ಜನರಿಗೆ ನೀಡಿದ್ದ ವಾಗ್ದಾನ ಪೂರೈಸಲು ಮನೆ ನಿರ್ಮಾಣ – ಸಂಸದೆ

Team Newsnap
2 Min Read
Sumaltha's entry into state politics? ರಾಜ್ಯ ರಾಜಕಾಣಕ್ಕೆ ಸುಮಲತಾ ಎಂಟ್ರಿ?
  • ಹನಕೆರೆ ಬಳಿ ಮನೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ ಸಂಸದೆ ಸುಮಲತಾ

ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಜನರಿಗೆ ಕೊಟ್ಟಿದ್ದೆ. ಮಾತಿನಂತೆ ಕ್ಷೇತ್ರದಲ್ಲಿ ಮನೆಯನ್ನು ನಿರ್ಮಾಣ ಮಾಡುತ್ತಿದ್ದೇನೆ ಎಂದು ಸಂಸದೆ ಸುಮಲತಾ ಹೇಳಿದರು.

1MND 1 1

ಮಂಡ್ಯ ತಾಲೂಕಿನ ಹನಕೆರೆ ಸಮೀಪದಲ್ಲಿ ಬುಧವಾರ 30 ಗುಂಟೆ ಜಾಗದಲ್ಲಿ ಮನೆ ನಿರ್ಮಿಸಲು ಪೂಜೆ ನೆರವೇರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸುಮಲತಾ 2 ವರ್ಷದ ಹುಡುಕಾಟದ ಬಳಿಕ ಮನೆ ನಿರ್ಮಾಣಕ್ಕೆ ಉತ್ತಮ ಜಾಗ ಸಿಕ್ಕಿದೆ. ಮಂಡ್ಯ ಹಾಗೂ ಮದ್ದೂರಿಗೆ ಹತ್ತಿರವಾಗುವ ಕಾರಣ ಹನಕೆರೆಯಲ್ಲಿ ಮನೆ ನಿರ್ಮಾಣ ಮಾಡಲಾಗುತ್ತಿದೆ. ಹೆದ್ದಾರಿಗೆ ಹತ್ತಿರವಿರುವ ಹಿನ್ನೆಲೆಯಲ್ಲಿ ಜನ ಬರುವುದಕ್ಕೂ ಸಹಾಯ ಆಗುತ್ತದೆ ಎಂದರು.

ಅಭಿಷೇಕ್‌ಗೆ ರಾಜಕೀಯ ನೆಲೆ ಕಲ್ಪಿಸಲು ಹನಕೆರೆಯಲ್ಲಿ ಮನೆ ನಿರ್ಮಾಣ ಮಾಡುತ್ತೇನೆ ಎಂಬ ಚರ್ಚೆಗೆ ಪ್ರತಿಕ್ರಿಯೆ ನೀಡಿ
ಅಭಿಷೇಕ್ ಸ್ಪರ್ಧೆಗೆ ನನ್ನ ಒಪ್ಪಿಗೆ ಇದೆಯೋ ಇಲ್ಲವೋ ಬೇರೆ ಪ್ರಶ್ನೆ. ಸಂದರ್ಭ, ಸಮಯ ಯಾವ ರೀತಿ ಆ ದಿನಗಳಲ್ಲಿ ನೋಡೋಣ. ಯಾವುದು ನಮ್ಮ ಕೈಯಲಿ ಇರುವುದಿಲ್ಲ. ನಾನು ರಾಜಕೀಯಕ್ಕೆ ಬರುತ್ತೇನೆ, ಸಂಸದೆ ಆಗುತ್ತೇನೆ ಎಂದು ಕನಸಲ್ಲೂ ನೆನಸಿರಲಿಲ್ಲ. ದೇವರು ಬರೆದಂತೆ ಭವಿಷ್ಯ ಇರುತ್ತದೆ. ನಮ್ಮ ಯೋಜನೆಯಂತೆ ನಡೆಯಲ್ಲ ಎಂದರು.

ನಾನು ಉದ್ದೇಶ ಇಟ್ಡುಕೊಂಡು ಈ ಮನೆ ನಿರ್ಮಿಸಲು ಮುಂದಾಗಿಲ್ಲ. ಯಾರ ಮನಸ್ಸಲ್ಲಿ ಏನೇನು ಇದೆಯೋ, ಅವರ ಊಹೆಗಳಿಗೆ ನಾನು ಪ್ರತಿಕ್ರಿಯೆ ನೀಡುವ ಗೋಜಿಗೆ ಹೋಗಲ್ಲ ಎಂದರು.

