May 20, 2022

Newsnap Kannada

The World at your finger tips!

sidda kuma

ಕುಮಾರಸ್ವಾಮಿ ಅಪ್ಪ, ಅಣ್ಣ, ಮಗ ಸೋತಿಲ್ವಾ: ಸಿದ್ದರಾಮಯ್ಯ ಎಚ್ ಡಿಕೆಗೆ ಗುದ್ದು

Spread the love

ಈ ಕುಮಾರಸ್ವಾಮಿ ಹೇಳಿಕೆಗಳಿಲ್ಲಾ ನಾನು ರಿಯಾಕ್ಟ್ ಮಾಡಲ್ಲ. ಅವರ ಭಾಷೆ ಅವರ ಸಂಸ್ಕೃತಿ ತೋರಿಸುತ್ತದೆ. ಚುನಾವಣೆಯಲ್ಲಿ ಸೋಲು ಗೆಲುವು ನಿರ್ಧಾರ ಮಾಡುವುದು ಮತದಾರ. ಮತದಾರ ಕೊಟ್ಟ ತೀರ್ಪನ್ನು ನಾವು ಸ್ವೀಕಾರ ಮಾಡಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದರು.

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿ ಎಚ್ ಡಿ ಕೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ
ನಾನು ಸೋತಿದ್ದೇನೆ ನಿಜ . ಅವರ ಅಪ್ಪ ಸೋತಿಲ್ವಾ? ಮಗ ಸೋತಿಲ್ವಾ? ಅಣ್ಣ ಸೋತಿಲ್ವಾ? ಮಗ ಸೋತಿಲ್ವೆ ? ಎಂದು ಕಿಡಿಕಾರಿದರು

ಪ್ರಜಾಪ್ರಭುತ್ವದಲ್ಲಿ ಜನರ ತೀರ್ಪು ಅಂತಿಮ. ನಾನು ಜೆಡಿಎಸ್‌ನಲ್ಲಿ ರಾಜ್ಯಾಧ್ಯಕ್ಷ ಆಗಿದ್ದಾಗ ಈ ಕುಮಾರಸ್ವಾಮಿ ಯಾರು ? ಎಲ್ಲಿದ್ದರೂ ಎನ್ನುವುದೇ ಗೊತ್ತಿಲ್ಲ. ನಾನೇಕೆ ಇವರ ಮುಂದೆ ಹೋಗಿ ಕೈ ಕಟ್ಟಿ ನಿಲ್ಲಲಿ. ಕಣ್ಣೀರು ಹಾಕಲಿ ಎಂದು ಪ್ರಶ್ನಿಸಿದರು.

ಈಗ ರಾಜ್ಯದ ಜನರ ಮುಂದೆ ಕಣ್ಣೀರು ಹಾಕುತ್ತಿರುವುದು ಯಾರೆಂದು ಗೊತ್ತಿದೆ. ನಾನೇಕೆ ಕಣ್ಣಿರು ಹಾಕಲಿ. ಇವರ ಭಾಷೆ ಇವರ ರಾಜಕೀಯ ಸಂಸ್ಕೃತಿ ತೋರಿಸುತ್ತದೆ. ನನ್ನನ್ನು ಕಂಡರೆ ಕುಮಾರಸ್ವಾಮಿಗೆ ಭಯ. ನನ್ನ ವಿರುದ್ಧ ಮಾತನಾಡಿದರೆ ಅವರಿಗೆ ರಾಜಕೀಯ ಲಾಭವಿದೆ ಎಂದು ವ್ಯಂಗ್ಯವಾಡಿದರು.

error: Content is protected !!