ಮದ್ದೂರಿನ ಸಾದೊಳಲಿನ ಮನೆಯಲ್ಲಿ ಹಾಡು ಹಗಲೇ ಕಳ್ಳತನ

Team Newsnap
1 Min Read

ಮದ್ದೂರು : ಹಾಡ ಹಗಲೇ ಮನೆ ಬೀಗ ಮುರಿದು ಒಳ ನುಗ್ಗಿ ಚಿನ್ನಾಭರಣ ದೋಚಿರುವ ಘಟನೆ ಮದ್ದೂರು ತಾಲೂಕಿನ ಸಾದೊಳಲು ಗ್ರಾಮದಲ್ಲಿ ಶುಕ್ರವಾರ ಜರುಗಿದೆ.

ಸಾದೊಳಲಿನ ಚಿನ್ನಪ್ಪರ ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ಕಳ್ಳರು ಆಭರಣ ದೋಚಿ ಪರಾರಿಯಾಗಿದ್ದಾರೆ.

ಮನೆಯಲ್ಲಿದ್ದ ಬೀರು ಮುರಿದು ಅದರಲ್ಲಿದ್ದ 10 ಗ್ರಾಂ ಚಿನ್ನವನ್ನು ಕಳವು ಮಾಡಿದ್ದಾರೆ.

ಮದ್ದೂರು ಪಟ್ಟಣದ ನ್ಯಾಯಾಲಯಕ್ಕೆ ಚಿನ್ನಪ್ಪ ಹೋಗಿದ್ದರು, ಮನೆಯಲ್ಲಿ ಯಾರು ಇಲ್ಲದ ಮಧ್ಯಾಹ್ನ 1:30ರ ಸಮಯದಲ್ಲಿ ಹಂಚು ಹಾಕಿದ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ.ಭಾರೀ ಮಳೆ: ಹಾಸನ-ಮೈಸೂರು ರಸ್ತೆಯ ಫ್ಲೈಓವರ್ ಸ್ಲ್ಯಾಬ್ ಕುಸಿತ

ಮನೆಯವರು ಬಂದಾಗ ಕಳ್ಳತನ ನಡೆದಿರುವುದು ಕಂಡುಬಂದಿದೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮದ್ದೂರು ಪೊಲೀಸ್ ಠಾಣಾ ಪ್ರಕರಣ ದಾಖಲಿಸಲಾಗಿದೆ.

Share This Article
Leave a comment