ಕನ್ನಡ ಕಿರುತೆರೆಯ ನಟ ಮಂಡ್ಯ ರವಿ ಪ್ರಸಾದ್ (43) ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ಸಾಹಿತಿ ಡಾ ಎಚ್ ಎಸ್ ಮುದ್ದೇಗೌಡರ ಪುತ್ರರಾದ ರವಿ. ಪ್ರಸಾದ್ , ತಂದೆ – ತಾಯಿ ಪಾಪಚ್ಚಿ , ಇಬ್ಬರು ತಂಗಿಯರು, ಪತ್ನಿ ಮಗ ಸೇರಿದಂತೆ ಬಂಧು ಬಳಗ , ಗೆಳೆಯರನ್ನು ಅಗಲಿದ್ದಾರೆ.
ಮಂಡ್ಯದ ಗೆಳೆಯರ ಬಳಗ ಹಾಗೂ ಜನದನಿ ರಂಗಭೂಮಿ ತಂಡ ಮೂಲಕ ಕಲೆಯ ಗೀಳು ಅಂಟಿಸಿಕೊಂಡ
ರವಿ ಪ್ರಸಾದ್ ಎಂ. ಧಾರಾವಾಹಿ ಮತ್ತು ಸಿನಿಮಾಗಳಲ್ಲಿ ನಟಿಸುತ್ತಲೇ ಮಂಡ್ಯ ರವಿ ಆಗಿ ಫೇಮಸ್ ಆದವರು. ಇದನ್ನು ಓದಿ – ನಾನು ಭ್ರಷ್ಟಾಚಾರಿ ಅಲ್ಲ: ಮೇಲುಕೋಟೆ ದೇವರ ಎದುರು ಆಣೆ ಮಾಡಲು ಸಿದ್ದ – ಸಂಸದೆ ಸಮಲತಾ ಸವಾಲು
ರವಿ ಬಾಲ್ಯದಿಂದಲೇ ನಾಟಕಗಳಲ್ಲಿ ಅಭಿನಯಿಸಿದ್ದರು ನಂತರ ಬಣ್ಣದ ಲೋಕದತ್ತ ಒಲವು ಬೆಳೆಸಿಕೊಂಡವರು. ಎಂಎ (ಇಂಗ್ಲಿಷ್ )ಮತ್ತು ಎಲ್‍ಎಲ್‍ಬಿ ಮಾಡಿದ್ದರೂ, ಆಯ್ಕೆ ಮಾಡಿಕೊಂಡ ವೃತ್ತಿ ಮಾತ್ರ ನಟನೆ.
1996ರಲ್ಲಿ ಜನದನಿ ಹವ್ಯಾಸಿ ನಾಟಕ ತಂಡ ಸೇರಿ, ಅಲ್ಲಿಂದ ಟಿ.ಎಸ್. ನಾಗಾಭರಣ ನಿರ್ದೇಶನದ ‘ಮಹಾಮಾಯಿ’ ಧಾರಾವಾಹಿಯಲ್ಲಿ ನಟಿಸುವ ಮೂಲಕ ಕಿರುತೆರೆ ಜಗತ್ತಿಗೆ ಕಾಲಿಟ್ಟರು,ಅನೇಕ ಧಾರಾವಾಹಿಗಳಲ್ಲಿ ರವಿ ನಟಿಸಿದ್ದರು, ಮೊದಲು ಬ್ರೇಕ್ ನೀಡಿದ ಧಾರಾವಾಹಿ ಮಿಂಚು, ನಂತರ ಮುಕ್ತಮುಕ್ತ, ಚಿತ್ರಲೇಖ, ಯಶೋಧೆ, ವರಲಕ್ಷ್ಮಿ ಸ್ಟೋರ್ಸ್ ಸೇರಿದಂತೆ ಸಾಕಷ್ಟು ಸೀರಿಯಲ್ ಗಳಲ್ಲಿ ನಟಿಸಿದ್ದಾರೆ. ಇದನ್ನು ಓದಿ – ಬೆಂಗಳೂರಿನಲ್ಲಿ ಮಹಿಳೆ ಸೇರಿ 7 ಮಂದಿ ಪೆಡ್ಲರ್ ಬಂಧನ :5 ಕೋಟಿ ರು.ಮೌಲ್ಯದ ಮಾದಕ ವಸ್ತು ವಶ
ಕೆಲ ವರ್ಷಗಳ ಹಿಂದೆ ಪ್ರಸಾರವಾದ ಮಗಳು ಜಾನಕಿ ಧಾರಾವಾಹಿಯ ಚಂದು ಭಾರ್ಗಿ ಪಾತ್ರದ ಮೂಲಕ ರವಿ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿದ್ದರು. ಅಲ್ಲದೇ, ಕಾಫಿತೋಟ ಸೇರಿದಂತೆ ಹಲವು ಸಿನಿಮಾಗಳಲ್ಲೂ ಇವರು ನಟಿಸಿದ್ದಾರೆ.
ರವಿ ನಿಧನಕ್ಕೆ ಕರ್ನಾಟಕ ಟೆಲಿವಿಷನ್ ಅಸೋಷಿಯೇಷನ್ ಅಧ್ಯಕ್ಷರಾದ ಎಸ್.ವಿ. ಶಿವಕುಮಾರ್ ಸೇರಿದಂತೆ ಟೆಲಿವಿಷನ್ ಉದ್ಯಮದ ಅನೇಕ ಗಣ್ಯರು ಸಂತಾಪ ವ್ಯಕ್ತ ಪಡಿಸಿದ್ದಾರೆ. ಇದನ್ನು ಓದಿ – ಮುರುಘಾ ಸ್ವಾಮಿ ನ್ಯಾಯಾಂಗ ಬಂಧನ ಸೆ.27ರ ತನಕ ವಿಸ್ತರಣೆ
ನಟ ರವಿ ಅವರ ಪಾರ್ಥಿವ ಶರೀರ ಈ ರಾತ್ರಿ ವೇಳೆಗೆ ಮಂಡ್ಯ ತಲುಪಲಿದೆ,ಕಲ್ಲಹಳ್ಳಿ ಬಳಿ ಇರುವ ನಾಲ್ವಡಿ ಕೃಷ್ಣರಾಜ ಒಡೆಯರ ಬಡಾವಣೆಯಲ್ಲಿರುವ ಮುದ್ದೇಗೌಡರ ಮನೆಯಲ್ಲಿ ಅಂತಿಮ ದರ್ಶನಕ್ಕಾಗಿ ವ್ಯವಸ್ಥೆ ಮಾಡಲಾಗಿದೆ, ನಾಳೆ ಮಧ್ಯಾಹ್ನ 1 ಘಂಟೆಗೆ ಕಲ್ಲಹಳ್ಳಿ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೇರವೇರುವುದು.
More Stories
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಐದು ಷರತ್ತು
ಮಂಡ್ಯ : ಲಾರಿಗೆ ಕಾರು ಡಿಕ್ಕಿ – ನೆಲಮಂಗಲದ ನಾಲ್ವರು ಸಾವು
ಪಿಯು ಕಾಲೇಜು 4055 ಅತಿಥಿ ಉಪನ್ಯಾಸಕರ ನೇಮಕಾತಿಗೆ ಸಮ್ಮತಿ