ಶಿವಸೇನೆಯ ಬಂಡಾಯ ಶಾಸಕರಿಗೆ ಬಿಗ್ ರಿಲೀಫ್ – ಜುಲೈ 12 ವರೆಗೂ ಅನರ್ಹತೆ ಅಸ್ತ್ರದಿಂದ ಅತೃಪ್ತರು ಸುರಕ್ಷಿತ

Team Newsnap
2 Min Read

ಬಂಡಾಯದ ಬಾವುಟ ಹಾರಿಸಿರುವ ಮಾಹಾರಾಷ್ಟ್ರದ ಮಹಾಮೈತ್ರಿ ಸರ್ಕಾರದ ಅತೃಪ್ತ ಶಾಸಕರಿಗೆ ಸುಪ್ರೀಂ ಕೋರ್ಟ್‌ನಿಂದ ಬಿಗ್ ರಿಲೀಫ್ ಸಿಕ್ಕಿದೆ.

ಶಿವಸೇನೆ ಅನರ್ಹತೆ ಅಸ್ತ್ರ ಪ್ರಶ್ನಿಸಿ ಏಕನಾಥ ಶಿಂಧೆ ಬಣ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಜುಲೈ 12 ಸಂಜೆ ಸಂಜೆ 5:30 ವರೆಗೂ ಯಾವುದೇ ಕ್ರಮ ತೆಗೆದುಕೊಳ್ಳದಂತೆ ಡೆಪ್ಯುಟಿ ಸ್ಪೀಕರ್ ಗೆ ಸೂಚನೆ ನೀಡಿದೆ.

ಏಕನಾಥ ಶಿಂಧೆ ಬಣ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೆಬಿ ಪರ್ದಿವಾಲಾ ದ್ವಿಸದಸ್ಯ ಪೀಠದಲ್ಲಿ ನಡೆಯಿತು.

ಏಕನಾಥ್ ಶಿಂಧೆ ಪರ ವಾದ ಮಂಡಿಸಿದ ವಕೀಲ ಎನ್.ಕೆ ಕೌಲ್, ಸ್ಪೀಕರ್ ಮೇಲೆ ಅನುಮಾನವಿದ್ದಲ್ಲಿ ಸಂವಿಧಾನದ ಆರ್ಟಿಕಲ್ 179 ಅಡಿಯಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಬಹುದು. ಅವರನ್ನು ವಜಾಗೊಳಿಸಬಹುದು.

ಅದರಂತೆ ಈಗಾಗಲೇ ಅವಿಶ್ವಾಸ ನಿರ್ಣಯ ಮಂಡಿಸಿದೆ. ಈ ನಿರ್ಣಯದ ನಡುವೆ ಡೆಪ್ಯುಟಿ ಸ್ಪೀಕರ್ ಅನರ್ಹತೆ ಅರ್ಜಿ ವಿಚಾರಣೆ ನಡೆಸಲು ಹೊರಟಿದ್ದಾರೆ‌. ಇದು ಕಾನೂನು ಬಾಹಿರ ಅಲ್ಲದೇ ಶಾಸಕರ ಒಪ್ಪಿಗೆ ಇಲ್ಲದೇ ಶಾಸಕಾಂಗ ಪಕ್ಷದ ನಾಯಕನ‌ ಅನುಮೋದನೆಯಾಗಿದೆ‌ ಇದು ಸರಿಯಲ್ಲ ಎಂದು ವಾದಿಸಿದ್ದರು.

ಪ್ರತಿವಾದ ಮಂಡಿಸಿ ಶಿವಸೇನೆ ಪಕ್ಷದ ವಕೀಲ ಅಭಿಷೇಕ್ ಮನುಸಿಂಘ್ವಿ, ಬಂಡಾಯ ಶಾಸಕರು ಅಧಿಕೃತವಲ್ಲದ ಇಮೇಲ್ ಮೂಲಕ ಡೆಪ್ಯುಟಿ ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯದ ಪತ್ರವನ್ನು ಕಳುಹಿಸಿದ್ದಾರೆ. ಇದನ್ನು ಪರಿಗಣಿಸಲು ಸಾಧ್ಯವಿಲ್ಲ. ಈ ಪತ್ರಕ್ಕೂ ಮುನ್ನ ಡೆಪ್ಯುಟಿ ಸ್ಪೀಕರ್ ನೋಟಿಸ್ ಜಾರಿ ಮಾಡಿದ್ದಾರೆ. ಸ್ಪೀಕರ್ ಅನುಪಸ್ಥಿತಿಯಲ್ಲಿ ಡೆಪ್ಯುಟಿ ಸ್ಪೀಕರ್ ಅನರ್ಹತೆ ಅರ್ಜಿ ವಿಚಾರಣೆ ನಡೆಸಬಹುದು, ಇದಕ್ಕೆ ಪೂರಕವಾಗಿ ಹಲವು ಸುಪ್ರೀಂಕೋರ್ಟ್ ಆದೇಶಗಳಿವೆ ಎಂದು ಹೇಳಿದರು.

ವಾದ ಪ್ರತಿವಾದ ಆಲಿಸಿದ ಪೀಠ ಅವಿಶ್ವಾಸ ನಿರ್ಣಯ ಮಂಡಿಸಿರುವ ಹೊತ್ತಲ್ಲಿ ಅನರ್ಹತೆ ವಿಚಾರಣೆ ನಡೆಸಲು ಸಾಧ್ಯವಿದೆಯೇ ಎಂದು ಕೋರ್ಟ್ ಟೀಕಿಸಿತು‌. ಅಲ್ಲದೇ ಐದು ದಿನಗಳಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಫಿಡೆವಿಟ್ ಸಲ್ಲಿಸುವಂತೆ ಮಹಾರಾಷ್ಟ್ರ ಸರ್ಕಾರ ಮತ್ತು ಡೆಪ್ಯುಟಿ ಸ್ಪೀಕರ್ ಕಚೇರಿಗೆ ನೋಟಿಸ್ ಜಾರಿ ಮಾಡಿತು.

ವಿವಾದಿತ ಪಠ್ಯಗಳ ಪರಿಷ್ಕರಣೆ :ಕೈ ಬಿಟ್ಟ ಯಾವ ಅಂಶಗಳು ಸೇರ್ಪಡೆ : ವಿವರ ಹೀಗಿದೆ

ಜುಲೈ 11ಕ್ಕೆ ಮುಂದಿನ ವಿಚಾರಣೆ ನಡೆಯಲಿದ್ದೇವೆ ಎಂದು ಕೋರ್ಟ್ ಹೇಳಿದೆ. ಕೋರ್ಟ್ ಮಧ್ಯಂತರ ಆದೇಶದಿಂದ ಅತೃಪ್ತ ಶಾಸಕರಿಗೆ ಬಿಗ್ ರಿಲೀಫ್ ಸಿಕ್ಕಿದ್ದು ತಾತ್ಕಾಲಿಕವಾಗಿ ಅನರ್ಹತೆ ಅಸ್ತ್ರದಿಂದ ಪಾರಾಗಿದ್ದಾರೆ. ಈ ಅವಧಿಯಲ್ಲಿ ಬಂಡಾಯ ಶಾಸಕರು ಹೊಸ ರಾಜಕೀಯ ಚದುರಂಗದಾಟ ಆಡುವ ಸಾಧ್ಯತೆಗಳಿದೆ.

Share This Article
Leave a comment