇಪಾಳದ ಕಡೆಯಿಂದ ವಿಶ್ವದ ಅತಿ ಎತ್ತರದ ಶಿಖರವನ್ನು ಏರಿದ ಕಿರಿಯ ಭಾರತೀಯ ಪರ್ವತಾರೋಹಿಯಾಗಿದ್ದಾರೆ .ಅರಮನೆ ಮಂಡಳಿ ಕಚೇರಿ ಮೇಲೆ ‘ಲೋಕಾ’ದಾಳಿ : ಲೆಕ್ಕವೇ ಇಲ್ಲದ 4 ಲಕ್ಷ ವಶ

2020 ರಲ್ಲಿ ದಕ್ಷಿಣ ಅಮೇರಿಕಾ ಮತ್ತು ಏಷ್ಯಾದ ಹೊರಗಿನ ಅತಿ ಎತ್ತರದ ಶಿಖರವಾದ ಮೌಂಟ್ ಅಕೊನ್‌ಕಾಗುವಾವನ್ನು ಏರಿದ ವಿಶ್ವದ ಅತ್ಯಂತ ಕಿರಿಯ ಹುಡುಗಿಯಾಗಿದ್ದಾರೆ ಮತ್ತು 7 ಖಂಡಗಳ 6 ಎತ್ತರದ ಶಿಖರಗಳನ್ನು ಏರಲು ಅಪಾರ ಧೈರ್ಯವನ್ನು ತೋರಿಸಿದ್ದಕ್ಕಾಗಿ ಭಾರತೀಯ ನೌಕಾಪಡೆಯು ಕಾಮ್ಯಳನ್ನು ಶ್ಲಾಘಿಸಿದೆ .

Team Newsnap
Leave a Comment

Recent Posts

ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India

ನವದೆಹಲಿ ,ಜೂನ್ 16 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 65,900 ರೂಪಾಯಿ ದಾಖಲಾಗಿದೆ. 24… Read More

June 16, 2024

ಸೋಲಿಗೆ ಹತಾಶಯ ಬೇಡ,ದೃಢ ಸಂಕಲ್ಪದಿಂದ ಮುನ್ನುಗ್ಗಿ – ಎಂ.ಕೆ. ಸವಿತ

ಮೈಸೂರು : ಸೋಲಿಗೆ ಹತಾಶರಾಗಬೇಡಿ. ದೃಢ ಸಂಕಲ್ಪ ಮಾಡಿ ಮುನ್ನುಗಿದರೆ ಗೆಲುವು ಸುಲಭ ಎಂದು ಮೈಸೂರು ವಿಭಾಗದ ಪ್ರವಾಸೋಧ್ಯಮ ಇಲಾಖೆಯ… Read More

June 15, 2024

ಪೆಟ್ರೋಲ್ ಡಿಸೇಲ್ ಮೇಲಿನ ಸೆಸ್ ದರ ಹೆಚ್ಚಿಸಿದ ರಾಜ್ಯ ಸರ್ಕಾರ

ಬೆಂಗಳೂರು : ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡ ಬಳಿಕ ರಾಜ್ಯ ಸರ್ಕಾರ ಜನತೆಗೆ ಬಹು ದೊಡ್ಡ ಶಾಕ್ ನೀಡಿದೆ. ಪೆಟ್ರೋಲ್,… Read More

June 15, 2024

ಶೀಘ್ರದಲ್ಲೇ ಜಿಪಂ, ತಾ ಪಂ ಚುನಾವಣೆ: ಸಿಎಂ ಸಿದ್ದರಾಮಯ್ಯ

ಮೈಸೂರು: ರಾಜ್ಯದಲ್ಲಿ ಶೀಘ್ರದಲ್ಲೇ ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿ ಚುನಾವಣೆ ನಡೆಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಮೈಸೂರಿನಲ್ಲಿ ಸುದ್ದಿಗಾರರ… Read More

June 15, 2024

ಚನ್ನಪಟ್ಟಣ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಕೇಂದ್ರ ಸಚಿವ ಎಚ್ ಡಿ ಕೆ

ಬೆಂಗಳೂರು : ಕೇಂದ್ರದ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ… Read More

June 15, 2024

ರೇಣುಕಾಸ್ವಾಮಿ ಹತ್ಯೆ ಪ್ರಕರಣ : ದರ್ಶನ್‌ ರವರಿಂದ ಸ್ಪೋಟಕ ಮಾಹಿತಿ

ಬೆಂಗಳೂರು : ಶೆಡ್‌ನಿಂದ ನಾನು ಬಂದ ಮೇಲೆ ಇವರೆಲ್ಲರು ಸೇರಿ ಹೀಗೆ ಮಾಡಿ ನನ್ನ ತಲೆಗೆ ತಂದಿದ್ದಾರೆ ಎಂದು ದರ್ಶನ್‌… Read More

June 15, 2024