ಸರ್ ಎಂ ವಿಶ್ವೇಶ್ವರಯ್ಯ (Sir M Vishweshwaraiah)

Team Newsnap
4 Min Read

ಭಾರತ ದೇಶದ ಪವಿತ್ರ ಭೂಮಿಯಲ್ಲಿ ಜನಿಸಿದ ಪುಣ್ಯ ಪುರುಷರಲ್ಲಿ ಕನ್ನಡ ನಾಡಿನ ಕೀರ್ತಿ ಪತಾಕೆಯನ್ನು ವಿಶ್ವದ ಮಟ್ಟದಲ್ಲಿ ಎತ್ತಿ ಹಿಡಿದ ಮಹಾನ್ ಮೇಧಾವಿ, ತಂತ್ರಜ್ಞ, ಅಮರ ವಾಸ್ತು ಶಿಲ್ಪಿ, ಭಾರತದ ಭಾಗ್ಯವಿಧಾತ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ ನವರ ಜನ್ಮ ದಿನ ಸೆಪ್ಟೆಂಬರ್ 15. 1860.

ಭಾರತ ನಿರ್ಮಾಣದಲ್ಲಿ ಅವರ ಕೊಡುಗೆಯನ್ನು ಪರಿಗಣಿಸಿ, ಅವರಿಗೆ 1955 ರಲ್ಲಿ ದೇಶದ ಅತ್ಯುನ್ನತ ಗೌರವ ‘ಭಾರತ ರತ್ನ’ ನೀಡಿ ಗೌರವಿಸಲಾಯಿತು. ಅವರ ಜನ್ಮದಿನವನ್ನು ಭಾರತದಲ್ಲಿ ಇಂಜಿನಿಯರ್ ದಿನವನ್ನಾಗಿ ಆಚರಿಸಲಾಗುತ್ತದೆ.

ಭಾರತವು ಇದುವರೆಗೆ ನಿರ್ಮಿಸಿದ ಅತ್ಯಂತ ಶ್ರೇಷ್ಠ ಇಂಜಿನಿಯರ್‌ಗಳಲ್ಲಿ ಒಬ್ಬರಾದ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ, ಎಂ. ವಿಶ್ವೇಶ್ವರಯ್ಯ ಎಂದು ಪ್ರಸಿದ್ಧರಾಗಿದ್ದರು, ಅವರು ಉನ್ನತ ತತ್ವಗಳು ಮತ್ತು ಶಿಸ್ತಿನ ವ್ಯಕ್ತಿಯಾಗಿದ್ದರು.

ಈ ಬಾರಿ ದಸರೆಗೆ ಪುಟಾಣಿ ಆನೆ ಸೇರಿ 15 ಆನೆಗಳು ಭಾಗಿ:. ದಸರಾ ಕಾರ್ಯಕ್ರಮದ ವಿವರ

ಬಾಲ್ಯ ವಿದ್ಯಾಭ್ಯಾಸ :-

  ಹಿರಿಯ ಚೇತನ ಸರ್.ಎಂ. ವಿಶ್ವೇಶ್ವರಯ್ಯ 1861 ಸೆಪ್ಟೆಂಬರ್ 15 ರಂದು ಕೋಲಾರ ಜಿಲ್ಲೆ ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಯ ಸುಸಂಸ್ಕøತ ಮನೆತನವಾದ ಮಲಕನಾಡು ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ತಂದೆ ಶ್ರೀನಿವಾಸಶಾಸ್ತ್ರಿ, ತಾಯಿ ವೆಂಕಾಜಮ್ಮ.

ಪ್ರಾರಂಭದ ವಿದ್ಯಾಭ್ಯಾಸ ಚಿಕ್ಕಬಳ್ಳಾಪುರದಲ್ಲೇ ನಡೆಯಿತು. ಹೈಯರ್ ಸೆಕೆಂಡರಿ ಮುಗಿಸಿದ ನಂತರ ಬೆಂಗಳೂರಿನ ಸೆಂಟ್ರಲ್ ಕಾಲೇಜಿಗೆ ಸೇರಿ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಮೈಸೂರು ರಾಜ್ಯದಲ್ಲಿ ಅತಿ ಹೆಚ್ಚು ಅಂಕ ಪಡೆದರು, ಮುಂದೆ ಮದರಾಸು ವಿಶ್ವವಿದ್ಯಾಲಯದ ಬಿ.ಎ., ಪರೀಕ್ಷೆಯಲ್ಲಿ ಪ್ರಥಮ ದರ್ಜೆ ತೇರ್ಗಡೆ ಹೊಂದಿ, ಪುಣೆ ವಿಜ್ಞಾನ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಪೂರೈಸಿ, ಮುಂಬೈ ಪ್ರಾಂತ್ಯಕ್ಕೆ ಪ್ರಥಮ ಸ್ಥಾನ ಪಡೆದರು.

