ಭಾರೀ ಮಳೆ: ಹಾಸನ-ಮೈಸೂರು ರಸ್ತೆಯ ಫ್ಲೈಓವರ್ ಸ್ಲ್ಯಾಬ್ ಕುಸಿತ

Team Newsnap
1 Min Read
Heavy rain: Flyover slab collapses on Hassan-Mysore road ಭಾರೀ ಮಳೆ: ಹಾಸನ-ಮೈಸೂರು ರಸ್ತೆಯ ಫ್ಲೈಓವರ್ ಸ್ಲ್ಯಾಬ್ ಕುಸಿತ #BREAKINGNEWS

ಹಾಸನ: ಭಾರೀ ಮಳೆಗೆ ಫ್ಲೈಓವರ್ ಸ್ಲ್ಯಾಬ್‌ಗಳು ಹಾಗೂ ಮಣ್ಣು ಕುಸಿದಿರುವ ಘಟನೆ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಹಂಗರಹಳ್ಳಿ ಗ್ರಾಮದಲ್ಲಿ ನಡೆದಿದೆ.

ರಾಷ್ಟ್ರೀಯ ಹೆದ್ದಾರಿ-373 ಹಾಸನದಿಂದ ಮೈಸೂರಿಗೆ ಸಂಪರ್ಕ ಕಲ್ಪಿಸುವ ಬೇಲೂರು-ಬಿಳಿಕೆರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಹಂಗರಹಳ್ಳಿ ಬಳಿ ನಿರ್ಮಿಸಲಾಗಿತ್ತು.

ಫ್ಲೈಓವರ್ ನಿರ್ಮಾಣ ಹಂತದಲ್ಲಿರುವಾಗಲೇ ಎರಡು ಬಾರಿ ಕುಸಿದಿದ್ದರೂ ಗುತ್ತಿಗೆದಾರ ಹಾಗೂ ಅಧಿಕಾರಿಗಳು ಎಚ್ಚೆತ್ತುಕೊಂಡಿರಲಿಲ್ಲ, ಮಳೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ 3ನೇ ಬಾರಿಗೆ ಫ್ಲೈಓವರ್ ಸ್ಲ್ಯಾಬ್‌ಗಳು ಹಾಗೂ ತಳಪಾಯದ ಮಣ್ಣು ಕುಸಿದಿದೆ. KRS ನಲ್ಲಿ 110 ಅಡಿ ಗಡಿದಾಟಿದ ನೀರು :33 ಸಾವಿರ ಕ್ಯುಸೆಕ್ ಒಳಹರಿವು – ಕಬಿನಿ ಭರ್ತಿಗೆ 2 ಅಡಿ ಬಾಕಿ

ಪ್ರತಿನಿತ್ಯ ಈ ರಸ್ತೆಯಲ್ಲಿ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು, ಸಂಪೂರ್ಣ ಫ್ಲೈಓವರ್ ಕುಸಿಯುವ ಆತಂಕ ಎದುರಾಗಿದೆ. ಕಳಪೆ ಕಾಮಗಾರಿಯೇ ಫ್ಲೈಓವರ್ ಕುಸಿಯಲು ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಮಳೆ ಹೆಚ್ಚಾದರೆ ವಾಹನಗಳ ಸಂಚಾರ ಬಂದ್ ಆಗುವ ಸಾಧ್ಯತೆ ಎದುರಾಗಿದೆ.

Share This Article
Leave a comment