ಹೊಸಕೋಟೆ ಬಳಿ ಹಳ್ಳಕ್ಕೆ ಉರುಳಿದ KSRTC ಬಸ್ : 12 ಜನರಿಗೆ ಗಾಯ, ಮೂವರ ಸ್ಥಿತಿ ಗಂಭೀರ

Team Newsnap
1 Min Read
KSRTC bus fell into a ditch near Hoskote: 12 injured, three in critical condition ಹೊಸಕೋಟೆ ಬಳಿ ಹಳ್ಳಕ್ಕೆ ಉರುಳಿದ KSRTC ಬಸ್ : 12 ಜನರಿಗೆ ಗಾಯ, ಮೂವರ ಸ್ಥಿತಿ ಗಂಭೀರ

ಚಾಲಕನ ಅಜಾಗರೂಕತೆಯಿಂದ ಬಸ್ ಹಳ್ಳಕ್ಕೆ ಬಿದ್ದು 15 ಮಂದಿಗೆ ಗಾಯಗಳಾಗಿ, ಮೂವರ ಸ್ಥಿತಿ ಗಂಭೀರವಾದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಅತ್ತಿವಟ್ಟ ಬಳಿ ನಡೆದಿದೆ.

ಕೋಲಾರ ಹೊಸಕೋಟೆ ಹೆದ್ದಾರಿ 75 ರ ಅತ್ತಿವಟ್ಟ ಬಳಿ ಈ ಘಟನೆ ನಡೆದಿದೆ ಕೆಎಸ್‍ಆರ್‌ಟಿಸಿ ಬಸ್ ಹಳ್ಳಕ್ಕೆ ಬಿದ್ದಿದೆ. ಮಂತ್ರಾಲಯದಲ್ಲಿದ್ದ ಕೋಲಾರಕ್ಕೆ ಹೋಗುತ್ತಿದ್ದ ಬಸ್ ಚಾಲಕನ ಅಜಾಗರೂಕತೆಯಿಂದ ಘಟನೆ ನಡೆದಿದೆ.ಬಿಜೆಪಿ ರಾಷ್ಟ್ರೀಯ ಪಕ್ಷ , ಜೆಡಿಎಸ್ ಹೆಬ್ಬೆಟ್ಟು ಪಾರ್ಟಿ – ಸಚಿವ ಆರ್.ಅಶೋಕ್

ಅತೀ ವೇಗವಾಗಿ ಬಂದು ಹೆದ್ದಾರಿಯ ಒಂದು ರಸ್ತೆಯಿಂದ ಮತ್ತೊಂದು ರಸ್ತೆಗೆ ಬಂದು ಸರ್ವೀಸ್ ರಸ್ತೆ ಪಕ್ಕದಲ್ಲಿದ್ದ ಹಳ್ಳಕ್ಕೆ ಬಸ್ ಇಳಿದಿದೆ. ಈ ರಭಸಕ್ಕೆ ಬಸ್ ನಲ್ಲಿದ್ದ ಎಲ್ಲರೂ ಸಹ ಚೆಲ್ಲಾಪಿಲ್ಲಿಯಾಗಿ ಮೂರು ಮಂದಿಯ ಸ್ಥಿತಿ ಗಂಭೀರವಾಗಿದೆ.

Share This Article
Leave a comment