December 23, 2024

Newsnap Kannada

The World at your finger tips!

cm siddaramaiha

ಬೆಂ- ಮೈ ಹೆದ್ದಾರಿ ಅಪಘಾತ, ಸಾವಿನ ಸಂಖ್ಯೆ ಇಳಿಮುಖ – ಸಿಎಂ ಸಿದ್ದರಾಮಯ್ಯ

Spread the love

ಮಂಡ್ಯ – ಸರಣಿ ಅಪಘಾತ ಮತ್ತು ಸಾವಿನ ರಸ್ತೆ ಎಂದೇ ಬಿಂಬಿತವಾಗಿದ್ದ ಬೆಂಗಳೂರ – ಮೈಸೂರು ದಶ ಪಥ ಎಕ್ಸ್ ಪ್ರೆಸ್ ಹೈಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಮಂಡ್ಯ ಸಮೀಪ ಪರಿಶೀಲನೆ ಮಾಡಿದರು

ಮುಖ್ಯಮಂತ್ರಿಯಾದ ಬಳಿಕ ಜಿಲ್ಲೆಗೆ ಇದೇ ಪ್ರಪ್ರಥಮ ಬಾರಿಗೆ ಆಗಮಿಸಿದ ಸಿದ್ದರಾಮಯ್ಯ ಅವರು ಅಪಘಾತ ಹೆಚ್ಚಾಗಿ ಸಾವು-ನೋವು ಸಂಭವಿಸುತ್ತಿರುವ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಪರಿಶೀಲಿಸಿ ಅಪಘಾತ ತಡೆ ಬಗ್ಗೆ ಕೈಗೊಂಡಿರುವ ಕ್ರಮಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.

ಶಶಿಕಿರಣ ಕಲ್ಯಾಣ ಮಂಟಪದ ಬಳಿ (ಉಮ್ಮಡಹಳ್ಳಿ ಗೇಟ್ ) ಸುದ್ದಿಗಾರರ ಜೊತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ , ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ವೇಗಮಿತಿ ಇಲ್ಲದ ಕಾರಣ ಅಪಘಾತಗಳು ಹೆಚ್ಚಾಗಿ ಸಂಭವಿಸುತ್ತಿದ್ದವು. ಜೂನ್ ತಿಂಗಳಲ್ಲೇ ಹೆಚ್ಚು ಅಪಘಾತ ಆಗಿದ್ದವು. ಈಗ ಅಪಘಾತ ಮತ್ತು ಸಾವಿನ ಸಂಖ್ಯೆ ಇಳಿವಾಗಿದೆ ಎಂದರು. ಇದನ್ನು ಓದಿ – 146 ತಹಸೀಲ್ದಾರ್ ವರ್ಗಾವಣೆ- ಸರ್ಕಾರದ ಆದೇಶ

ಗೃಹ ಇಲಾಖೆ ವಾಹನಗಳ ವೇಗಕ್ಕೆ ಕಡಿವಾಣ ಹಾಕಿರುವ ಹಿನ್ನೆಲೆಯಲ್ಲಿ ಈ ತಿಂಗಳಲ್ಲಿ ಅಪಘಾತ ಪ್ರಮಾಣ ಕಡಿಮೆಯಾಗಿದೆ. ಸ್ಫೀಡ್ ಕಂಟ್ರೋಲ್ ನಿಂದ ಸಮಸ್ಯೆಗೆ ಕೊಂಚ ಪರಿಹಾರ ಸಿಕ್ಕಂತಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

