ಬೆಂಗಳೂರು ಭಾರತದ ಯುವಕರ ಕನಸಿನ ನಗರ – ಪ್ರಧಾನಿ ಮೋದಿ

Team Newsnap
1 Min Read
Prime Minister to Mysore today, tomorrow: program details ಇಂದು , ನಾಳೆ ಮೈಸೂರಿಗೆ ಪ್ರಧಾನಿ : ಕಾರ್ಯಕ್ರಮದ ವಿವರ

ಬೆಂಗಳೂರು ದೇಶದ ಯುವಕರ ಕನಸಿನ ನಗರ ಮಾತ್ರವಲ್ಲದೇ ಶ್ರೇಷ್ಠ ಭಾರತದ ಪ್ರತಿಬಿಂಬ ಬೆಂಗಳೂರು ಆಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದರು

ಇದನ್ನು ಓದಿ –ಜೂ25 ಮಂಡ್ಯದಲ್ಲಿ ಲೋಕ್ ಅದಾಲತ್ – 79907 ಬಾಕಿ ಪ್ರಕರಣ : ನ್ಯಾ ನಳಿನಕುಮಾರಿ

ಬೆಂಗಳೂರಿನ ಕೊಮ್ಮಘಟ್ಟದಲ್ಲಿ 27,000 ಕೋಟಿ ರು ಮೊತ್ತದ ಹಲವು ರೈಲು ಮತ್ತು ರಸ್ತೆ ಮೂಲಸೌಕರ್ಯ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿ ಪ್ರಧಾನಿ ಮೋದಿ ಮಾತನಾಡಿದರು.

ನಂತರ ಕನ್ನಡದಲ್ಲಿಯೇ ಭಾಷಣ ಆರಂಭಿಸಿದ ಪ್ರಧಾನಿ, ಕುರುನಾಡ ಜನತೆಗೆ ನನ್ನ ಪ್ರೀತಿಯ. ನಮಸ್ಕಾರಗಳು ಬೆಂಗಳೂರಿನ ಮಹಾಜನತೆಗೆ ನನ್ನ ನಮಸ್ಕಾರಗಳು ಎಂದು

ರಾಜ್ಯದಲ್ಲಿ ಮೂಲಭೂತ ಸೌಕರ್ಯ ಕಲ್ಪಿಸುವ ಯೋಜನೆಗಳನ್ನು ಜಾರಿಗೊಳಿಸಲು ನನಗೆ ಸಂತೋಷವಾಗುತ್ತಿದೆ ಎಂದರು.

ಶ್ರೇಷ್ಠ ಭಾರದತ ಪ್ರತಿಬಿಂಬ ಬೆಂಗಳೂರುಕರ್ನಾಟಕದ ಕ್ಷಿಪ್ರ ಅಭಿವೃದ್ಧಿಗಾಗಿ ‘ಡಬಲ್ ಇಂಜಿನ್’ ಸರ್ಕಾರವು ನೀಡಿದ ವಿಶ್ವಾಸವನ್ನು ಇಂದು ನಾವೆಲ್ಲರೂ ಮತ್ತೊಮ್ಮೆ ನೋಡುತ್ತಿದ್ದೇವೆ. ಇಂದು 27 ಸಾವಿರ ಕೋಟಿ ರೂ.ಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನಡೆಯುತ್ತಿದೆ. ಡಬಲ್ ಇಂಜಿನ್ ಸರ್ಕಾರದಲ್ಲಿ ಅಭಿವೃದ್ಧಿಯೇ ಗುರಿಯಾಗಿತ್ತು. ಕರ್ನಾಟಕದ ಅಭಿವೃದ್ಧಿಗೆ ಡಬಲ್ ಎಂಜಿನ್ ಸರ್ಕಾರ ಈ ಹಿಂದೆ ಭರವಸೆ ನೀಡಿತ್ತು ಎಂದು ಹೇಳಿದರು

ಇದನ್ನು ಓದಿ –ನಾಳೆ ಬೆಳಗ್ಗೆವರೆಗೂ ಚಾಮುಂಡಿದ ಪ್ರವೇಶಕ್ಕೆ ನಿಷೇಧ : 2.07 ಕೋಟಿ ಸಂಗ್ರಹ

ಲಕ್ಷಾಂತರ ಯುವಕರ ಕನಸಿನ ನಗರ ಬೆಂಗಳೂರು. ನಗರದ ಟ್ರಾಫಿಕ್ ಮುಕ್ತಿಗೆ ಅನೇಕ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ರೈಲು, ರೋಡ್, ಮೆಟ್ರೋ ಅಡರ್​ಪಾಸ್, ಸಬ್​​ ಅರ್ಬನ್, ಬೈಪಾಸ್, ರಿಂಗ್​ ರಸ್ತೆಗಳ ಅಭಿವೃದ್ಧಿಯಾಗಿದೆ. ಇಲ್ಲಿನ ಜನರ ಜೀವನ ಸರಳಿಗೊಳಿಸಲು ಪ್ರಯತ್ನ ಮಾಡಲಾಗುತ್ತಿದೆ.

8 ವರ್ಷಗಳಿಂದ ಬೆಂಗಳೂರು ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ. 40 ವರ್ಷಗಳಲ್ಲಿ ಆಗದ್ದನ್ನು 40 ತಿಂಗಳಲ್ಲಿ ಮಾಡಿದ್ದೇವೆ ಎಂದು ಹೇಳಿದರು.

Share This Article
Leave a comment