ಬಿಜೆಪಿ ರಾಷ್ಟ್ರೀಯ ಪಕ್ಷ , ಜೆಡಿಎಸ್ ಹೆಬ್ಬೆಟ್ಟು ಪಾರ್ಟಿ – ಸಚಿವ ಆರ್.ಅಶೋಕ್

Team Newsnap
1 Min Read

C M ಬಸವರಾಜ ಬೊಮ್ಮಾಯಿ ಹೆಬ್ಬೆಟ್ಟು ಎಂಬ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಕಂದಾಯ ಸಚಿವ ಆರ್. ಅಶೋಕ್ , ಬಿಜೆಪಿ ನ್ಯಾಷನಲ್ ಪಾರ್ಟಿ , ಜೆಡಿಎಸ್ ಹೆಬ್ಬೆಟ್ಟು ಪಾರ್ಟಿ ಎಂದು ತಿರುಗೇಟು ನೀಡಿದರು

ಚಿಕ್ಕಬಳ್ಳಾಪುರಜಿಲ್ಲೆಯ ಗೌರಿಬಿದನೂರು ತಾಲೂಕಿನ ಕೆ.ಕೆ.ಗೊಲ್ಲರಹಳ್ಳಿಯಲ್ಲಿ ಮಾತನಾಡಿದ ಅಶೋಕ್, ಬಿಜೆಪಿ ನ್ಯಾಷನಲ್ ಪಾರ್ಟಿ, ಜೆಡಿಎಸ್ ಹೆಬ್ಬೆಟ್ಟು ಪಾರ್ಟಿ, ಹೆಚ್.ಡಿ.ದೇವೇಗೌಡರ ಕುಟುಂಬದವರು ಹೇಳಿದ್ರೆ ಮಾತ್ರ ಹೆಬ್ಬೆಟ್ಟು ಹಾಕ್ತಾರೆ, ಬಿಜೆಪಿಯಲ್ಲಿ ಜೆಡಿಎಸ್ ನಂತೆ ಕುಟುಂಬ ರಾಜಕಾರಣ ಇಲ್ಲ ಎಂದು ಹೇಳಿದ್ದಾರೆ.ಸಂಕೋಚ ನಾಚಿಕೆಗೆ ಲಿಂಗದ ಹಂಗೇನು? (ಬ್ಯಾಂಕರ್ಸ್ ಡೈರಿ)

ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಬೀಚಗಾನಹಳ್ಳಿ ಗ್ರಾಮದಲ್ಲಿ ಪಂಚರತ್ನ ರಥಯಾತ್ರೆಯನ್ನು ಉದ್ದೇಶಿಸಿ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ, ಬಿಜೆಪಿ ಸರ್ಕಾರ ಬಂದ ವೇಳೆಯೇ ಗಡಿ ವಿವಾದ ಬರುತ್ತೆ. ಬೊಮ್ಮಾಯಿ ಹೆಬ್ಬೆಟ್ಟಿನ ಸಿಎಂ. ಹೊರನೋಟಕ್ಕೆ ಕನ್ನಡಿಗರಿಗೆ ಮುಂದೆ ಹೇಳೋದೇ ಬೇರೆ ಅಂತಿಮವಾಗಿ ದೆಹಲಿ ನಾಯಕರ ಮುಂದೆ ಕೈಕಟ್ಟಿ ನಿಲ್ಲುತ್ತಾರೆಂದು ಟೀಕಿಸಿದ್ದಾರೆ.

Share This Article
Leave a comment