cm siddu in highway

ಹೆದ್ದಾರಿ ನಿರ್ಮಾಣ ಅವೈಜ್ಞಾನಿಕವಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅವೈಜ್ಞಾನ ಎಂದು ಹೇಳಲ್ಲ. ಬದಲಿಗೆ ಆತುರ ಆತುರವಾಗಿ ಕಾಮಗಾರಿ ಮುಗಿಸಿದ್ದಾರೆ. ಹಿಂದಿನ ಸರ್ಕಾರ ಈ ವಿಷಯವಾಗಿ ಜವಾಬ್ದಾರಿ ಮರೆತು ನಡೆದುಕೊಂಡದೆ. ಈಗ ಇನ್ನೂ ಹೆಚ್ಚಿನ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕಿದೆ . ಈ ಕುರಿತಂತೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಗಮನಕ್ಕೂ ತಂದು ಈ ಕುರಿತಂತೆ ಸಭೆಗಳನ್ನು ಮಾಡಲಾಗಿದೆ ಎಂದರು.
ಹೆದ್ದಾರಿಯಲ್ಲಿ ಇನ್ನುಳಿದ ಕಾಮಗಾರಿಗೆ 1500 ಕೋಟಿ ರು ಅನುದಾನಕ್ಕೆ ಅನುಮೋದನೆ ದೊರೆಬೇಕಿದೆ, ಹೆದ್ದಾರಿ ವ್ಯಾಪ್ತಿಯ ನಗರಗಳಲ್ಲಿ ಬೈಪಾಸ್ ರಸ್ತೆ, ಅಂಡರ್ ಪಾಸ್, ಮೂಲಸೌಕರ್ಯ ಅಷ್ಟೇ ಅಲ್ಲದೆ ಸರ್ವಿಸ್ ರಸ್ತೆ ಸಮರ್ಪಕ ನಿರ್ಮಾಣಕ್ಕೆ ಸೂಚಿಸಲಾಗಿದೆ. ಎಂದು ಹೇಳಿದರು. ಇದನ್ನು ಓದಿ – 13,000 ಸಾರಿಗೆ ಸಿಬ್ಬಂದಿ ನೇಮಕ; ನಾಲ್ಕೂ ನಿಗಮಗಳಿಗೆ 5 ಸಾವಿರ ಬಸ್ – ರಾಮಲಿಂಗಾರೆಡ್ಡಿ


ಹೆದ್ದಾರಿಯಲ್ಲಿ ಟೋಲ್ ಸಂಗ್ರಹ ನಮ್ಮ ವ್ಯಾಪ್ತಿಯಲಿಲ್ಲ. ಹೆದ್ದಾರಿ ಪ್ರಾಧಿಕಾರ ಅದನ್ನು ಮಾಡುತ್ತಿದೆ ಎಂದು ಪ್ರಶ್ನೆ ಯೊಂದಕ್ಕೆ ಉತ್ತರಿಸಿದರು.

ಉಡುಪಿಯಲ್ಲಿ ಕಾಲೇಜು ವಿದ್ಯಾರ್ಥಿನಿಯರ ವಿಡಿಯೋ ಚಿತ್ರೀಕರಣದ ಬಗ್ಗೆ ಪೊಲೀಸರು ಎಫ್ಐಆರ್ ದಾಖಲೆಸಿದ್ದಾರೆ. ತನಿಖೆ ಪ್ರಗತಿಯಲ್ಲಿದೆ, ಕಾನೂನು ವ್ಯಾಪ್ತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು, ಬಿಜೆಪಿ ಪಕ್ಷದವರು ಎಲ್ಲದರಲ್ಲೂ ರಾಜಕಾರಣ ಮಾಡುತ್ತಾರೆ ಎಂದು ಮಾರ್ಮಿಕವಾಗಿ ನುಡಿದರು. ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚೆಲುವರಾಯಸ್ವಾಮಿ,ಜಿಲ್ಲಾಧಿಕಾರಿ ಡಾ. ಕುಮಾರ ಅಪರ ಜಿಲ್ಲಾಧಿಕಾರಿ ಡಾ. ಎಚ್ ಎಲ್ ನಾಗರಾಜು, ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಇತರರಿದ್ದರು.

Copyright © All rights reserved Newsnap | Newsever by AF themes.
error: Content is protected !!