December 19, 2024

Newsnap Kannada

The World at your finger tips!

militry school

Bangalore National Military School: Admission to Female Students ಬೆಂಗಳೂರಿನ ರಾಷ್ಟ್ರೀಯ ಸೈನಿಕ ಶಾಲೆ : ಈ ವರ್ಷದಿಂದ ಮಹಿಳಾ ವಿದ್ಯಾರ್ಥಿನಿಯರಿಗೆ ಪ್ರವೇಶ

ಬೆಂಗಳೂರಿನ ರಾಷ್ಟ್ರೀಯ ಸೈನಿಕ ಶಾಲೆ : ಈ ವರ್ಷದಿಂದ ಮಹಿಳಾ ವಿದ್ಯಾರ್ಥಿನಿಯರಿಗೆ ಪ್ರವೇಶ

Spread the love

ರಾಷ್ಟ್ರೀಯ ಮಿಲಿಟರಿ ಸ್ಕೂಲ್‌ನಲ್ಲಿ ಈಗ ಬಾಲಕಿಯರಿಗೂ ಓದುವ ಅವಕಾಶ ಸಿಕ್ಕಿದೆ,ಹೊಸೂರು ರಸ್ತೆಯ ರಿಚ್ಮಂಡ್ ಟೌನ್‌ನಲ್ಲಿರುವ ರಾಷ್ಟ್ರೀಯ ಮಿಲಿಟರಿ ಸ್ಕೂಲ್‌ನಲ್ಲಿ ಈ ವರ್ಷದಿಂದ ಮಹಿಳಾ ವಿದ್ಯಾರ್ಥಿನಿಯರಿಗೆ ಪ್ರವೇಶಾವಕಾಶ ಕಲ್ಪಿಸಲಾಗಿದೆ.

ಇದನ್ನು ಓದಿ –ವರದಕ್ಷಿಣೆಗಾಗಿ ಕ್ರಿಕೆಟ್​ ಬ್ಯಾಟ್​ನಿಂದ ಪತ್ನಿಯನ್ನು ಕೊಂದ – ಹೈಡ್ರಾಮ ಮಾಡಿದ ಪತಿ ಬಂಧನ !

ರಿಚ್ಮಂಡ್ ಟೌನ್‌ನ ಹೊಸೂರು ರಸ್ತೆಯಲ್ಲಿರುವ ಈ ಶಾಲೆಗೆ 75ನೇ ಸ್ಥಾಪನಾ ದಿನದ ಸಂಭ್ರಮ ಇರುವ ಈ ವರ್ಷವೇ ಬಾಲಕಿಯರನ್ನು ಶಿಕ್ಷಣದಲ್ಲಿ ಒಳಗೊಳ್ಳುವ ನಿರ್ಧಾರ ಮೂಡಿರುವುದು ವಿಶೇಷ.

ಹತ್ತೂವರೆ ವರ್ಷ ವಯಸ್ಸಿನಿಂದ ಹಿಡಿದು ಹನ್ನೆರಡು ವರ್ಷದವರೆಗಿನ ವಯೋಮಾನದ ಬಾಲಕಿಯರು 6ನೇ ತರಗತಿಗೆ ಸೇರಬಹುದು. ಅದಕ್ಕಾಗಿ ಕೇಂದ್ರೀಕೃತ ಅಡ್ಮಿಶನ್ ಟೆಸ್ಟ್ ಬರೆಯಬೇಕಾಗುತ್ತದೆ.

551 ವಿದ್ಯಾರ್ಥಿನಿಯರು ಸೆಂಟ್ರಲೈಸ್ಡ್ ಅಡ್ಮಿಶನ್ ಟೆಸ್ಟ್‌ಗೆ ಅರ್ಜಿ ಹಾಕಿದ್ದು, 372 ಮಂದಿ ಪರೀಕ್ಷೆ ಬರೆದಿದ್ದಾರೆ. ಇವರ ಪೈಕಿ 12 ಬಾಲಕಿಯರು ತೇರ್ಗಡೆ ಹೊಂದಿ ಇಂಟರ್ವ್ಯೂ ಹಂತಕ್ಕೆ ಹೋಗಿದ್ಧಾರೆ. ಈ 12 ಮಂದಿಯಲ್ಲಿ ಅಂತಿಮವಾಗಿ ಆರು ಬಾಲಕಿಯರಿಗೆ ರಾಷ್ಟ್ರೀಯ ಮಿಲಿಟರಿ ಸ್ಕೂಲ್‌ನಲ್ಲಿ ಆರನೇ ತರಗತಿ ಓದುವ ಅವಕಾಶ ದೊರಕಲಿದೆ.

