ಕಳ್ಳತನ ಮಾಡುತ್ತಿದ್ದ ದಂಪತಿ ಬಂಧನ – ಬಂಧಿತರಿಂದ 5 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನ ವಶಕ್ಕೆ

Team Newsnap
1 Min Read

ಬೆಂಗಳೂರಿನಲ್ಲಿ ಬೀಗ ಹಾಕಿದ್ದ ಮನೆ ದೋಚುತ್ತಿದ್ದ ದಂಪತಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ, ನಾಗರಾಜ್ ಮತ್ತು ರಮ್ಯ ಬಂಧಿತ ದಂಪತಿ. ಇವರಿಬ್ಬರೂ ಕಳ್ಳತನವನ್ನೇ ವೃತ್ತಿ ಮಾಡ್ಕೊಂಡಿದ್ದರು. ಬೀಗ ಹಾಕಿದ್ದ ಮನೆಗಳು ಇವರ ಟಾರ್ಗೆಟ್ ಆಗಿತ್ತು.

ಮೈಸೂರಿನ ರಮ್ಯ ಮತ್ತು ಬೆಂಗಳೂರಿನ ಉತ್ತರಹಳ್ಳಿ ಮೂಲದ ನಾಗರಾಜ್ ನಡುವೆ ಪರಿಚಯವಾಗಿತ್ತು. ಬಳಿಕ ಇಬ್ಬರೂ ಕೂಡ ಇನ್‍ಸ್ಟಾಗ್ರಾಮ್ ಮೂಲಕ ಚಾಟ್ ಮಾಡಿಕೊಂಡು ಮತ್ತಷ್ಟು ಸ್ನೇಹ ಬೆಳೆಸಿಕೊಂಡಿದ್ದರು.

ಈ ಸ್ನೇಹ ಬಳಿಕ ಪ್ರೀತಿಗೆ ತಿರುಗಿತ್ತು. ನಂತರ ಮದುವೆಯಾಗಿದ್ದರು. ಮದುವೆಯ ಬಳಿಕ ನಾಗರಾಜ್ ಮತ್ತು ರಮ್ಯ ಸೇರಿಕೊಂಡು ಕಳ್ಳತನ ಮಾಡಲು ಶುರು ಮಾಡಿದ್ದರು. ಈಗಿನ ರೌಡಿಗಳೇ ಮುಂದಿನ ಬಿಜೆಪಿ ನಾಯಕರು – ಕುಟುಕಿದ ಡಾ. H C ಮಹದೇವ

ಇಬ್ಬರು ಪ್ರಮುಖ ರಸ್ತೆಗಳಲ್ಲಿ ತಿರುಗಿ ವಸತಿ ಸ್ಥಳಗಳಲ್ಲಿ ಬೀಗ ಹಾಕಿದ್ದ ಮನೆಗಳನ್ನು ಗುರುತಿಸಿ ಕಳ್ಳತನ ಮಾಡುತ್ತಿದ್ದರು ನಾಗರಾಜ್ ಕಳ್ಳತನ ಮಾಡಲು ಮನೆ ಒಳಗೆ ಹೋಗಿದ್ರೆ ರಮ್ಯ ಬಾಗಿಲಲ್ಲಿ ನಿಂತು ಕಾಯುತಿದ್ಲು. ಯಾರಾದ್ರು ಬಂದ್ರೆ ನಾಗರಾಜ್‍ಗೆ ಸಿಗ್ನಲ್ ಕೊಟ್ಟು ನಂತ್ರ ಸ್ಥಳದಿಂದ ಎಸ್ಕೇಪ್ ಆಗ್ತಿದ್ರು.

ಕದ್ದ ಚಿನ್ನವನ್ನು ರಮ್ಯ ಅಡಮಾನ ಇಟ್ಟು ಹಣ ಪಡೆಯುತ್ತಿದ್ದರು. ಹೀಗೆ ಜೀವನ ನಡೆಸುತ್ತಿದ್ದ ಜೋಡಿ ಇದೀಗ ಪೊಲೀಸರ ಬಲೆಗೆ ಬಿದ್ದಿದೆ.

Share This Article
Leave a comment