June 1, 2023

Newsnap Kannada

The World at your finger tips!

nalinikumari

ಜೂ25 ಮಂಡ್ಯದಲ್ಲಿ ಲೋಕ್ ಅದಾಲತ್ – 79907 ಬಾಕಿ ಪ್ರಕರಣ : ನ್ಯಾ ನಳಿನಕುಮಾರಿ

Spread the love

ಮಂಡ್ಯ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಬಾಕಿ ಉಳಿದಿರುವ 79907 ಪ್ರಕರಣಗಳನ್ನು ಇತ್ಯರ್ಥಗೊಳಿಸುವ ಸಲುವಾಗಿ ಮಂಡ್ಯದಲ್ಲಿ ಜೂನ್ 25 ರಂದು ಲೋಕ್ ಅದಾಲತ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಗಳ ನ್ಯಾಯದೀಶೆ ನಳಿನಿಕುಮಾರಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನ್ಯಾ ನಳಿನಿಕುಮಾರಿ. ವಿವರ ನೀಡಿ ಮಂಡ್ಯ ಜಿಲ್ಲೆಯಲ್ಲಿ 79907 ಪ್ರಕರಣಗಳು ಬಾಕಿ ಉಳಿದ್ದಿದ್ದು, ಇದರಲ್ಲಿ 10407 ಪ್ರಕರಣಗಳು ರಾಜಿಯಾಗಬಹುದಾದ ಪ್ರಕರಣಗಳಾಗಿವೆ ಎಂದರು.

ಈ ಪೈಕಿ 534 ಪ್ರಕರಣಗಳನ್ನು ರಾಜಿಗಾರಿ ಪರಿಗಣಿಸಲಾಗಿದೆ. ಹಾಗೂ 3591 ವ್ಯಾಜ್ಯ ಪೂರ್ವ ಪ್ರಕರಣಗಳಾದಿದ್ದು ಸುಮಾರು 2469 ಪ್ರಕರಣಗಳನ್ನು ಈಗಾಗಲೇ ಇತ್ಯರ್ಥಗೊಂಡಿದೆ ಎಂದು ಮಾಹಿತಿ ನೀಡಿದರು.

ಇದನ್ನು ಓದಿಮೂಡಿಗೆರೆ – ಗುಬ್ಬಿ ಬಳಿಎರಡು ಪ್ರತ್ಯೇಕ ರಸ್ತೆ ಅಪಘಾತ : ನಾಲ್ವರು ಸಾವು

ಪ್ರಕರಣ ಇತ್ಯರ್ಥಕ್ಕೆ ಪೂರ್ವಭಾವಿ ಬೈಠೆಕ್ ನಡೆಸಲಾಗಿದ್ದು, ಮೋಟರ್ ವಾಹನಗಳ ಪ್ರಕರಣಗಳು, ಎಂ ಎಂ ಆರ್ ಡಿ ಪ್ರಕರಣಗಳು, ರಾಜಿ ಆಗಬಹುದಾದಂತಹ ಪ್ರಕರಣಗಳು ಮತ್ತು ಚಕ್ ಬೌನ್ಸ್ ಪ್ರಕರಣಗಳನ್ನು ರಾಜಿಗೆ ತೆಗೆದು ಕೊಂಡು ಆಯಾ ನ್ಯಾಯಾಲಯಗಳಲ್ಲಿ ಜನತಾ ನ್ಯಾಯಾಲಯಗಳ ಮೂಲಕ ಪ್ರಕರಣಗಳನ್ನು ಇತ್ಯರ್ಥಗೊಳಿಸಲು ಪ್ರಯತ್ನ ಮಾಡಲಾಗುವುದು ಎಂದರು.

ಕಳೆದ ಮಾರ್ಚ್ 12 ರಂದು ನಡೆದ ಲೋಕ್ ಅದಾಲತ್ ನಲ್ಲಿ 13059 ಕ್ಕೂ ಹೆಚ್ಚು ಪ್ರಕರಣಗಳನ್ನು ಇತ್ಯರ್ಥಗಳಿಸಲಾಗಿದೆ ಎಂದು ತಿಳಿಸಿದ್ದಾರೆ.

error: Content is protected !!