ಜೂನ್ ಅಂತಿಮ ವಾರವೇ ದ್ವಿತೀಯ PUC Result : ಈ ಬಾರಿ ಪರೀಕ್ಷೆಗೆ 11379 ವಿದ್ಯಾರ್ಥಿಗಳು ಗೈರು

Team Newsnap
1 Min Read

ಕಳೆದ ವರ್ಷ ಕೊರೊನಾದಿಂದ ತಡವಾಗಿದ್ದ ಎರಡನೇ ವರ್ಷದ ಪಿಯುಸಿ ಫಲಿತಾಂಶ (PUC Result) ಈ ಬಾರಿ ಬೇಗ ಲಭ್ಯವಾಗಲಿದೆ. ಜೂನ್ ಕೊನೆಯ ವಾರವೇ ಫಲಿತಾಂಶ ನೀಡಲು ಸಿದ್ದತೆ ಮಾಡಲಾಗುತ್ತಿದೆ. ಒಂದು ಆತಂಕದ ಸಂಗತಿ ಎಂದರೆ ಈ ಬಾರಿ ಪಿಯು ಪರೀಕ್ಷೆಗೆ 11379 ವಿದ್ಯರ್ಥಿಗಳು ಗೈರಾಗಿದ್ದಾರೆ.

ಈ ಬಾರಿ ಪಿಯು ಪರೀಕ್ಷೆ ಅಂತ್ಯಗೊಳ್ಳುತ್ತಿದ್ದಂತೆ ರಜಾ ದಿನಗಳಲ್ಲಿ ಮೌಲ್ಯಮಾಪನ ಕಾರ್ಯ ಆರಂಭಿಸಲಾಗುವುದು. ಮೇ 20 ರಿಂದ ಜೂನ್ 15 ರೊಳಗೆ ಮೌಲ್ಯಮಾಪನ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ.

ಉನ್ನತ ಶಿಕ್ಷಣ ವ್ಯಾಸಾಂಗಕ್ಜೆ ಪರೀಕ್ಷೆ. ಬರೆಯುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ದೃಷ್ಠಿಯಿಂದ ಹೆಚ್ಚು ಉಪನ್ಯಾಸಕರನ್ನು ಮೌಲ್ಯಮಾಪನ ಕೆಲಸಕ್ಕೆ ನಿಯೋಜನೆ ಮಾಡಲಾಗಿದೆ ಹೀಗಾಗಿ ಜೂನ್ ಅಂತ್ಯದೊಳಗೆ
ಫಲಿತಾಂಶ ಹೊರ ಬೀಳಲಿದೆ.

ಈ ಬಾರಿ ಪಿಯುಸಿ ಪರೀಕ್ಷೆಗೆ 11379 ವಿದ್ಯಾರ್ಥಿಗಳು ಗೈರಾಗಿದ್ದಾರೆ, ಉಡುಪಿಯ 6 ವಿದ್ಯಾರ್ಥಿನಿಯರನ್ನು ಹೊರತುಪಡಿಸಿ ಬೆಂಗಳೂರು ಸೇರಿದಂತೆ ಉಳಿದ ಎಲ್ಲಾ ಕೇಂದ್ರದಲ್ಲೂ ಹಿಜಾಬ್ ಧರಿಸದೇ ಮುಸ್ಲೀಂ ವಿದ್ಯಾರ್ಥಿನಿಯರು ಪರೀಕ್ಷೆ ಬರೆದಿದ್ದಾರೆ.

Share This Article
Leave a comment