ಚುನಾವಣೆ ಸಂದರ್ಭದಲ್ಲಿ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುತ್ತಿದ್ದೇನೆ. ಮಂಡ್ಯದಲ್ಲಿ ಸ್ವಂತ ಮನೆ ಮಾಡುವ ಮಾತು ಕೊಟ್ಟಿದ್ದೆ, ಅದರಂತೆ ಮನೆಯನ್ನು ಕಟ್ಟುತ್ತಿದ್ದೇನೆ. ಇಲ್ಲಿಯೇ ವಾಸ ಮಾಡಬೇಕು ಎಂಬುದು ನನ್ನ ಹಾಗೂ ಅಭಿ ಆಸೆ. ಹಾಗಾಗಿ ಇವತ್ತು ಮನೆ ನಿರ್ಮಾಣಕ್ಕೆ ಚಾಲನೆ ಸಿಕ್ಕಿದೆ ಎಂದು ಹೇಳಿದರು.

ಮನೆ ಮುಂದಿನ 9- 10 ನಿರ್ಮಾಣವಾಗಬಹುದು. ಜನರಿಗೆ ಉಪಯೋಗವಾಗುವಂತೆ ಸರಳವಾಗಿ ಮನೆ ನಿರ್ಮಾಣ ಮಾಡಲಾಗುತ್ತಿದೆ ಎಂದರು.

ನೀರು ಬಿಡಲು ವಿರೋಧ:
ಕಾವೇರಿ ಪ್ರಾಧಿಕಾರ ಸೂಚನೆಯಂತೆ ಕೆ.ಆರ್.ಎಸ್. ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸುವುದರಿಂದ ನಮ್ಮ ರೈತರಿಗೆ ಅನ್ಯಾಯವಾಗುತ್ತದೆ. ಇದಕ್ಕೆ ನನ್ನ ವಿರೋಧವಿದೆ ಎಂದರು.

ಮನೆ ಭೂಮಿ ಪೂಜೆ ವೇಳೆ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ಬೆಂಬಲಿಗರಾದ ಮದನ್, ಬೇಲೂರು ಸೋಮಶೇಖರ್, ಹನಕೆರೆ ಶಶಿಕುಮಾರ್, ಬಿಜೆಪಿ ಮುಖಂಡ ಎಚ್.ಪಿ. ಮಹೇಶ್, ಜಿಪಂ ಮಾಜಿ ಅಧ್ಯಕ್ಷ ವಿವೇಕಾನಂದ ಇತರರಿದ್ದರು.

ಮನೆ ಮಾಡುತ್ತಿದ್ದೇವೆ , ಇದ್ದು ತೋರಿಸುತ್ತವೆ – ಅಭಿಷೇಕ್ :

ಮಂಡ್ಯ ನಗರದಲ್ಲಿ ನಾವು ಬಾಡಿಗೆಗೆ ಇದ್ದೆವು. ಮುಂದಿನ ಯೋಜನೆ ಬಗ್ಗೆ ನನಗೇನು ಗೊತ್ತಿಲ್ಲ. ಈಗ ಮನೆ ಮಾಡಿದ್ದೇವೆ. ಇದ್ದು ತೋರಿಸುತ್ತೇವೆ ಎಂದು ಅಭಿಷೇಕ್ ಅಂಬರೀಶ್ ಹೇಳಿದರು.

ಮದ್ದೂರಿನಿಂದ ಚುನಾವಣೆಗೆ ಸ್ಪರ್ಧೆ ಮಾಡುವ ಬಗ್ಗೆ ಪ್ರತಿಕ್ರಿಯಿಸಿದ ಅಭಿಷೇಕ್, ಅಭಿಮಾನಿಗಳಿಗೆ ನಮ್ಮನ್ನು ಬೆಳೆಸುವ ಆಸೆ, ನಮಗೆ ಅವರೊಂದಿಗೆ ಇರುವ ಆಸೆ. ಇಲ್ಲಿಯವರೆಗೆ ಬೆಳೆಸಿದ್ದಾರೆ. ಮುಂದೆಯು ಬೆಳೆಸಲಿದ್ದಾರೆ. ಚುನಾವಣೆ ಸ್ಪರ್ಧೆ ಜನರ ಇಚ್ಛೆ, ಸಮಯ ಸಂದರ್ಭ ಬಂದಾಗ ನೋಡೋಣ ಎನ್ನುವ ಮೂಲಕ ಚುನಾವಣೆಯಲ್ಲಿ ಸ್ಪರ್ಧೆಗೆ ಪರೋಕ್ಷವಾಗಿ ಸುಳಿವು ನೀಡಿದರು.

Share This Article
Leave a comment