June 9, 2023

Newsnap Kannada

The World at your finger tips!

WhatsApp Image 2022 01 22 at 7.58.42 PM

ಸಾಲ ತೀರಿಸಲು ಬ್ಯಾಂಕ್ ರಾಬರಿ: ಟೆಕ್ಕಿ ದೀರಜ್ ಬಂಧನ

Spread the love

ಸಾಲ ತಿರಿಸುವುದಕ್ಕೆ ಟೆಕ್ಕಿಯೊಬ್ಬ ಎಸ್‍ಬಿಐ ಬ್ಯಾಂಕ್ ನಲ್ಲಿ 85 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಬೆಂಗಳೂರಿನ ಕಾಮಾಕ್ಷಿ ಪಾಳ್ಯ ನಿವಾಸಿ ಧೀರಜ್ ಬಂಧಿತ ಎಂಜಿನಿಯರ್.

ಆನ್‍ಲೈನ್ ಟ್ರೇಡಿಂಗ್‍ನಲ್ಲಿ ಹಣ ಹಾಕಿದ್ದ ಎಂಜಿನಿಯರ್ ಧೀರಜ್ ಸುಮಾರು 40 ಲಕ್ಷ ರು ಕಳೆದುಕೊಂಡು ಸಾಲ ಸುಳಿಗೆ ಸಿಲುಕಿದ್ದ. ಸಾಲಗಾರರ ಕಾಟ ಹೆಚ್ಚಾದ ಹಿನ್ನೆಲೆಯಲ್ಲಿ ಸಾಲ ತೀರಿಸಲು ಬ್ಯಾಂಕ್ ರಾಬರಿ ಮಾಡುವುದಕ್ಕೆ ಪ್ಲಾನ್ ಮಾಡಿದ್ದಾನೆ. ಅದರಂತೆ ಯೂಟ್ಯೂಬ್‍ಗಳಲ್ಲಿ ಹೇಗೆ ರಾಬರಿ ಮಾಡಬೇಕು ಅಂತಾ ವಿಡಿಯೋಗಳನ್ನು ನೋಡಿದ್ದಾನೆ.

ನಂತರ ಮಡಿವಾಳದ ಬಿಟಿಎಂ ಲೇಔಟ್‍ನ ಎಸ್‍ಬಿಎಂ ಬ್ಯಾಂಕ್ ಬಾಗಿಲು ಹಾಕುವ ವೇಳೆಗೆ ಪ್ರವೇಶ ಮಾಡಿದ ಎಂಜಿನಿಯರ್ ಕಳ್ಳ ಮ್ಯಾನೇಜರ್ ಮತ್ತು ಓರ್ವ ಮಹಿಳಾ ಸಿಬ್ಬಂದಿಯನ್ನು ಬೆದರಿಸಿ 3.75 ಲಕ್ಷ ನಗದು, 1.8 ಕೆಜಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾನೆ.

ನಂತರ ಪೊಲೀಸರ ಕೈಗೆ ಸಿಗದಂತೆ ಬೇರೆ, ಬೇರೆ ಕಡೆಗಳಲ್ಲಿ ಸುತ್ತಾಡುತ್ತಿದ್ದನು.

ಪೊಲೀಸರ ತನಿಖೆ ವೇಳೆ ಆರೋಪಿ ಧೀರಜ್ ಸಾಲಗಾರರಿಗೆ ಹಣ ಹಿಂತಿರುಗಿಸುತ್ತಿರುವ ವಿಚಾರ ತಿಳಿದು ಸಾಲಗಾರರ ಬಗ್ಗೆ ಮಾಹಿತಿ ಕಲೆಹಾಕಿದರು.

ಐದು ದಿನಗಳ ನಂತರ ನಗರದ ವ್ಯಕ್ತಿಯೊಬ್ಬರಿಗೆ ಸಾಲ ಹಿಂತಿರುಗಿಸಲು ಬಂದ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ದ ಆರೋಪಿ ಧೀರಜ್‍ನ ವಶಕ್ಕೆ ಪಡೆದ ಪೊಲೀಸರು, 85 ಲಕ್ಷ ಮೌಲ್ಯದ ಚಿನ್ನಭರಣ ನಗದು ವಶಕ್ಕೆ ಪಡೆದಿದ್ದಾರೆ.

error: Content is protected !!