ಗುಜರಾತ್ ಚುನಾವಣೆ- ತಾಯಿಯ ಆಶೀರ್ವಾದ ಪಡೆದ ಮೋದಿಯಿಂದ – ನಾಳೆ ಮತದಾನ

Team Newsnap
1 Min Read
Gujarat Elections - Mother's Blessings From Modi - Voting Tomorrow ಗುಜರಾತ್ ಚುನಾವಣೆ- ತಾಯಿಯ ಆಶೀರ್ವಾದ ಪಡೆದ ಮೋದಿಯಿಂದ - ನಾಳೆ ಮತದಾನ

ನಾಳೆ ನಡೆಯುವ ಗುಜರಾತ್ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮತದಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ ಚಲಾಯಿಸಲಿದ್ದಾರೆ.

ಭಾನುವಾರ ಅಹಮದಾಬಾದ್‍ಗೆ ತಲುಪಿ ಪ್ರಧಾನಿ ಮೋದಿ ಅವರು, ತಮ್ಮ ತಾಯಿಯ ಆಶೀರ್ವಾದ ಪಡೆದರು.ಬೈಕ್​​ಗೆ ಬಿಜೆಪಿ MLC ರವಿಕುಮಾರ್​​ ಕಾರು ಡಿಕ್ಕಿ – ಸವಾರನಿಗೆ ಗಂಭೀರ ಗಾಯ: MLC ದರ್ಪ

ನಾಳೆ ಗುಜರಾತ್‍ನ 14 ಕೇಂದ್ರ ಮತ್ತು ಉತ್ತರ ಜಿಲ್ಲೆಗಳ 93 ವಿಧಾನಸಭಾ ಸ್ಥಾನಗಳಲ್ಲಿ ಮತದಾನ ನಡೆಯಲಿದೆ. ಅಹಮದಾಬಾದ್‍ನಲ್ಲಿ ಬೆಳಗ್ಗೆ 8:30ಕ್ಕೆ ಪ್ರಧಾನಿ ಮೋದಿ ಮತದಾನ ಮಾಡುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಇಂದು ಅಹಮದಾಬಾದ್‍ಗೆ ಬಂದಿದ್ದಾರೆ

ಹೀರಾಬೆನ್ ಮೋದಿ ಅವರು ಪ್ರಧಾನಿಯವರ ಕಿರಿಯ ಸಹೋದರ ಪಂಕಜ್ ಮೋದಿ ಅವರೊಂದಿಗೆ ಗಾಂಧಿನಗರದ ಹೊರವಲಯದಲ್ಲಿರುವ ರೈಸನ್ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ. ಮೋದಿ ಈ ಹಿಂದೆ ಹೀರಾಬೆನ್ ಅವರ 99ನೇ ಹುಟ್ಟುಹಬ್ಬದಂದು ಭೇಟಿ ಮಾಡಿದ್ದರು. ಜೂನ್‌ ತಿಂಗಳಲ್ಲಿ ಹೀರಬೆನ್‌ ಅವರ ಹುಟ್ಟುಹಬ್ಬ ನಡೆದಿತ್ತು.

Share This Article
Leave a comment