ಬೈಕ್​​ಗೆ ಬಿಜೆಪಿ MLC ರವಿಕುಮಾರ್​​ ಕಾರು ಡಿಕ್ಕಿ – ಸವಾರನಿಗೆ ಗಂಭೀರ ಗಾಯ: MLC ದರ್ಪ

Team Newsnap
1 Min Read
BJP MLC Ravikumar's car collides with bike - rider seriously injured ಬೈಕ್​​ಗೆ ಬಿಜೆಪಿ MLC ರವಿಕುಮಾರ್​​ ಕಾರು ಡಿಕ್ಕಿ - ಸವಾರನಿಗೆ ಗಂಭೀರ ಗಾಯ: MLC ದರ್ಪ

ಬಿಜೆಪಿ ವಿಧಾನ ಪರಿಷತ್ ಸದಸ್ಯ ರವಿ ಕುಮಾರ್ ಕಾರು, ‌ಬೈಕ್​ಗೆ ಡಿಕ್ಕಿ ಹೊಡೆದ ಘಟನೆ ಕೋಲಾರದ ಲಕ್ಷ್ಮಿ ಸಾಗರ ಗೇಟ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಗೋಪಾಲ್ (45) ಗಾಯಾಗೊಂಡ ಬೈಕ್​​ ಸವಾರ.ವಿಧಾನ ಪರಿಷತ್ ಸದಸ್ಯೆ ರವಿ ಕುಮಾರ್ ಕಾರು ಬೈಕ್​​ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆಸಿದ ಬಳಿಕ ದರ್ಪ ತೋರಿದ್ದಾರೆ.ಕಳ್ಳತನ ಮಾಡುತ್ತಿದ್ದ ದಂಪತಿ ಬಂಧನ – ಬಂಧಿತರಿಂದ 5 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನ ವಶಕ್ಕೆ

ಅಪಘಾತವಾದರೂ ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸಲು ಹಿಂದೇಟು ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಇನ್ನು ಅಲ್ಲೇ ನಿಂತಿದ್ದ ಸ್ಥಳೀಯರು ಎಂಎಲ್​​ಸಿ ರವಿ ಕುಮಾರ್​​ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ನಿನ್ಯಾವ ಸೀಮೆ ಎಂ.ಎಲ್‌.ಸಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ ಕೂಡಲೇ ಘಟನಾ ಸ್ಥಳಕ್ಕೆ ನರಸಾಪುರ ಪೋಲೀಸರು ಭೇಟಿ ನೀಡಿ ಪರಿಶೀಲಿಸಿದರು.

Share This Article
Leave a comment