ವೃತ್ತಿ ಜೀವನ:
 1884 ರಲ್ಲಿ ಉದ್ಯೋಗಕ್ಕೆ ಸೇರಿದ ಸರ್.ಎಂ.ವಿ. ಮುಂಬೈ ಪ್ರಾಂತ್ಯದ ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಅಭಿಯಂತರರಾಗಿ ನಂತರ 1907 ರಲ್ಲಿ ಸೂಪರಿಂಟೆಂಡಿಂಗ್ ಇಂಜಿನಿಯರ್ ಆದರು, ನಂತರ 1908 ಮುಖ್ಯ ಇಂಜಿನಿಯರ್ ಆಗುವ ಎಲ್ಲಾ ಅರ್ಹತೆಗಳು ಅವರಲ್ಲಿದ್ದವು. ಆ ಹುದ್ದೆ ಆಕಾಲದಲ್ಲಿ ಬ್ರಿಟಿಷರಿಗಷ್ಟೇ ಮೀಸಲಾಗಿತ್ತು. ಮಹಾ ಸ್ವಾಭಿಮಾನಿಯಾಗಿದ್ದ ವಿಶ್ವೇಶ್ವರಯ್ಯನವರು 1908 ರಲ್ಲಿ ಸೂಪರಿಂಟೆಂಡಿಂಗ್ ಇಂಜಿನಿಯರ್ ಹುದ್ದೆಯಿಂದ ಸ್ವಯಂ ನಿವೃತ್ತಿ ಪಡೆದರು. ನಂತರ ಅವರು ನಡೆದ ದಾರಿ, ಮಾಡಿದ ಸಾಧನೆ ಏರಿದ ಎತ್ತರ ಎಲ್ಲವು ಒಂದು ಯಶೋಗಾಥೆಯೇ.

vish2

ಸಾಧನೆಯ ಮಹಾಪೂರ :

 ದಿವಾನರಾಗಿದ್ದ ದಿನಗಳಲ್ಲಿ ಸ್ಥಾಪಿಸಿದ ಪ್ರತಿಯೊಂದು ಸಂಸ್ಥೆಯ ಉದ್ಯಮವು ಇಂದು ಹೆಮ್ಮರದಂತೆ ಬೆಳೆದು ನಾಡಿನ ಹೆಮ್ಮೆಯ ಪ್ರತೀಕವೆನಿಸಿದೆ. (1) ಶಿವನ ಸಮುದ್ರದಲ್ಲಿ ವಿದ್ಯುತ್ ಉತ್ಪಾದನೆ ಆರಂಭ, (2) ಹೆಬ್ಬಾಳದಲ್ಲಿ ಕೃಷಿ ಶಾಲೆ, (3) ಮೈಸೂರು ಬ್ಯಾಂಕ್, (4) ಬೆಂಗಳೂರಿನಲ್ಲಿ ಮೆಕ್ಯಾನಿಕಲ್ ತಾಂತ್ರಿಕ ಶಾಲೆ, (5) ಮೈಸೂರು ವಿಶ್ವವಿದ್ಯಾಲಯ, (6) ಕನ್ನಡ ಸಾಹಿತ್ಯ ಪರಿಷತ್, (7) ಬೆಂಗಳೂರು ಮುದ್ರಣಾಲಯ, ಪುರಸಭೆ (8) ರೇಷ್ಮೆ, ಸಾಬೂನು, ಗಂಧದ ಎಣ್ಣೆ ಮತ್ತು ಚರ್ಮೋದ್ಯಮಗಳ ಪ್ರಾರಂಭ, (9) ಭದ್ರಾವತಿ ಉಕ್ಕಿನ ಕಾರ್ಖಾನೆ, (10) ಶ್ರೀಜಯಚಾಮರಾಜೇಂದ್ರ ತಾಂತ್ರಿಕ ಶಾಲೆ, (11) ಛೇಂಬರ್ ಆಫ್ ಕಾಮರ್ಸ್, ಸೆಂಚುರಿ ಕ್ಲಬ್, ವಿಶ್ವೇಶ್ವರಯ್ಯನವರ 6 ವರ್ಷಾವಧಿಯ ಸೇವೆಗೆ ಸಲ್ಲಬೇಕಾಗಿದ್ದ ಒಟ್ಟು ಮೊತ್ತ 2.00 ಲಕ್ಷ ಆ ಹಣದಲ್ಲಿ ಬಿಡಿಗಾಸನ್ನೂ ಪಡೆಯಲಿಲ್ಲ. ತತ್ಪಲವಾಗಿ 1929ರಲ್ಲಿ ಬೆಂಗಳೂರು ನಗರದ ಕೆ.ಆರ್. ವೃತ್ತದಲ್ಲಿ ಶ್ರೀ ಜಯಚಾಮರಾಜೇಂದ್ರ ಪಾಲಿಟೆಕ್ನಿಕ್ ಸಂಸ್ಥೆ ಸ್ಥಾಪಿಸಿದರು.

