ಮತ್ತೆ ಎಲ್ ಪಿಜಿ ದರ ಇಂದಿನಿಂದ 25 ರು ಏರಿಕೆ – ಗ್ರಾಹಕರಿಗೆ ಬಿಗ್ ಶಾಕ್

Team Newsnap
1 Min Read
image source : google

ಸೆಪ್ಟೆಂಬರ್ ತಿಂಗಳ 1 ನೇ ತಾರೀಖಿನಿಂದಲೇ ತೈಲ ಕಂಪನಿಗಳು ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಹೆಚ್ಚಿಸಿವೆ.

14.2 ಕೆಜಿ ಸಬ್ಸಿಡಿ ರಹಿತ ಎಲ್ ಪಿಜಿ ಸಿಲಿಂಡರ್ ಬೆಲೆಯನ್ನು 25 ರೂಪಾಯಿ ಹೆಚ್ಚಿಸಲಾಗಿದೆ.

19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆಯೂ ಹೆಚ್ಚಾಗಿದೆ ಅದರ ಬೆಲೆಯನ್ನು ಪ್ರತಿ ಸಿಲಿಂಡರ್‌ಗೆ 75 ರೂ ಹೆಚ್ಚಳ ಮಾಡಲಾಗಿದೆ.

ಎಲ್ ಪಿಜಿ ಸಿಲಿಂಡರ್ 25 ರು. ಹೆಚ್ಚಳದ ನಂತರ, 14.2 ಕೆಜಿ ಎಲ್ ಪಿ ಜಿ ಸಿಲಿಂಡರ್ ದೆಹಲಿಯಲ್ಲಿ ಈಗ 884.50 ರು ಗೆ ಮಾರಾಟವಾಗುತ್ತಿದೆ.

ಈ ಮೊದಲು ಇದು 859.50ರು ಆಗಿತ್ತು, ಈ ಹಿಂದೆ ಆಗಸ್ಟ್ 17 ರಂದು ಎಲ್ಪಿಜಿ ಸಿಲಿಂಡರ್ ಬೆಲೆಯನ್ನು 25 ರೂ. ಮತ್ತು ಜುಲೈ 1 ರಂದು ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು 25.50 ರೂ ಹೆಚ್ಛಳ ಮಾಡಲಾಗಿತ್ತು.

ಎಲ್ಪಿಜಿ ಸಿಲಿಂಡರ್ ಹೊರತಾಗಿ, ವಾಣಿಜ್ಯ ಗ್ಯಾಸ್ ಸಿಲಿಂಡರ್ ಕೂಡ ರೂ .75 ರಷ್ಟು ದುಬಾರಿಯಾಗಿದೆ. ಆಗಸ್ಟ್ 17 ರಂದು ವಾಣಿಜ್ಯ ಸಿಲಿಂಡರ್ ಬೆಲೆಯನ್ನು 68 ರೂ. ಈಗ ದೆಹಲಿಯಲ್ಲಿ, 1618 ರೂ.ಗೆ ಬದಲಾಗಿ, 19 ಕೆಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ನಿಮಗೆ 1693 ರೂನಲ್ಲಿ ಸಿಗಲಿದೆ.

ಹೊಸ ದರಗಳು ಹೀಗಿವೆ :

  • 14.2 ಕೆಜಿ ಎಲ್ಪಿಜಿ ಸಿಲಿಂಡರ್ ನೂತನ ಬೆಲೆ ಇಲ್ಲಿದೆ
  • ನಗರಗಳ ಹಳೆಯ ದರ – ಹೊಸ ದರ
  • ದೆಹಲಿ 859.50 – 884.50
  • ಮುಂಬೈ 859.50- 884.50
  • ಕೋಲ್ಕತಾ 886- 911
  • ಚೆನ್ನೈ 875.50 – 900.50
  • ಲಕ್ನೋ 897.5 – 922.50
  • ಅಹಮದಾಬಾದ್ 866.50- 891.50 ರು
  • ಭೋಪಾಲ್ 840.50- 890.50
Share This Article
Leave a comment