ಸೋಮವಾರ ಸೈನಿಕ ಶಾಲೆಯ ಪ್ಲಾಟಿನಂ ಜುಬಿಲಿ ಆಚರಣೆಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಈ ಶೈಕ್ಷಣಿಕ ವರ್ಷದಿಂದಲೇ ದೇಶದಾದ್ಯಂತದ ರಾಷ್ಟ್ರೀಯ ಮಿಲಿಟರಿ ಶಾಲೆಗಳಿಗೆ ಬಾಲಕಿಯರ ಕೆಡೆಟ್‌ಗಳು ಪ್ರವೇಶ ಪಡೆಯಲಿದ್ದಾರೆ ಎಂದು ಹೇಳಲು ನನಗೆ ಸಂತೋಷವಾಗಿದೆ. ಈ ವರ್ಷದಿಂದ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಯನ್ನು ಬಾಲಕಿಯರಿಗಾಗಿ ತೆರೆಯಲಾಗಿದೆ ಎಂದು ಹೇಳಿದ್ದಾರೆ.

ಯುದ್ಧದ ಪಾತ್ರಗಳನ್ನು ಒಳಗೊಂಡಂತೆ ಈ ಪ್ರತಿಷ್ಠಿತ ಶಾಲೆಗೆ ಸೇರುವ ಕೆಡೆಟ್‌ಗಳು ರಾಷ್ಟ್ರವನ್ನು ರಕ್ಷಿಸುವಲ್ಲಿ ಕೊಡುಗೆ ನೀಡುತ್ತಾರೆ. ರಾಷ್ಟ್ರ ರಕ್ಷಣೆಯಲ್ಲಿ ತಮ್ಮ ಪಾತ್ರವನ್ನು ನಿರ್ವಹಿಸುತ್ತಾರೆ ಎಂದು ನನಗೆ ವಿಶ್ವಾಸವಿದೆ ಎಂದರು. ಕ್ಯಾಪ್ಟನ್ ಅಭಿಲಾಶಾ ಬರಾಕ್ ಅವರ ಪ್ರಕರಣವನ್ನು ಉಲ್ಲೇಖಿಸಿದ ಕೋವಿಂದ್‌ ಅವರು ಆರ್ಮಿ ಏವಿಯೇಷನ್ ​​ಕಾರ್ಪಸ್‌ ಯುದ್ಧ ವಿಮಾನದ ಏವಿಯೇಟರ್ ಆಗಿ ಸೇರಿದ ಮೊದಲ ಮಹಿಳಾ ಅಧಿಕಾರಿಯಾಗಿದ್ದಾರೆ ಎಂದು ಹೇಳಿದರು.

ಜಮ್ಮು ಮತ್ತು ಕಾಶ್ಮೀರದಿಂದ ಕೇರಳದವರೆಗೆ, ಇಲ್ಲಿನ ಕೆಡೆಟ್‌ಗಳು ನಮ್ಮ ವೈವಿಧ್ಯತೆಯಲ್ಲಿ ಏಕತೆಯನ್ನು ಪ್ರತಿನಿಧಿಸುತ್ತಾರೆ. ಈ ಪರಸ್ಪರ ಮುಖಾಮುಖಿಯು ಅವರ ಸಹವರ್ತಿ ಕೆಡೆಟ್‌ಗಳ ಸಂಸ್ಕೃತಿ, ಭಾಷೆ ಮತ್ತು ಸಂಪ್ರದಾಯಗಳನ್ನು ಕಲಿಯಲು ಮತ್ತು ಪ್ರಶಂಸಿಸಲು ಸಹಾಯವಾಗುತ್ತೆ ಎಂದು ನನಗೆ ಖಾತ್ರಿಯಿದೆ ಎಂದು ಕೋವಿಂದ್‌ ಹೇಳಿದರು.

Copyright © All rights reserved Newsnap | Newsever by AF themes.
error: Content is protected !!