vish3

ಕೃಷ್ಣರಾಜಸಾಗರ ಜಲಾಶಯ :

ಸರ್.ಎಂ.ವಿ. ರವರ ಮೇರು ಸದೃಶ ಕಾರ್ಯ, ಇಂದು ಲಕ್ಷಾಂತರ ಎಕರೆ ಕೃಷಿ ಭೂಮಿಗೆ ನೀರುಣಿಸಬಲ್ಲ, ಲಕ್ಷಾಂತರ ಕುಟುಂಬಗಳ ಜೀವನಾಡಿಯೆನಿಸಿದ ಕಾವೇರಿ ನದಿಯ ನೀರನ್ನು ಮೈಸೂರು, ಮಂಡ್ಯ ಜಿಲ್ಲೆಗಳ ರೈತರ ಸದ್ವಿನಿಯೋಗಕ್ಕಾಗಿ ರೂಪಿಸಿದ್ದು 1911ರ ಬೃಹತ್ ಯೋಜನೆ ಇದು ಪೂರ್ಣಗೊಂಡಿದ್ದು 1931ರಲ್ಲಿ. ಸಿಮೆಂಟು ಕಬ್ಬಿಣಕ್ಕೆ ಬದಲಾಗಿ ಕೇವಲ ಸುಣ್ಣ ಮತ್ತು ಬೆಲ್ಲ ಅರೆದು ತಯಾರಿಸಿದ ಸುರ್ಕಿಗಾರೆಯಿಂದ ಈ ಅಣೆಕಟ್ಟನ್ನು ನಿರ್ಮಿಸಲಾಯಿತು. ಈ ಅಣೆಕಟ್ಟನ್ನು ಅಪಾಯದಿಂದ ರಕ್ಷಿಸುವುದಕ್ಕಾಗಿ 163 ಕವಾಟಗಳುಳ್ಳ ತೂಬುಗಳ ಮೂಲಕ ನೀರನ್ನು ಹೊರಬಿಡುವ ವ್ಯವಸ್ಥೆ ಕೂಡ ಮಾಡಿದ್ದರು.

ಇಂದು ನಾವು ಮೈಸೂರು, ಮಂಡ್ಯ ಭಾಗಗಳಲ್ಲಿ ಹಸಿರು ನಳನಳಿಸುವುದನ್ನು ನೋಡುತ್ತಿದ್ದೇವೆ. ಆ ಭಾಗದ ರೈತರು ಸಾಮಾಜಿಕವಾಗಿ, ಆರ್ಥಿಕವಾಗಿ ಸಾಕಷ್ಟು ಮುಂದುವರಿದಿದ್ದಾರೆ. ಅದಕ್ಕೆ ಕಾರಣರಾದ ಸರ್.ಎಂ.ವಿ. ಪ್ರಾತಃಸ್ಮರಣೀಯರು.

ಇದಲ್ಲದೆ ಶರಾವತಿ ಜಲವಿದ್ಯುತ್ ಯೋಜನೆ, 1913 ರಲ್ಲಿ ಮೈಸೂರಿಗೆ ರೈಲು ಮಾರ್ಗ ಯೋಜನೆ ಹೀಗೆ ಹಲವಾರು. ಸರ್.ಎಂ.ವಿ. ಬಗ್ಗೆ ನಮ್ಮ ದೇಶದ ಅಗ್ರಗಣ್ಯ ಕೈಗಾರಿಕೋದ್ಯಮಿ ಜೆ.ಆರ್.ಡಿ. ಟಾಟಾ ಅವರಿಗೂ ವಿಶೇಷ ಗೌರವ. ಟಾಟಾರವರು ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ಆಡಳಿತ ಮಂಡಳಿಗೆ ಎಂ.ವಿ. ರವರನ್ನು ನಿರ್ದೇಶಕರನ್ನಾಗಿ ನೇಮಿಸಿಕೊಂಡರು.

