ವಿವಿಧ ಬ್ಯಾಂಕ್‌ಗಳ ಪರಿಶೀಲನಾ ಸಭೆ – ಕನ್ನಡದಲ್ಲಿ ಸಂವಹನ ನಡೆಸಬೇಕು – ಸುಮಲತಾ ಕರೆ

Team Newsnap
1 Min Read

ಬ್ಯಾಂಕ್ ಆಫ್ ಬರೋಡ ವತಿಯಿಂದ ವಿವಿಧ ಬ್ಯಾಂಕ್‌ಗಳ ಅಭಿವೃದ್ದಿ ಪರಿಶೀಲನಾ ಸಭೆಯು ಬ್ಯಾಂಕ್ ನ ಸ್ವಯಂ ಉದ್ಯೋಗ ಸಂಸ್ಥೆಯಲ್ಲಿ ನಡೆಯಿತು.

ಪ್ರಧಾನ ಮಂತ್ರಿ ವಿವಿಧ ಯೋಜನೆಯಡಿ ನಬಾರ್ಡ್ ನ ವಿವಿಧ ಬ್ಯಾಂಕುಗಳು ನೀಡಿದ ಅನುದಾನದ ಮೊತ್ತವನ್ನು ಫಲಾನುಭವಿಗಳಿಗೆ ಚಕ್ ಮುಖಾಂತರ ವಿತರಿಸುವ ಮೂಲಕ ಕಾರ್ಯಕ್ರಮವನ್ನು ಸಂಸದೆ ಸುಮಲತಾ ಅಂಬರೀಶ್ ಉದ್ಘಾಟಿಸಿದರು. ಇದನ್ನು ಓದಿ – ಕೆಂಪೇಗೌಡ ಜಯಂತಿಯನ್ನು ದಸರಾ ಮಾದರಿ ಅದ್ದೂರಿ ಆಚರಣೆಗೆ ಒಪ್ಪಿಗೆ

ನಂತರ ಮಾತನಾಡಿದ ಅವರು ಪ್ರಧಾನ ಮಂತ್ರಿ ಯೋಜನೆಯಡಿ ಜಾರಿಗೆ ತರಲಾಗಿರುವ ಸುರಕ್ಷಾ ಜೀವನ್ ಜ್ಯೋತಿ, ಭೀಮಾ ಯೋಜನೆ, ಕಿಸಾನ್ ಕ್ರಿಡಿಟ್ ಕಾರ್ಡ್ ಮುಂತಾದ ಯೋಜನೆಗಳ ಉಪಯುಕ್ತತೆ ಬಗ್ಗೆ ಗ್ರಾಮೀಣ ಪ್ರದೇಶದ ಜನರಿಗೆ ಅರಿವು ಮೂಡಿಸಲು ಬ್ಯಾಂಕ್ ನ ಅಧಿಕಾರಿಗಳು ಕನ್ನಡ ಭಾಷೆಯಲ್ಲಿ ಸಂವಹನ ನಡೆಸುವುದರ ಮೂಲಕ ಜಾಗೃತಿ ಮೂಡಿಸಬೇಕು ಎಂದು ಕರೆ ನೀಡಿದರು.

ಸಭೆಯಲ್ಲಿ ವಿವಿಧ ಬ್ಯಾಂಕುಗಳು ಪ್ರಧಾನ ಮಂತ್ರಿ ಯೋಜನೆಯಡಿ ಕೈಗೊಂಡ ಸಾಲ ಹಾಗೂ ನೆರವಿನ ಬಗ್ಗೆ ನಾಬಡ್ ðನ ವ್ಯವಸ್ಥಾಪಕ ದೀಪಕ್ ವಿವರವಾಗಿ ಮಾಹಿತಿ ನೀಡಿದರು.

ಜನ್‌ಧನ್, ಸುರಕ್ಷಾ ಭೀಮಾ ಯೋಜನೆಗಳು ಸೇರಿದಂತೆ ಇನ್ನಿತರೆ ಯೋಜನೆಗಳಲ್ಲಿ ಬ್ಯಾಂಕ್‌ನ ಕಾರ್ಯಕ್ರಮ ಯೋಜನೆಯಡಿ ನೀಡಿರುವ ಸಾಲ ವ್ಯವಸ್ಥೆಗಳ ಬಗ್ಗೆ ಅಂಕಿ ಅಂಶಗಳನ್ನು ಒದಗಿಸಿದವು.

ಕಾರ್ಯಕ್ರಮದಲ್ಲಿ ದಿವ್ಯಪ್ರಭು, ಸುಪ್ರಿಯಾ ಕಾಮತ್, ವರ್ಷ ಸೇರಿದಂತೆ ವಿವಿಧ ಬ್ಯಾಂಕ್ ನ ಅಧಿಕಾರಿಗಳು ಭಾಗವಹಿಸಿದ್ದರು.

Share This Article
Leave a comment