ಜಮ್ಮು – ಕಾಶ್ಮೀರ ಪ್ರವಾಸ ಆರಂಭ : ಪ್ರಧಾನಿ ಮೋದಿ ರ್ಯಾಲಿ ಸ್ಥಳದಿಂದ 12 ಕಿ ಮೀ ದೂರದಲ್ಲಿ ಸ್ಪೋಟ

Team Newsnap
1 Min Read
Modi to Hubballi on January 12: Preparations for the rush ಜನವರಿ 12ರಂದು ಹುಬ್ಬಳ್ಳಿಗೆಮೋದಿ: ಭರದ ಸಿದ್ಧತೆ

ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ವಿಶೇಷ ಸ್ಥಾನಮಾನದ ಕಲಂ 370 ರದ್ದಾದ ನಂತರ ಇದೇ ಮೊದಲ ಬಾರಿಗೆ ಪ್ರಧಾನಿ ಇಂದು ಪ್ರವಾಸ ಆರಂಭಿಸಿದ ಬೆನ್ನಲ್ಲೇ ಪ್ರಧಾನಿ ರ್ಯಾಲಿ ಸ್ಥಳದಿಂದ 12KM ದೂರದಲ್ಲಿರುವ ಲೀಯಾನ ಗ್ರಾಮದಲ್ಲಿ ಸ್ಫೋಟವೊಂದು ಸಂಭವಿಸಿದೆ.

ಈ ಸ್ಫೋಟದ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ . ಸೇನಾ ಬಿಗಿ ಬಂದೋಬಸ್ತಿನ ನಡುವೆಯೂ ಈ ಘಟನೆ ಸಂಭವಿಸಿದೆ. ಆದರೆ ಯಾವುದೇ ಅನಾಹುತ ಸಂಭವಿಸಿಲ್ಲ.

ರಾಷ್ಟ್ರೀಯ ಪಂಚಾಯತ್ ದಿನವದ ಇಂದು ಪ್ರಧಾನಿ ಮೋದಿ ಜಮ್ಮುವಿನ ಸಂಬ ಜಿಲ್ಲೆಯ ಪಲ್ಲಿ ಪಂಚಾಯತ್ ನಿಂದ ಜಲ ನಿರ್ವಹಣೆ ಕುರಿತ ಸಮಾವೇಶವೊಂದನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

ಬನಿಹಾಲ್. -ಖಾಜಿಗುಂಡ್ ಮಧ್ಯೆ ಸರ್ವ ಋತುಗಳಲ್ಲಿ ಸಂಪರ್ಕ ಕಲ್ಪಿಸುವ ಸುರಂಗದ ಲೋಕಾರ್ಪಣೆ ಸೇರಿ 20 ಸಾವಿರ ಕೋಟಿ ರುಗಳ ವಿವಿಧ ಅಭಿವೃದ್ಧಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

Share This Article
Leave a comment