13,000 ಸಾರಿಗೆ ಸಿಬ್ಬಂದಿ ನೇಮಕ; ನಾಲ್ಕೂ ನಿಗಮಗಳಿಗೆ 5 ಸಾವಿರ ಬಸ್ – ರಾಮಲಿಂಗಾರೆಡ್ಡಿ

Team Newsnap
1 Min Read
  • 13,000 ಸಾರಿಗೆ ಸಿಬ್ಬಂದಿ ನೇಮಕ
  • ನಾಲ್ಕೂ ನಿಗಮಗಳಿಗೆ 5 ಸಾವಿರ ಬಸ್
  • ಬಿಎಂಟಿಸಿಗೆ ಹೊಸದಾಗಿ 1 ಸಾವಿರ ಬಸ್

ಬೆಂಗಳೂರು : ಶಾಂತಿನಗರದ ಬಿಎಂಟಿಸಿ ಕೇಂದ್ರ ಕಚೇರಿಯ ಮುಂಭಾಗದಲ್ಲಿ ಎಲೆಕ್ಟ್ರಿಕಲ್ ಪ್ರೋಟೊಟೈಪ್ ಬಸ್ ಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸೇವೆಯನ್ನು ಉತ್ತಮಗೊಳಿಸುವ ಸಲುವಾಗಿ ನಾಲ್ಕೂ ನಿಗಮಗಳಿಗೆ 5 ಸಾವಿರ ಬಸ್ ಗಳನ್ನು ಖರೀದಿ, ಅದರಲ್ಲಿ ಬಿಎಂಟಿಸಿಗೆ ಹೊಸದಾಗಿ 1 ಸಾವಿರ ಬಸ್ ಸೇರ್ಪಡೆ ಮಾಡಲಾಗುತ್ತಿದೆ ಎಂದು ಹೇಳಿದರು. ಅಪಘಾತವಾದ ಕಾರಿಗೆ ವಿದ್ಯುತ್ ಶಾಕ್ – ನೆರವಿಗೆ ಬಂದ ಇಬ್ಬರು ಸಾವು

13,000 ಸಾರಿಗೆ ಸಿಬ್ಬಂದಿ ನೇಮಕ

KSRTC , students , Reqcruitment
KSRTC recruitment in Karnataka, BMTC

2016ರ ನಂತ್ರ ಸಾರಿಗೆ ಸಿಬ್ಬಂದಿ ನೇಮಕಾತಿಯಾಗಿಲ್ಲ. ಈ ಹಿನ್ನಲೆಯಲ್ಲಿ ಶೀಘ್ರದಲ್ಲಿಯೇ ಹೊಸದಾಗಿ 13,000 ಸಾರಿಗೆ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳುವುದಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ಚಾಲಕ, ನಿರ್ವಾಹಕ ಮತ್ತು ಮೆಕ್ಯಾನಿಕಲ್ ಸೇರಿದಂತೆ ಒಟ್ಟು 13,000 ಸಾರಿಗೆ ಸಿಬ್ಬಂದಿಗಳ ನೇಮಕಕ್ಕೆ ಶೀಘ್ರವೇ ಅಧಿಸೂಚನೆ ಹೊರಡಿಲಾಗುತ್ತದೆ ಎಂದು ತಿಳಿಸಿದರು. 146 ತಹಸೀಲ್ದಾರ್ ವರ್ಗಾವಣೆ- ಸರ್ಕಾರದ ಆದೇಶ

2016ರ ನಂತ್ರ ಸಿಬ್ಬಂದಿ ಸಾರಿಗೆ ಸಿಬ್ಬಂದಿಗಳ ನೇಮಕಾತಿಯಾಗಿಲ್ಲ. ಈ ಹಿನ್ನಲೆಯಲ್ಲಿ 13,000 ಚಾಲಕರು, ಕಂಡಕ್ಟರ್, ಮೆಕ್ಯಾನಿಕಲ್ ನೇಮಕಾತಿ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರವು ಅನುಮತಿ ನೀಡಿದ ಬಳಿಕ, ಕೂಡಲೇ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಲಾಗುವುದು ಎಂದರು.

Share This Article
Leave a comment