146 ತಹಸೀಲ್ದಾರ್ ವರ್ಗಾವಣೆ- ಸರ್ಕಾರದ ಆದೇಶ

Team Newsnap
1 Min Read

ಬೆಂಗಳೂರು : ರಾಜ್ಯದಲ್ಲಿ 146 ತಹಸೀಲ್ದಾರ್ ಗಳ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ರಾಜ್ಯ ಸರ್ಕಾರವು ಶುಕ್ರವಾರ 146 ಮಂದಿ ಗ್ರೇಡ್-1 ಹಾಗೂ ಗ್ರೇಡ್-2 ತಹಸೀಲ್ದಾರ್ ಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದು, ಈ ಪೈಕಿ 22 ಮಂದಿ ತಹಸೀಲ್ದಾರ್ ಗಳನ್ನು ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳದಲ್ಲಿಯೇ ಮುಂದುವರೆಸಲು ವರ್ಗಾವಣೆಯ ಆದೇಶದಲ್ಲಿ ತಿಳಿಸಲಾಗಿದೆ. ಮದ್ದೂರಿನ ಸಾದೊಳಲಿನ ಮನೆಯಲ್ಲಿ ಹಾಡು ಹಗಲೇ ಕಳ್ಳತನ.

ಒಟ್ಟು ಮೂರು ಪಟ್ಟಿಯಲ್ಲಿ 146 ಮಂದಿ ತಹಸೀಲ್ದಾರ್ ವರ್ಗಾವಣೆ ಮಾಡಿದ್ದು, ಇನ್ನೂ ಹಲವರ ವರ್ಗವಣೆಗೆ ಮುಖ್ಯಮಂತ್ರಿಗಳ ಅನುಮೋದನೆಗೆ ಬಾಕಿ ಇದೆ.ಮೊದಲ ಪಟ್ಟಿಯಲ್ಲಿನ 84 ಮಂದಿ ವರ್ಗಾವಣೆ ಪೈಕಿ 11 ಮಂದಿಯನ್ನು ಹಾಲಿ ಸ್ಥಳದಲ್ಲೇ ಮುಂದುವರೆಸಲು ಅವಕಾಶ ಕಲ್ಪಿಸಲಾಗಿದೆ. ಅಪಘಾತವಾದ ಕಾರಿಗೆ ವಿದ್ಯುತ್ ಶಾಕ್ – ನೆರವಿಗೆ ಬಂದ ಇಬ್ಬರು ಸಾವು.

ಎರಡನೇ ಪಟ್ಟಿಯ 46 ಮಂದಿಯ ವರ್ಗಾವಣೆಯಲ್ಲಿ 9 ಮಂದಿಗೆ ಹಾಗೂ ಮೂರನೇ ಪಟ್ಟಿಯಲ್ಲಿ 16 ಮಂದಿ ವರ್ಗಾವಣೆಯಲ್ಲಿ ಇಬ್ಬರಿಗೆ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳದಲ್ಲೇ ಮುಂದುವರೆಸಲು ಸೂಚಿಸಲಾಗಿದೆ.

Share This Article
Leave a comment