ಅಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ- ಇಲ್ಲಿ ಕ್ಯಾಮೆರಾ, ಕ್ಯಾಮೆರಾ ಅಂತ ಹೊಡ್ಕೋತ್ತಾರೆ – ಇಬ್ರಾಹಿಂ

Team Newsnap
1 Min Read

ಬೆಂಗಳೂರು : ಮಣಿಪುರದಲ್ಲಿ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ನಡೆಯುತ್ತಿದೆ ಆದರೆ ಇಲ್ಲಿ ಕ್ಯಾಮೆರಾ, ಕ್ಯಾಮೆರಾ ಅಂತೀರಾ ಎಂದು ಉಡುಪಿ ವೀಡಿಯೋ ಪ್ರಕರಣ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಬಿಜೆಪಿ ವಿರುದ್ಧ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಶನಿವಾರ ಕಿಡಿಕಾರಿದರು

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಇಬ್ರಾಹಿಂ ಅವರು, ಕಾಂಗ್ರೆಸ್ ಮತ್ತು ಬಿಜೆಪಿಗರಿಗೆ ವೋಟ್ ಬ್ಯಾಂಕ್ ಮುಖ್ಯ. ಮಧ್ಯದಲ್ಲಿ ಶಿಕಾರಿ ನಾವು. ಇಬ್ಬರೂ ನಮ್ಮನ್ನು ತೋರಿಸಿ ವೋಟು ಮಾಡಿದರು. ಈಗ ಭಯೋತ್ಪಾದನೆ ಶುರುವಾಗುತ್ತಿದೆ ಎನ್ನುವುದೇ ಇವರಿಗೆ ಲೋಕಸಭಾ ವಿಷಯವಾಗಿದೆ. ಮಣಿಪುರದಲ್ಲಿ ಹೊತ್ತಿ ಉರಿಯುತ್ತಿದೆ. ಅದರ ಬಗ್ಗೆ ಮಾತನಾಡುತ್ತಿಲ್ಲ. ಮಣಿಪುರದಲ್ಲಿ ಹೆಣ್ಣುಮಕ್ಕಳ ಮೇಲೆ ರೇಪ್ ಆಗಿದೆ. ಇಲ್ಲಿ ಕ್ಯಾಮೆರಾ ಎನ್ನುತ್ತಿದ್ದೀರಾ ಎಂದು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡರು. 13,000 ಸಾರಿಗೆ ಸಿಬ್ಬಂದಿ ನೇಮಕ; ನಾಲ್ಕೂ ನಿಗಮಗಳಿಗೆ 5 ಸಾವಿರ ಬಸ್ – ರಾಮಲಿಂಗಾರೆಡ್ಡಿ.

ಕೆಜಿ ಹಳ್ಳಿ, ಡಿಜೆ ಹಳ್ಳಿ ಪ್ರಕರಣದ ಬಗ್ಗೆ ತನ್ವೀರ್ ಸೇಠ್ ಪತ್ರದ ವಿಚಾರವಾಗಿ ಮಾತನಾಡಿ, ನ್ಯಾಯಾಂಗ ತನಿಖೆ ಆಗಬೇಕು. ಇದು ಮತೀಯ ಗಲಭೆಯಲ್ಲ ಎಂದು ವರದಿ ಬಂದಿತ್ತು. ಎರಡು ತಂಡಗಳು ಡ್ರಗ್ಸ್ ಮಾಫಿಯಾ ನಡೆಸುತ್ತಿತ್ತು. ಡ್ರಗ್ಸ್ ಮಾರಾಟ ಮಾಡಲು ಆಗದವರು ಆ ದಿನ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ್ದಾರೆ ಎಂದು ಅವರು ಹೇಳಿದರು. ಬೆಂ- ಮೈ ಹೆದ್ದಾರಿ ಅಪಘಾತ, ಸಾವಿನ ಸಂಖ್ಯೆ ಇಳಿಮುಖ – ಸಿಎಂ ಸಿದ್ದರಾಮಯ್ಯ

ಆಗಿನ ಬಿಜೆಪಿ ಸರ್ಕಾರ ಎನ್‍ಐಎ ತನಿಖೆಗೆ ವಹಿಸಿತ್ತು. ಯಾಕೆ ಅದನ್ನು ಎನ್‍ಐಎ ತನಿಖೆಗೆ ಕೊಟ್ಟಿದ್ದು? ಅಲ್ಲೇನಾದರೂ ಕೊಲೆ ನಡೆದಿತ್ತಾ? ಹುಬ್ಬಳ್ಳಿ ವಿಚಾರವನ್ನು ಸಹ ಎನ್‍ಐಎಗೆ ವಹಿಸಿದ್ದೀರಿ. ಹುಬ್ಬಳ್ಳಿಯಲ್ಲಿ ಎಸ್‍ಪಿಗೆ ಧಿಕ್ಕಾರ ಕೂಗಿದರೆ ಕೇಸ್ ಹಾಕಲಾಗಿದೆ. ಗೃಹ ಸಚಿವರು ಇದನ್ನು ನ್ಯಾಯಾಂಗ ತನಿಖೆ ಮಾಡಿಸಲಿ. ತಪ್ಪು ಎಂದು ಗೊತ್ತಾದರೆ ಗಲ್ಲಿಗೆ ಹಾಕಲಿ. ಈಗ ಅಮಾಯಕರನ್ನು ಒಳಗೆ ಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Share This Article
Leave a comment