vish 1

ಪ್ರಶಸ್ತಿ ಪುರಸ್ಕಾರಗಳು :

1883 ರಲ್ಲಿ ಜೇಮ್ಸ್ ಬರ್ಕಲೇ ಪ್ರಶಸ್ತಿ, 1904 ಲಂಡನ್ ಸಿವಿಲ್ ಇಂಜಿನಿಯರಿಂಗ್ ಸಂಸ್ಥೆಯ ಗೌರವ ಸದಸ್ಯತ್ವ, ಏಡನ್ ನಗರದ ನೀರು ಸರಬರಾಜು ವ್ಯವಸ್ಥೆ ರೂಪಿಸಿಕೊಟ್ಟ ಸಲುವಾಗಿ ಕೈಸರ್-ಎ-ಹಿಂದ್ ಪ್ರಶಸ್ತಿ. 1911 ರಲ್ಲಿ ದೆಹಲಿ ದರ್ಬಾರ್‍ನಿಂದ ಕಂಪೇನಿಯನ್ ಆಫ್ ಇಂಡಿಯನ್ ಎಂಪೈರ್ ಪ್ರಶಸ್ತಿ, 1921 ಕಲ್ಕತ್ತ ವಿಶ್ವವಿದ್ಯಾಲಯ ಡಾಕ್ಟರ್ ಆಫ್ ಸೈನ್ಸ್ ಪ್ರಶಸ್ತಿ, 1937 ರಲ್ಲಿ ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ ಡಾಕ್ಟರ್ ಆಫ್ ಲಿಟರೇಚರ್ ಗೌರವ. 1955 ರಂದು ಭಾರತ ಸರಕಾರ ನೀಡುವ ಅತ್ಯುನ್ನತ ನಾಗರೀಕ ಪ್ರಶಸ್ತಿಯಾದ “ಭಾರತರತ್ನ ಪ್ರಶಸ್ತಿ” ಪ್ರಧಾನ ಹೀಗೆ ಹತ್ತು ಹಲವಾರು ಉನ್ನತ ಪ್ರಶಸ್ತಿಗಳು ಅವರಿಗೆ ದೊರೆತು ಘನತೆ ಹೆಚ್ಚಿಸಿಕೊಂಡಿವೆ.

101 ವರ್ಷ ಬದುಕಿದ್ದ ಸರ್.ಎಂ.ವಿ. ತಮ್ಮ ತಂದೆಯ ಶ್ರಾದ್ಧದ ದಿನವೇ ಇಹಲೋಕ ತ್ಯಜಿಸಿದರು. ಆಂಗ್ಲ ಪತ್ರಿಕೆಯೊಂದು ಸಮೀಕ್ಷೆ ನಡೆಸಿ ಶತಮಾನದ 3 ಶ್ರೇಷ್ಠ ಭಾರತೀಯರನ್ನು ಗುರುತಿಸಿತು. ಅದರಲ್ಲಿ ಮಹಾತ್ಮ ಗಾಂಧಿ, ಗುರದೇವ ರವೀಂದ್ರನಾಥ ಟ್ಯಾಗೂರ್, ಸರ್.ಎಂ. ವಿಶ್ವೇಶ್ವರಯ್ಯ.

ನಮ್ಮ ರಾಷ್ಟ್ರದ ಸರ್ವೋಚ್ಛ ನಾಗರೀಕ ಪ್ರಶಸ್ತಿ “ಭಾರತರತ್ನ” ವನ್ನು ಪಡೆದ ಪ್ರಪಥಮ ಕನ್ನಡಿಗ. ಜನರು ಪ್ರೀತಿಯಿಂದ ಸರ್.ಎಂ.ವಿ. ಎಂದೂ ಚುಟುಕಾಗಿ ಕರೆಯುತ್ತಿದ್ದ, ವಿಶ್ವಕಂಡ ಮಹೋನ್ನತ ಸಿವಿಲ್ ಇಂಜಿನಿಯರ್ ಮತ್ತು ದಕ್ಷ ಆಡಳಿತಗಾರ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು.

Share This Article
Leave a comment